ಶುಕ್ರವಾರ, ಮೇ 7, 2021
26 °C

ಲಿಮ್ಕಾ ದಾಖಲೆಯತ್ತ ಶುಭನ್ ಹಣಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಶುಭನ್ ಹಣಬರ ಅವರು ಇಂಡಿಕಾ ಕಾರು ಮತ್ತು 190 ಎಮ್.ಎಮ್.ಕಬ್ಬಿಣದ ಬಾರ್ ಕೆಳಗಿನಿಂದ ಹಾದು ಬರುವ ಲಿಂಬೋ ಸ್ಕೇಟಿಂಗ್ ಪ್ರದರ್ಶಿಸಿ ಲಿಮ್ಕಾ ಬುಕ್‌ಗೆ ಸೇರ್ಪಡೆಗೆ ನಡೆದ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾದರು.ಇದೇ ಸಂದರ್ಭದಲ್ಲಿ ಬಾಲಕ ಶುಭನ್ ಸ್ಕೇಟಿಂಗ್ ರಿಂಗ್‌ನಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು. ಜೋಯಿಡಾ ತಾಲ್ಲೂಕಿನ ಜಗಲಬೇಟದ ನಿವಾಸಿ, ಕೈಗಾ ಕೇಂದ್ರೀಯ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿ ಶುಭನ್ 800 ಮೀಟರ್ ಲಿಂಬೋ ಸ್ಕೇಟಿಂಗ್ ಪ್ರದರ್ಶಿಸಿದರು. ಶುಭನ್ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಲು ತಂದೆ ದಿಲೀಪ ಹಣಬರ್  ಪ್ರತಿನಿತ್ಯ 4 ಗಂಟೆಗಳ ಕಾಲ ತರಬೇತಿ ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.