ಸೋಮವಾರ, ಮಾರ್ಚ್ 8, 2021
31 °C
ಕಲಿಯೋಣ ಬನ್ನಿ

ಲೀನಕ್ಸ್ ಕಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೀನಕ್ಸ್ ಕಲಿಕೆ

ಜಗತ್ತಿನ ಶೇಕಡಾ 94ರಷ್ಟು ಸೂಪರ್ ಕಂಪ್ಯೂಟರ್‌ಗಳ ಆಪರೇಟಿಂಗ್ ಸಿಸ್ಟಂ ಯಾವುದು? ಅದು ಮೈಕ್ರೋಸಾಫ್ಟ್‌ನ ವಿಂಡೋಸ್ ಅಲ್ಲ. ಆಪಲ್ ಮ್ಯಾಕಿಂಟೋಶ್ ಬಳಸುವ ಆಪರೇಟಿಂಗ್ ಸಿಸ್ಟಂ ಅಲ್ಲ.ಅದು ಲೀನಕ್ಸ್ ಎಂಬ ಮುಕ್ತ ಮತ್ತು ಸ್ವತಂತ್ರ ಆಪರೇಟಿಂಗ್ ಸಿಸ್ಟಂ. ಇದನ್ನು ತಂತ್ರಜ್ಞರ ಸಮುದಾಯವೊಂದು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿದೆಯೇ ಹೊರತು ಇದು ಯಾರದೇ ಮಾಲೀಕತ್ವದ ತಂತ್ರಾಂಶವಲ್ಲ. ಸಾಮಾನ್ಯರು ಲೀನಕ್ಸ್ ಬಳಕೆಯಲ್ಲಿ ಹಿಂದುಳಿದಿದ್ದರೂ ತಂತ್ರಜ್ಞರ ವಲಯದಲ್ಲಿ ಇದು ಭಾರೀ ಜನಪ್ರಿಯ.ತಂತ್ರಾಂಶಗಳ ಉತ್ಪಾದಕರು, ಇಂಟರ್ನೆಟ್ ಸರ್ವರ್‌ಗಳೆಲ್ಲವೂ ನಡೆಯುವುದು ಈ ತಂತ್ರಾಂಶದ ಮೇಲೆಯೇ. ಇನ್ನು ಮೊಬೈಲ್ ಫೋನ್‌ಗಳ ಕ್ಷೇತ್ರಕ್ಕೆ ಬಂದರೆ ಲೀನಕ್ಸ್ ಬಹಳ ಜನಪ್ರಿಯ. ಸಾಮಾನ್ಯರು ಮತ್ತು ತಂತ್ರಜ್ಞರೆಲ್ಲರಿಗೂ ಇದು ಪ್ರಿಯ. ಗೂಗಲ್ ನೇತೃತ್ವದ ತಂತ್ರಜ್ಞರ ಬಳಗ ನಿರ್ವಹಿಸುತ್ತಿರುವ ‘ಆಂಡ್ರಾಯ್ಡ್’ ತಂತ್ರಾಂಶ ಕೂಡ ಲೀನಕ್ಸ್‌ನ ಒಂದು ಬಗೆಯ ವಿತರಣೆ.ಅಷ್ಟೇ ಅಲ್ಲ ಕಂಪ್ಯೂಟರ್ ಕ್ಷೇತ್ರದಲ್ಲಿ ಉದ್ಯೋಗವನ್ನು ನಿರೀಕ್ಷಿಸುವವರಿಗೆ ಈ ತಂತ್ರಾಂಶದ ಕುರಿತ ಅರಿವು ಇರಲೇಬೇಕೆಂಬ ಅನಿವಾರ್ಯತೆ ಈಗ ಇದೆ. ವಿಂಡೋಸ್ ಅಥವಾ ಮ್ಯಾಕ್ ಓಎಸ್‌ನಂತೆಯೇ ಇದನ್ನು ಬಳಸುತ್ತಲೇ ಕಲಿಯಬಹುದು. ಆದರೆ ಹೆಚ್ಚಿನವರು ಆ ಧೈರ್ಯ ಮಾಡುವುದಿಲ್ಲ. ಅಂಥವರಿಗಾಗಿ ಲೀನಕ್ಸ್ ಫೌಂಡೇಶನ್ ಒಂದು ಮುಕ್ತ ಕೋರ್ಸ್ ಆರಂಭಿಸಿದೆ.ನಿಮ್ಮದೇ ವೇಗದಲ್ಲಿ ಕಲಿಯಬಹುದಾದ ಈ ಕೋರ್ಸ್‌ ಎಂಟು ವಾರಗಳ ಅವಧಿಯದ್ದು. ಇದರಲ್ಲಿ ನೀಡುವ ಎಲ್ಲಾ ಮಾಹಿತಿಗಳನ್ನು ಕರಗತಗೊಳಿಸಿಕೊಳ್ಳಲು ಸುಮಾರು 60 ಗಂಟೆಗಳ ಅಧ್ಯಯನ ಸಾಕು ಎಂದು ಈ ತನಕ ಈ ಕೋರ್ಸ್‌ನಲ್ಲಿ ತರಬೇತಿ ಪಡೆದವರು ಹೇಳುತ್ತಾರೆ.ಲೀನಕ್ಸ್ ತಂತ್ರಾಂಶವನ್ನು ಹೇಗೆ ಬಳಸಬೇಕು ಎಂಬಲ್ಲಿಂದ ಆರಂಭಿಸಿ ಅದರ ವಿವಿಧ ವಿತರಣೆಗಳ ತನಕದ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್ ಒದಗಿಸುವುದರ ಜೊತೆಗೆ ಲೀನಕ್ಸ್ ಕೌಶಲಗಳನ್ನೂ ಕಲಿಸುತ್ತದೆ. ಇದಕ್ಕೆ ಸೇರಿಕೊಳ್ಳಲು ಇಚ್ಛಿಸುವವರು ಇಲ್ಲಿರುವ ಕೊಂಡಿಯನ್ನು ಬಳಸಬಹುದು: https://goo.gl/Z0nrOZ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.