ಭಾನುವಾರ, ಮೇ 9, 2021
20 °C

ಲೇಲ್ಯಾಂಡ್‌ನ ದೋಸ್ತ್ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್, ಜಪಾನ್ ಮೂಲದ ವಾಹನ ತಯಾರಿಕೆ ಕಂಪೆನಿ ನಿಸಾನ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಳಕೆಯ ಲಘು ವಾಹನ (ಎಲ್‌ಸಿವಿ) `ದೋಸ್ತ್~ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ವಾಹನದ ಚೆನ್ನೈ ಎಕ್ಸ್ ಷೋರೂಂ ಬೆಲೆ ರೂ  3.79 ಲಕ್ಷದಿಂದ ರೂ 4.39 ಲಕ್ಷದವರೆಗೆ ಇದೆ.

`ದೇಶದಲ್ಲಿ ವಾಣಿಜ್ಯ ಬಳಕೆಯ  ಲಘು ವಾಹನದ ಅಗತ್ಯ ಸಾಕಷ್ಟಿದ್ದು,   `ದೋಸ್ತ್~ ಈ ಶ್ರೇಣಿಯ ಅಗತ್ಯಗಳನ್ನು ಪೂರೈಸಲಿದೆ. ಈ ವಾಹನ ಜಪಾನ್ ಮೂಲದ ಗುಣಮಟ್ಟವನ್ನು ದೇಶೀಯ ದರದಲ್ಲಿ ಪೂರೈಸಲಿದೆ~ ಎಂದು ಅಶೋಕ್ ಲೇಲ್ಯಾಂಡ್ ಅಧ್ಯಕ್ಷ ಧೀರಜ್ ಜಿ. ಹಿಂದೂಜಾ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.