ಮಂಗಳವಾರ, ಮೇ 17, 2022
27 °C

ಲೈಂಗಿಕ ಕಿರುಕುಳ ಆರೋಪದಲ್ಲಿ ಹುರುಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: `ಅಂದಲಗಿ ಗ್ರಾಮ ಪಂಚಾಯಿತಿ 11 ಜನ ಸದಸ್ಯರು ಅಧ್ಯಕ್ಷೆ ಸುನಂದಾ ನೆಗಳೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಕಾರಣ ಅಧ್ಯಕ್ಷರು ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದು, ಇಂತಹ ಆರೋಪದಲ್ಲಿ ಹುರುಳಿಲ್ಲ ನಾನು ನಿರಪರಾಧಿ~ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಕೆ.ಅಕ್ಕಿ ಸ್ಪಷ್ಟಪಡಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಅಧಿಕಾರದಾಸೆ ಯಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾಲಕ್ಕೂ ನನ್ನ ಅವರ ನಡುವೆ ಯಾವುದೇ ವ್ಯವ ಹಾರವಿಲ್ಲ. ಅಂದಲಗಿ ಊರು ನನ್ನದಾ ದರೂ ನಾನು ನಿತ್ಯ ಶಿಗ್ಗಾವಿಯಲ್ಲಿ ವಾಸಿ ಸುತ್ತಿದ್ದೆನೆ. ಈ ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿರುವ ಕಾರಣ ಸ್ವಲ್ಪ ತಡವಾಗಿ ವಿಷಯ ತಿಳಿಯಿತು ಎಂದರು.ಗ್ರಾಮ ಪಂಚಾಯಿತಿಯಲ್ಲಿ ನನ್ನ ಅಳಿಯ ಹಾಗು ತಮ್ಮ ಇಬ್ಬರು ಹಾಲಿ ಸದಸ್ಯರಿದ್ದು, ಅವರು ಸಹ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಹಿ ಹಾಕಿದ್ದಾರೆ. ಅದರಿಂದ ಕೋಪಿತಗೊಂಡ ಅಧ್ಯಕ್ಷೆ ಸುನಂದಾ ಈ ರೀತಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.ಈ ಹಿಂದೆ ಗ್ರಾಪಂ ಅಧ್ಯಕ್ಷರನ್ನಾಗಿ ಮಾಡುವಾಗ ಕೆಲವು ಹಿರಿಯರೊಂದಿಗೆ ನಾನು ಇದ್ದು ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಆದರೆ ಈಗ ಅಧಿಕಾರ ಕಳೆದುಕೊಳ್ಳುವ ಹತಾಶ ಮನೋಭಾವನೆಯಿಂದ ಸುನಂದಾ ಆರೋಪ ಮಾಡುತ್ತಿದ್ದಾರೆ. ಅದನ್ನು ಸಾಬೀತು ಪಡಿಸಿದಲ್ಲಿ  ಶಿಕ್ಷೆ ಅನುಭವಿ ಸಲು ಸಿದ್ದ ಎಂದು ಸ್ಪಷ್ಟಪಡಿಸಿದರು.ಸಂತೋಷಕುಮಾರ, ಶಂಕ್ರವ್ವ, ದೇವಕ್ಕಾ, ಲೋಕನಗೌಡ, ದೇವಕ್ಕಾ ಮತ್ತೂರ, ಶಶಿಕಲಾ ಕಮ್ಮಾರ, ಭೀಮಣ್ಣ, ಶಂಕರಗೌಡ, ಈರಯ್ಯ, ಭಾಸ್ಕರ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.