ಗುರುವಾರ , ಜನವರಿ 23, 2020
28 °C

ಲೈಂಗಿಕ ಕಿರುಕುಳ: ಪ್ರಾಧ್ಯಾಪಕ ನ್ಯಾಯಾಂಗ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಂಗಿಕ ಕಿರುಕುಳ: ಪ್ರಾಧ್ಯಾಪಕ ನ್ಯಾಯಾಂಗ ವಶಕ್ಕೆ

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾ­ಗದ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸಹಾಯಕ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕ ಪ್ರೊ.ದಶರಥ ನಾಯಕ ಅವರನ್ನು ಪೊಲೀಸರು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.ನ್ಯಾಯಾಧೀಶರ ಮನೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತ­ನಾಡಿದ ದಶರಥ ನಾಯಕ, ‘ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ­ವಾಗಿದೆ. ನಾನು ಸರ್ಕಾರಿ ನೌಕರ­ನಾದ್ದರಿಂದ ಅಮಾನತುಗೊಳಿಸಬಹುದು ಎಂಬ ಭಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಓಡಾಡುತ್ತಿದ್ದೆ. ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸವಿದ್ದು, ದೋಷಮುಕ್ತನಾಗಿ ಹೊರಬರುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)