ಭೋಪಾಲ (ಪಿಟಿಐ): ಮನೆಯ ಕೆಲಸಗಾರನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಮಧ್ಯ ಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್ಜೀ (79) ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

`ಭೋಪಾಲನ ಹಳೆಯ ನಗರದ ಖೋ-ಇ-ಫಿಜಾ ಪ್ರದೇಶದ ಮನೆಯೊಂದರಲ್ಲಿ ಅಡಗಿಕೊಂಡಿದ್ದ ರಾಘವ್ಜೀ ಅವರನ್ನು ಬಂಧಿಸಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ಜೈನ್ ತಿಳಿಸಿದರು.

ಹೊರಗಡೆಯಿಂದ ಬೀಗ ಹಾಕಲಾಗಿದ್ದ ಮನೆಯಲ್ಲಿ ರಾಘವ್ಜೀ ಅಡಗಿ ಕುಳಿತಿದ್ದರು. ಇದನ್ನು ಅರಿತ ಪೊಲೀಸರು ಮನೆಯ ಹಿಂದಿನ ಬಾಗಿಲ ಬಳಿ ಬಂದು ಕದ ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವೇಳೆ ಪೊಲೀಸರು ಕದವನ್ನು ಮುರಿದು ಹಾಕಿ ಒಳಗೆ ಅಡಗಿದ್ದ ರಾಘವ್ಜೀ ಅವರನ್ನು ಬಂಧಿಸಿದರು ಎಂದು ಜೈನ್ ಹೇಳಿದರು.

ಬಂಧನದ ನಂತರ ರಾಘವ್ಜೀ ಅವರನ್ನು ಕಳೆದ ಎರಡು ದಿನಗಳ ಹಿಂದೆ ಅವರ ವಿರುದ್ಧ ದೂರು ದಾಖಲಾಗಿದ್ದ ಹಬೀಬ್ಗಂಜ್ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ರಾಘವ್ಜಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ರಾಜ್ಕುಮಾರ್ ಡಾಂಗಿ ಎಂಬಾತ ರಾಘವ್ಜಿ ತನಗೆ ಸರ್ಕಾರಿ ನೌಕರಿ ಕೊಡಿಸುವ ಆಮೀಷ ಒಡ್ಡಿ ಕಳೆದ ಮೂರುವರೆ ವರ್ಷಗಳಿಂದ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿ ಹಬೀಬ್ಗಂಜ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ಸಲ್ಲಿಸಿದ್ದ. ಇದೇ ವೇಳೆ ಆತ ಆರೋಪಕ್ಕೆ ಸಂಬಂಧಿಸಿದ ಅಶ್ಲೀಲ ದೃಶ್ಯಗಳಿರುವ ಸಿಡಿಯೊಂದನ್ನು ಪೊಲೀಸರಿಗೆ ನೀಡಿದ್ದ. ಈ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ರಾಘವ್ಜಿಯಿಂದ ಶುಕ್ರವಾರ ರಾಜೀನಾಮೆ ಪಡೆದಿದ್ದರು.

ವಿದಿಶಾದಲ್ಲಿ ಭಾನುವಾರವಷ್ಟೇ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಘವ್ಜೀ ಅವರು ಅಲ್ಲಿಂದ ಕಣ್ಮರೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.