ಶನಿವಾರ, ಏಪ್ರಿಲ್ 17, 2021
27 °C

ಲೋಕಾಪುರದ ಭಾವೈಕ್ಯ ಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರದ ಶ್ರೀ ಜ್ಞಾನೇಶ್ವರ ಮಠ ಭಾವೈಕ್ಯತೆಯ ತಾಣ. ದೇವನೊಬ್ಬ ನಾಮ ಹಲವು ಎಂಬ ಮಾತಿಗೆ ಇದು ನಿದರ್ಶನ. ಇಲ್ಲಿನ ಶ್ರೀಮತ್ ಪರಮಹಂಸರು ಹಾಗೂ ಶ್ರೀ ಭುಜಂಗಸ್ವಾಮಿಗಳ ಮಠವು ಸರ್ವಧರ್ಮಿಯರಿಗೂ ಪುಣ್ಯ ಸ್ಥಾನ. ಇದು  ಹಿಂದು ಮುಸ್ಲಿಮರಿಬ್ಬರಿಗೂ ಶ್ರದ್ಧಾ ಕೇಂದ್ರ.ಶ್ರೀಮಠದಲ್ಲಿ ಯತಿ ಮಹಾತ್ಮರ ವೃಂದಾವನ, ಸೂಫಿ ಸಂತರ ಗೋರಿ, ಅದರ ಮೇಲೆಯೇ ತುಳಸಿಕಟ್ಟೆ ಇವೆಲ್ಲವನ್ನು ಕಾಣಬಹುದು. ವೈದಿಕ ಪೂಜಾ ಪದ್ಧತಿಯೊಂದಿಗೆ, ಮುಸ್ಲಿಂ ಧರ್ಮದ ಧೀನ್ ಹಾಕುವ ಮುಸ್ಲಿಂ ಪೂಜಾ ಸಂಪ್ರದಾಯ ಇಲ್ಲಿ ನಿತ್ಯ ನಡೆಯುತ್ತದೆ.ಈ ಮಠದ ಮೂಲಪುರುಷರಾದ ತಿರುಮಲ ಶ್ರೀ ಪರಮಹಂಸರು ಬ್ರಾಹ್ಮಣ ಸಂಪ್ರದಾಯದವರು, ಇವರಿಗೆ ಅನ್ಯೋನ್ಯವಾದವರು ಅಜ್ಮೀರದಿಂದ ಬಂದ ಸೂಫಿ ಸಂತ ಅಜ್ಮೀರ ಸಾಹೇಬರು. ಇವರಿಬ್ಬರ ಅಲೌಕಿಕದ ಒಡನಾಟ, ಸಂಬಂಧವೇ ಈ ಮಠಕ್ಕೆ ಭಾವೈಕ್ಯತೆಯ ತಳಹದಿ ಹಾಕಿದೆ.ಇವರ ನಂತರ ಮಠದ ಸಂತರ ಪರಂಪರೆಯಲ್ಲಿ ಬಂದ ಶ್ರೀಗುರು ಜ್ಞಾನೇಶ್ವರ ಸ್ವಾಮಿಗಳು, ಭುಜಂಗ ಸ್ವಾಮಿಗಳು, ಗುರುನಾಥ ಸ್ವಾಮಿಗಳು, ರಾಮಚಂದ್ರ ಸ್ವಾಮಿಗಳು ಮುಂತಾದವರು ಸಹ ಈ ಪರಂಪರೆ ಮುಂದುವರಿಸಿದರು.ಮಠದ ಕೇಂದ್ರ ಸ್ಥಾನದಲ್ಲಿ ಪರಮಹಂಸರ ಮತ್ತು ಪಕ್ಕದಲ್ಲಿಯೇ ಅಜ್ಮೀರ ಸಾಹೇಬರ ಸಮಾಧಿ, ಅದರ ಮೇಲೆ ತುಳಸಿಕಟ್ಟೆ ಇದೆ. ಎದುರು ಭಾಗದಲ್ಲಿ ಭುಜಂಗಸ್ವಾಮಿಗಳ ವೃಂದಾವನ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ನಾ ಹಿಂದೂ, ನಾ ಮುಸ್ಲಿಂ ಎನ್ನದೆ ವೃಂದಾವನಕ್ಕೂ ತಲೆಬಾಗುತ್ತಾರೆ, ಗೋರಿಗೂ ಶರಣೆನ್ನುತ್ತಾರೆ.ಹಾರುವರಿಗೆ ಹರನಾದಿ, ತುರುಕರಿಗೆ ಪೀರನಾದಿ

ಶೀಲವಂತರಿಗೆ ಶಿವನಾದಿ,

ಸದಾನಂದ ಸದ್ಗುರುವೆ ಮೂರು ಲೋಕದ ಕರ್ತ

ನಂಬಿದ ಭಕ್ತರನು ಕಾಯುವಾತ

ನಿಂದಕರ ಗಂಡ, ಅಜಮೀರಪುಂಡ ತಂಗಳದುಡ್ಡು ಕಟ್ಟಿದವರ ಗಂಡ

ಗುರು ತಿರುಮಲ ಪಾಚಾಕಿ ದೋಸ್ತರೋ ಧೀನ್!ಎಂಬುದು ಇಲ್ಲಿ ಮೊಳಗುವ ಭಾವೈಕ್ಯತೆಯ ಘೋಷಣೆ. ನಾಥ ಸಂಪ್ರದಾಯದೊಂದಿಗೆ ಸೂಫಿ ಸಂಪ್ರದಾಯ ಸಹ ಇಲ್ಲಿ ಅಪೂರ್ವವಾಗಿ ಮೇಳೈಸಿದೆ.ಈ ಮಠದಲ್ಲಿ ಸರ್ವಧರ್ಮಿಯರು ಸೇವೆ ಮಾಡುವುದನ್ನು ನೋಡುವುದೇ ಒಂದು ಚಂದ. ಅದೇ ಒಂದು ಧನ್ಯತಾ ಭಾವ. ಧರ್ಮದ ಹೆಸರಿನಲ್ಲಿ ಬಡಿದಾಡುವವರಿಗೊಂದು ಪಾಠ ಇಲ್ಲಿ ದೊರೆಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.