ಶುಕ್ರವಾರ, ಜನವರಿ 24, 2020
21 °C

ವಂಚನೆ: ರಾಜೀನಾಮೆಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಐಎಎನ್‌ಎಸ್‌): ವಂಚನೆ ಆರೋಪವನ್ನು ಒಪ್ಪಿ ಕೊಂಡಿರುವ ಹೊರತಾಗಿಯೂ ಭಾರತ ಮೂಲದ ಕೌನ್ಸಿಲರ್‌ ಒಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.ನಾರ್ದಮ್ಟನ್‌ಶೈರ್‌ನ ಬೋರೊ­ಕೌನ್ಸಿಲ್‌ನ ಹೆಮ್ಮಿಂಗ್‌ವೆಲ್‌ ವಾರ್ಡ್‌ನ ಕೌನ್ಸಿಲರ್‌ ಆಗಿರುವ 61 ವರ್ಷದ ಭೂಪೇಂದ್ರ ಪಟೇಲ್‌ ಎಂಬುವವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.16ರಂದು ತಪ್ಪೊಪ್ಪಿಕೊಂಡಿದ್ದರು. 2003ರಿಂದ ಹೆಮ್ಮಿಂಗ್‌ವೆಲ್‌ ವಾರ್ಡನ್ನು ಪ್ರತಿನಿಧಿಸುತ್ತಿರುವ ಪಟೇಲ್‌, 2011–12ರ ಅವಧಿಗೆ ಇದೇ ಕೌನ್ಸಿಲ್‌ನ ಮೇಯರ್‌ ಆಗಿದ್ದರು.

 

ಪ್ರತಿಕ್ರಿಯಿಸಿ (+)