ಮೈಸೂರು:`ವಚನಕಾರರಿಗೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ~ ಎಂದು ವಿಮರ್ಶಕ ಡಾ.ಟಿ.ಸುಬ್ರಹ್ಮಣ್ಯಂ ಭಾನುವಾರ ಹೇಳಿದರು.

ನಗರದ ರಾಜೇಂದ್ರ ಭವನದಲ್ಲಿ ಭಾನುವಾರ ನಡೆದ ಪ್ರೊ.ಎ.ಎಸ್. ಜಯರಾಂ ಅವರ ಸಮಗ್ರ 4 ಕೃತಿಗಳ ನೋಟ ಮತ್ತು ಮರುನೋಟ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು.

`ಧರ್ಮದ ಒಳಗೆ ಬರೆದರೆ ಲೇಖಕನನ್ನು ಜಾತಿ ಹಿಡಿದು ವಿಂಗಡಣೆ ಮಾಡುವುದಿಲ್ಲ. ಆದರೆ ಧರ್ಮ ಬಿಟ್ಟು ಬರೆದರೆ ದಲಿತ, ಶೂದ್ರ ಎಂದು ಗುರುತಿಸಲಾಗುತ್ತದೆ. ವಚನಕಾರರಿಗೆ ಧರ್ಮದ ಹೆಸರಿನಲ್ಲಿ ಗುರುತಿಸುವ ಅವಶ್ಯಕತೆ ಇದೆಯೇ?~ ಎಂದು ಪ್ರಶ್ನಿಸಿದರು.

`ಕನ್ನಡ ಸಾಹಿತ್ಯ ಲೋಕದಲ್ಲಿ ಮಹಾನ್ ಸಾಹಿತಿ ಎನಿಸಿಕೊಂಡಿರುವ ಕುವೆಂಪು ಅವರ ಕೃತಿಯನ್ನು ವಿಮರ್ಶೆ ಮಾಡಿದ ಎಂಟೆದೆ ಭಂಟ ಜಯರಾಂ ಅವರು. ಗಂಭೀರ ಸ್ವಭಾವದವರರಾದ ಇವರ ಬರವಣಿಗೆಯಲ್ಲಿ ಸಾಮಾಜಿಕ ಪ್ರಜ್ಞೆ, ಐತಿಹಾಸಿಕ ಹಿನ್ನೆಲೆ ಮತ್ತು ಸ್ವಾರಸ್ಯಕರ ವಿಚಾರಗಳು ಅಡಗಿ ರುತ್ತವೆ. ಅವರ ಕೃತಿಗಳನ್ನು ಹೆಚ್ಚು ಓದುತ್ತಾ ಅವರು ನನಗೆ ಬಹಳ ಹತ್ತಿರವಾಗಿದ್ದಾರೆ~ ಎಂದು ತಿಳಿಸಿದರು.

`ಅವರ ಸಮಗ್ರ ಕೃತಿಗಳ ನೋಟ ಮತ್ತು ಮರುನೋಟ ಸಂಪುಟಗಳು 1958 ಪುಟಗಳನ್ನು ಒಳಗೊಂಡಿವೆ. ಕೃತಿ ಕುರಿತು ವಿಮರ್ಶಿಸಲು ನಾಲ್ಕು ಸಂಪುಟಗಳನ್ನು ಓದಿ ದೋಷಗಳನ್ನು ಹುಡುಕಿ ಅವರ ಬೆವರು ಇಳಿಸಲು ನಿರ್ಧರಿಸಿದೆ. ಆದರೆ ಕೃತಿಗಳಲ್ಲಿ ಯಾವ ದೋಷಗಳು ಕಾಣಲಿಲ್ಲ. ಜಯರಾಂ ಅವರು ಗಂಭೀರ ವ್ಯಕ್ತಿತ್ವ, ಸೃಜನಶೀಲ ಬರಹಗಾರರು ಎಂಬುದಕ್ಕೆ ಇದೇ ಸಾಕ್ಷಿ~ ಎಂದು ಬಣ್ಣಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೇಖಕ ಜಯರಾಂ ಉಪಸ್ಥಿತರಿದ್ದರು. ಮಹಾರಾಜ ಕಾಲೇಜು ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.