ಗುರುವಾರ , ಮೇ 6, 2021
32 °C

ವಜಾಗೊಂಡ ಐಎಎಫ್ ಮಹಿಳಾ ಅಧಿಕಾರಿ ಅಂಜಲಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್(ಪಿಟಿಐ): ಅಶಿಸ್ತು, ಅವಿಧೇಯತೆ, ಸುಳ್ಳು ಆರೋಪ ಹಾಗೂ ಹಣ ದುರುಪಯೋಗ ಆರೋಪಗಳಿಂದ ಕೋರ್ಟ್ ಮಾರ್ಷಲ್‌ಗೆ ಒಳಗಾಗಿ ವಜಾಗೊಂಡಿದ್ದ ಭಾರತೀಯ ವಾಯುದಳದ ಮೊದಲ ಮಹಿಳಾ ಅಧಿಕಾರಿ ಅಂಜಲಿ ಗುಪ್ತ ಸೋಮವಾರ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಲ್ಲಿನ ರೋಹಿತ್ ನಗರದಲ್ಲಿರುವ ತಮ್ಮ ಸಂಬಂಧಿಯ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಂಜಲಿ, ತಮ್ಮ ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು 2006ರಲ್ಲಿ ಆರೋಪಿಸಿದ್ದರು. ತನಿಖೆಯ ನಂತರ ಅವರು ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ಸಾಬೀತಾಯಿತು. ಅಶಿಸ್ತು, ಅವಿಧೇಯತೆ ಹಾಗೂ ಹಣಕಾಸು ದುರುಪಯೋಗದ ಆರೋಪವೂ ಅವರ ಮೇಲಿತ್ತು. ನಂತರ ಅವರನ್ನು ಕೋರ್ಟ್ ಮಾರ್ಷಲ್ ಶಿಕ್ಷೆಗೆ ಒಳಪಡಿಸಿ, ಸೇವೆಯಿಂದ ವಜಾ ಮಾಡಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.