ಗುರುವಾರ , ಮೇ 13, 2021
39 °C

ವಜ್ರ ಇನ್ನು ಕೈಗೆಟುಕುವ ದರದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಜ್ರ ಖರೀದಿಸುವುದು ಕನಸಿನ ಸಂಗತಿ ಎಂಬುದು ಹಲವರ ಅಭಿಪ್ರಾಯ. ಆದರೆ ಇನ್ನು ಮುಂದೆ ಸಾಮಾನ್ಯ ಜನರಿಗೂ ವಜ್ರಾಭರಣಗಳು ಕೈಗೆಟುಕುವ ದರದಲ್ಲಿ ದೊರೆಯಲಿದೆ.

ಗುಣಮಟ್ಟಕ್ಕೆ ಹೆಸರಾಗಿರುವ ತನಿಷ್ಕ್ ವಜ್ರಾಭರಣದ ಹೊಸ ಸರಣಿಯನ್ನು ಗ್ರಾಹಕರಿಗೆ ಪರಿಚಯಿಸಿದೆ.ಸುಮಾರು 10,000 ರೂನಿಂದ  25,000 ರೂ. ದರದಲ್ಲಿ ವಜ್ರದ ಕಿವಿಯೋಲೆ, ಉಂಗುರ ಮತ್ತು ಪದಕಗಳು ದೊರೆಯಲಿವೆ. ದೇಶದ ಎಲ್ಲಾ ತನಿಷ್ಕ್ ಮಳಿಗೆಗಳಲ್ಲಿ ಈ ವಜ್ರಾಭರಣಗಳು ಲಭ್ಯವಾಗಲಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಧ ವಿಧ ವಿನ್ಯಾಸಗಳ ಆಯ್ಕೆಯೂ ಇವೆ.ವಜ್ರ ಖರೀದಿಸುವ ಗ್ರಾಹಕರು ಹೆಚ್ಚುತ್ತಿದ್ದಾರೆ. ಗ್ರಾಹಕರ ಆದ್ಯತೆಗೆ ತಕ್ಕಂತೆ ಕಡಿಮೆ ದರದಲ್ಲಿ ಗುಣಮಟ್ಟದ  ವಜ್ರಾಭರಣಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಎಂದರು ತನಿಷ್ಕ್ ರೀಟೇಲ್ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ.ಇನ್ನಷ್ಟು ಮಾಹಿತಿಗೆ ಮತ್ತು ವಜ್ರವನ್ನು ಖರೀದಿಸಲು  www.tanishq.co.in <http://www.tanishq.co.in> ಗೆ ಲಾಗಿನ್ ಆಗಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.