ಹೊಸ ವರ್ಷ ಬಂತೆಂದರೆ ಹೊಸ ಬದುಕು ಆರಂಭಿಸುವ ಜೋಡಿಗಳು ಒಂದಾಗುವ ಕಾಲವೂ ಹತ್ತಿರ ಬಂದಂತೆ. ಹೀಗಾಗಿ ತಮ್ಮ ನೈಜ ರೂಪವನ್ನು ಮರೆಮಾಚುವ ಪ್ರಸಾಧನಗಳ ಮೇಲಿನ ಅತಿಯಾದ ಅವಲಂಬನೆ ಬೇಡ ಎಂದು ಹಾಲಿವುಡ್ ನಟಿ ಡ್ರ್ಯೂ ಬ್ಯಾರಿಮೋರ್ ಕಿವಿಮಾತು ಹೇಳಿದ್ದಾರೆ.

ಮದುವೆಯ ದಿನ ತಮ್ಮ ಕೂದಲ ಬಣ್ಣವನ್ನು ಬದಲಿಸುವ ಅಥವಾ ಇನ್ನಾವುದೇ ರೀತಿಯ ಬದಲಾವಣೆಯನ್ನೂ ಮದುಮಗಳು ಮಾಡಬಾರದು ಎಂಬುದು ಅವರ ಸಲಹೆ. ‘ಅದು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ದಿನ. ಬದುಕಿನ ಕೊನೆಯ ಕ್ಷಣದವರೆಗೂ ನೆನಪಿರುವಂಥ ಆ ದಿನ ಹಾಗೂ ಆ ಗಳಿಗೆ ನೈಜವಾಗಿರಬೇಕು. ಕೃತಕ ವಸ್ತುಗಳಿಂದ ಅಲಂಕೃತವಾಗಿರಬಾರದು’ ಎಂದು ಬ್ಯಾರಿಮೋರ್ ಅಭಿಪ್ರಾಯಪಟ್ಟಿದ್ದಾರೆ.

ತೆಳುವಾದ, ಉದ್ದನೆಯ ಕೂದಲು ಇರುವವರು ಕೃತಕವಾಗಿ ಅವುಗಳನ್ನು ಗುಂಗುರು ಮಾಡಿಕೊಳ್ಳುವುದಾಗಲೀ, ಅಗತ್ಯಕ್ಕಿಂತ ಹೆಚ್ಚು ಫೌಂಡೇಷನ್ ಮೇಕಪ್ಗಳನ್ನು ಬಳಸುವುದಾಗಲೀ ಕೂಡದು. ಸಹಜ ಸೌಂದರ್ಯದಿಂದಷ್ಟೇ ನಮ್ಮತನವನ್ನು ನಾವು ಕಾಪಾಡಿಕೊಳ್ಳಬಹುದು ಎಂದು ಬ್ಯಾರಿಮೋರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.