ಭಾನುವಾರ, ಏಪ್ರಿಲ್ 11, 2021
32 °C

ವಧೆ ತಪ್ಪಿಸಿ ಗೋಶಾಲೆಗೆ ಕಳುಹಿದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ: ಗುರ್ಲಹೊಸೂರಿನ ಹೂಲಿ ಅಜ್ಜನವರ ಗುಡಿಯ ಗೂಳಿಯು ರೈತರ ಎತ್ತುಗಳಿಗೆ ಹಾಯ್ದು ಗಾಯಗೊಳಿಸುತ್ತಿದೆ ಎಂದು ಕೆಲವರು ವಧಾಗಾರರಿಗೆ ಮಾರಲು ಮುಂದಾದಾಗ, ವಿಶ್ವಹಿಂದೂ ಪರಿಷತ್‌ನ ಸದಸ್ಯರು ಅದನ್ನು ತಪ್ಪಿಸಿ ಬೆಳಗಾವಿ ಹಲಗಾದ ಗೋಶಾಲೆಗೆ ಕಳಿಸಿದ ಘಟನೆ ಬುಧವಾರ ನಡೆದಿದೆ.ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ವಿ.ಹಿ.ಪನ ಜಿಲ್ಲಾ ಸಂಯೋಜಕ ಶಂಕರ ಮನ್ನೂರ,  ರೈತ ಬಾಂಧವರು ಕೊಂದು ತಿನ್ನುವ ವ

ರಿಗೆ ಹಣಕ್ಕಾಗಿ ಮಾರುವುದರ ಬದಲು ಗೋಶಾಲೆಗಳಿಗೆ ಕೊಡಿ. ಅದರ ವಂಶ ಬೆಳೆಸಲು ಸಹಕರಿಸಿ ಎಂದರು.ಗೋವುಗಳನ್ನು ಮನೆಯ ಸದಸ್ಯನಂ ತೆ ಕಾಣುವುದರ ಜತೆಗೆ ವಯಸ್ಸಾದ ಗೋವುಗಳಿಗೆ ಕಡೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದರು. 

ಅಲ್ಲಿದ್ದ ಮಹಿಳೆಯರು  ‘ ಈ ಗೂಳು ನಿತ್ಯ ನಮ್ಮ ಮನೆಗೆ ಬಂದು ಪೂಜೆ ಮಾಡಿಸಿಕೊಂಡು, ನಾವು ಕೊಟ್ಟ ರೊಟ್ಟಿ ಹಾಗೂ ತರಕಾರಿ ಸೊಪ್ಪುಗಳನ್ನು ತಿಂದು ಹೋಗುತ್ತಿತ್ತು. ಯಾರಿಗೂ ಹಾನಿ ಮಾಡಿಲ್ಲ’ ಎಂದು ಹೇಳಿದರು.ನಂತರ ಆ ಗೂಳಿಯನ್ನು ಹಲಗಾ ಗೋಶಾಲೆಗೆ ಕಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರು, ವಿಶ್ವ ಹಿಂದೂ ಪರಿಷತ್‌ನ ಸದಸ್ಯರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.