ಸೋಮವಾರ, ಜೂನ್ 14, 2021
23 °C

ವನವನ್ನು ನಿತ್ಯಹಸಿರು ಮಾಡೋಣ

ಬಾಬುರಾಜ್,ಮೈಸೂರು Updated:

ಅಕ್ಷರ ಗಾತ್ರ : | |


ಬಂಡೀಪುರ, ನಾಗರಹೊಳೆ ಮತ್ತು ಬಿಳಿಗಿರಿರಂಗನ ಬೆಟ್ಟ ಸುತ್ತಮುತ್ತಲಿನ ಕಾಡು ಬಹಳಷ್ಟು ಕ್ಷೀಣಿಸಿದೆ. ನಿತ್ಯಹಸಿರಿನ ಕಾಡು ಬೇಸಿಗೆಯಲ್ಲಿ ಎಲೆ ಉದುರಿಸುವ ಮಟ್ಟಕ್ಕೆ ಬಂದರೆ ಅದು ನಾಶದತ್ತ ಸಾಗುತ್ತಿದೆ ಎಂದೇ ಅರ್ಥ. ಒಂದು ಕಾಲದಲ್ಲಿ ಬಂಡೀಪುರ, ನಾಗರಹೊಳೆ ಅರಣ್ಯ ದಟ್ಟವಾಗಿ ನಿತ್ಯಹಸಿರು ವನವಾಗಿತ್ತು. ಆದರೆ, ಆಳುವ ಸರ್ಕಾರ, ಅಧಿಕಾರಿಗಳು ಮತ್ತು ಕಾಡುಕಳ್ಳರು ಸೇರಿ ಕಾಡನ್ನು ಇಂದಿನ ಸ್ಥಿತಿಗೆ ತಂದಿದ್ದಾರೆ.

 

ಅದಿರಲಿ. ಮುಂದೆ ಏನು ಮಾಡಬಹು­ದೆಂದು ಯೋಚಿಸೋಣ. ಮುಂದಿನ ಮಳೆಗಾಲ­ದಲ್ಲಿ ಕಾಡಿನೊಳಗೆ ಸಾವಿರಾರು ಬೀಜ, ಗಿಡಗಳನ್ನು ಹಾಕುವ ಪ್ರಯತ್ನ ನಡೆಯಬೇಕು. ಎಲ್ಲೆಲ್ಲಿ ತೆರೆದ ಜಾಗಗಳಿವೆಯೋ ಅಲ್ಲೆಲ್ಲಾ ಬಿತ್ತನೆಯಾಗಬೇಕು. ಇದಕ್ಕಾಗಿ ಕಾಡುಮರಗಳ ಬೀಜಗಳನ್ನು ಸಂಗ್ರಹಿಸುವ ಕೆಲಸ ಈಗಲೇ ಶುರು ಮಾಡಬೇಕು. ಅರಣ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

 

ಗಸ್ತಿನಲ್ಲಿ ತಿರುಗುವ ಅರಣ್ಯ ಸಿಬ್ಬಂದಿ ಜೇಬಿನಲ್ಲಿ ಒಂದಷ್ಟು ಬೀಜಗಳನ್ನು ಇಟ್ಟು­ಕೊಂಡು ಆಗಲೇ ಈ ಕೆಲಸ ಮಾಡಿದ್ದಿದ್ದರೆ ಈ ಬೆಂಕಿ ಅನಾಹುತ ತಪ್ಪಿಸಬಹುದಿತ್ತು. ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಬೂದಿಯಾಗಿದ್ದನ್ನು ತಪ್ಪಿಸಿಬಹುದಿತ್ತು.

ಕಾಡನ್ನು ನಿತ್ಯಹಸಿರು ವನವಾಗಿ ಬದಲಾಯಿಸುವು­ದೊಂದೇ ಕಾಳ್ಗಿಚಿನಿಂದ ಪಾರಾಗಲು ನಮ್ಮ ಮುಂದಿರುವ ಮಾರ್ಗ.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.