ಮಂಗಳವಾರ, ಜೂನ್ 22, 2021
22 °C
ಹಿಂದಿನ 2 ವರ್ಷ ಕಳಪೆ ಸಾಧನೆ; ಮುಂದಿನ ವರ್ಷಕ್ಕೂ ಪೆಟ್ಟು

ವರಮಾನ ಇಳಿಮುಖ: ಇನ್ಫಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕಂಪೆನಿಯ ವರಮಾನ ಇಳಿಮುಖವಾಗಿದೆ ಎಂದು ಇನ್ಫೊಸಿಸ್‌ ಕಾರ್ಯನಿರ್ವಾಹಕ ಅಧ್ಯಕ್ಷ ಎನ್‌.ಆರ್.ನಾರಾಯಣ ಮೂರ್ತಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಇಲ್ಲಿ ಗುರುವಾರ ಆಯೋಜಿಸಲಾ ಗಿದ್ದ ಬರ್ಕ್ಲೀಸ್‌ ಹೂಡಿಕೆದಾರರ ಸಭೆ ಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದಲೂ ಇನ್ಫೊಸಿಸ್‌ ಸಾಧನೆಯಲ್ಲಿ ಹಿಂದೆ ಬಿದ್ದಿದೆ.  2011ರ ಮಾರ್ಚ್‌ನಿಂದ 2013ರ ಮಾರ್ಚ್‌ವರೆಗಿನ ಅವಧಿಯಲ್ಲಿ ಕಂಪೆನಿಯ ಒಟ್ಟಾರೆ ಪ್ರಗತಿಯಲ್ಲಿ ಶೇ 77ರಷ್ಟು ಕುಸಿತ ಕಂಡು ಬಂದಿತ್ತು. ಅದರ ಪರಿಣಾಮವನ್ನೂ ಈಗಲೂ ಕಾಣುವಂತಾಗಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.ಸಾಮಾನ್ಯವಾದ ಪರಿಸ್ಥಿತಿಯಲ್ಲಾ ದರೆ ಕಂಪೆನಿಯ ನಿರ್ವಹಣಾ ಲಾಭ ಗಳಿಕೆ ಯಲ್ಲಿನ ಹೆಚ್ಚಳ ಶೇ 41.5ರಷ್ಟು ಇರುತ್ತಿತ್ತು. ಆದರೆ, ಸದ್ಯ ಶೇ 23.5 ರಷ್ಟಿದೆ. ಅಂದರೆ, ಒಟ್ಟು ನಿರೀಕ್ಷೆ ಗಿಂತಲೂ ಶೇ 45ರಷ್ಟು ಹಿನ್ನಡೆಯಾ ದಂತಾಗಿದೆ ಎಂದು ವಿವರಿಸಿದರು.

ಕಂಪೆನಿಯ ಬೆಳವಣಿಗೆ ತಗ್ಗಿದ ಹಿನ್ನೆಲೆ ಯಲ್ಲಿಯೇ ನಾರಾಯಣ ಮೂರ್ತಿ ಅವರು 2013ರ ಜೂನ್‌ನಲ್ಲಿ ಇನ್ಫೊಸಿಸ್‌ಗೆ ಮರಳಿ ಅಧಿಕಾರ ವಹಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.2011ರ ಮಾರ್ಚ್ 31ರ ವೇಳೆ 1 ಅಮೆರಿಕನ್‌ ಡಾಲರ್‌ಗೆ 44 ರೂಪಾಯಿಗಳಷ್ಟು ಮೌಲ್ಯವಿತ್ತು. 2013ರ ಮಾ. 31ರಲ್ಲಿ ಇದು ₨55ರ ಷ್ಟಕ್ಕೇರಿತ್ತು. ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ 1 ಡಾಲರ್‌ಗೆ ₨62ರಷ್ಟು ವಿನಿ ಮಯ ದರವಿತ್ತು. ಕಂಪೆನಿಯ ಶೇ 48ರಷ್ಟು ವರಮಾನವನ್ನು ಡಾಲರ್‌ ನಿಂದ ರೂಪಾಯಿಗೆ ಪರಿವರ್ತಿಸಿ ವಿನಿಮಯ ದರದಲ್ಲಿ ಶೇ 25ರಷ್ಟನ್ನು ಕಳೆದಿದ್ದರೂ ಇನ್ಫೊಸಿಸ್‌ನ ಒಟ್ಟಾರೆ ನಿರ್ವಹಣಾ ಲಾಭದಲ್ಲಿ ಶೇ 12ರಷ್ಟು ಹೆಚ್ಚಳ ಕಂಡುಬರಬೇಕಿತ್ತು. ಆದರೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ವರಮಾನದಲ್ಲಿ ಹೆಚ್ಚಳವೇ ಕಂಡು ಬರಲಿಲ್ಲ ಎಂದು ವಿಷಾದಿಸಿದರು.ಇದೇ ವೇಳೆ ಸದ್ಯದ ವರಮಾನದ ವಿವರ ನೀಡಿರುವ ಇನ್ಫೊಸಿಸ್‌ ‘ಸಿಇಒ’ ಶಿಬುಲಾಲ್‌, ಗ್ರಾಹಕ ಕಂಪೆನಿಗಳು ವೆಚ್ಚ ನಿಯಂತ್ರಣ ಮಾಡಲು ಮುಂದಾಗಿರು ವುದರಿಂದ ಪ್ರಸಕ್ತ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ (ಜನವರಿ, ಮಾರ್ಚ್‌) ಇನ್ಫೊಸಿಸ್‌ ವರಮಾನ ಕುಸಿತ ಕಾಣಲಿದೆ. ಇದೇ ಪರಿಸ್ಥಿತಿ 2014-15ನೇ ಹಣಕಾಸು ವರ್ಷದ ಲ್ಲಿಯೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಷೇರು ಮೌಲ್ಯ ಕುಸಿತಮುಂಬೈ(ಪಿಟಿಐ): ಇನ್ಫೊಸಿಸ್‌ ಕಾರ್ಯನಿರ್ವಾಹಕ ಅಧ್ಯಕ್ಷರು ಸದ್ಯದ ಮತ್ತು ಮುಂದಿನ ಹಣಕಾಸು ವರ್ಷ ದಲ್ಲಿ ವರಮಾನದಲ್ಲಿ ಹೆಚ್ಚಳ ನಿರೀಕ್ಷಿಸು ವಂತಿಲ್ಲ ಎಂದು ನಕಾರಾತ್ಮಕವಾಗಿ ಹೇಳಿರುವುದು ಗುರುವಾರ ಷೇರುಪೇಟೆ ಮೇಲೆಯೂ ಪರಿಣಾಮ ಬೀರಿತು. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ 82 ಅಂಶಗಳ ಕುಸಿತ ಅನುಭವಿಸಿತು. ಇನ್ನೊಂದೆಡೆ ಇನ್ಫೊಸಿಸ್‌ ಷೇರುಗಳು ದಿಢೀರ್‌ ಎಂಬಂತೆ ಶೇ 8.54ರಷ್ಟು ಮೌಲ್ಯ ಕಳೆದುಕೊಂಡು ಪ್ರತಿ ಷೇರಿಗೆ ₨3,357.50ರಂತೆ ಮಾರಾಟ ವಾದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.