ಶನಿವಾರ, ಮೇ 8, 2021
27 °C

ವರ್ಗಾವಣೆ ನಿಯಮಗಳು ಬದಲಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ವಶಿಕ್ಷಣ ಅಭಿಯಾನ ಯೋಜನೆಯ ಅನುದಾನದಲ್ಲಿ ವೇತನ ಪಡೆಯುತ್ತಿರುವ ಶಿಕ್ಷಕರು ವರ್ಗಾವಣೆಗಾಗಿ ನಡೆಯುವ ಕೌನ್ಸಿಲಿಂಗ್ ಸಮಯದಲ್ಲಿ ಅದೇ ಯೋಜನೆಯ ಖಾಲಿ ಹುದ್ದೆಗೆ ಹೋಗಬೇಕೆಂಬ ನಿಯಮ ಈ ವರ್ಷವೂ ಬದಲಾಗಿಲ್ಲ. ಹಿಂದಿನ ವರ್ಗಾವಣೆಯಲ್ಲೂ ಇದೇ ನಿಯಮ ಇದ್ದ ಕಾರಣ ಸಾಮಾನ್ಯ ಖಾಲಿ ಹುದ್ದೆಗಳಿಗೆ ಹೋಗಲು ಅವಕಾಶ ನಿರಾಕರಿಸಲಾಯಿತು.ಪತಿ ಪತ್ನಿ ಪ್ರಕರಣ, ತೀವ್ರ ಕಾಯಿಲೆ, ಇನ್ನಿತರ ವಿಶೇಷ ಸಂದರ್ಭದ ಅವಕಾಶ ಎಲ್ಲರಿಗೂ ಲಭ್ಯವಿಲ್ಲ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಹಿಂದಿನ ವರ್ಗಾವಣೆಯಲ್ಲಿ ಸರ್ವಶಿಕ್ಷಣ ಅಭಿಯಾನದ ಒಂದೂ ಹುದ್ದೆಗಳು ಖಾಲಿ ಇರಲಿಲ್ಲ.ಎಲ್ಲಾ ಜಿಲ್ಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಯಲ್ಲಿದೆ. ವರ್ಗಾವಣೆಯಾಗಿ ಹೋದ ಶಿಕ್ಷಕರಿಗೆ ಇದೇ ಯೋಜನೆಯ ಅನುದಾನದಲ್ಲಿ ವೇತನ ನೀಡಬಹುದಲ್ಲವೇ? ಈ ನಿಯಮಗಳನ್ನು ಬದಲಾಯಿಸದೇ ಪತಿ ಪತ್ನಿ ಪ್ರಕರಣ ಸೇರಿದಂತೆ ವಿಶೇಷ ಆದ್ಯತೆಯಡಿ ಅರ್ಜಿ ಸಲ್ಲಿಸಿದವರ ಪಾಡೇನು? ಶಿಕ್ಷಣ ಸಚಿವರಿಗೆ ಶಿಕ್ಷಕರ ಕಷ್ಟಗಳೇ ಅರ್ಥವಾಗುವುದಿಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.