ಸೋಮವಾರ, ಜನವರಿ 20, 2020
26 °C

ವರ್ತೂರು ನಾಗರಿಕ ಹಿತರಕ್ಷಣಾ ವೇದಿಕೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫಿಲ್ಡ್‌: ಇಲ್ಲಿಗೆ ಸಮೀಪದ ವರ್ತೂರು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ವಿಸ್ತರಣೆ ,ಒಳ ಚರಂಡಿ ಮತ್ತು ಸಮರ್ಪಕ ನೀರು ಸರಬರಾಜಿಗೆ ಒತ್ತಾಯಿಸಿ ಸೋಮವಾರ ವರ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.ವರ್ತೂರು ಕೋಡಿ– ದೊಮ್ಮಸಂದ್ರ ಗ್ರಾಮದವರೆಗೆ ದಿನೇ ದಿನೇ ಸಂಚಾರ ದಟ್ಟಣೆ ಆಗುತ್ತಿರುವ ಹಿನ್ನಲೆಯಲ್ಲಿ ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿದೆ. ಗ್ರಾಮಸ್ಥರು ಬೆಂಗಳೂರು ,ಹೊಸಕೋಟೆ ಮತ್ತು ಆನೇಕಲ್‌ ಮಾರ್ಗಗಳಲ್ಲಿ ಸಂಚರಿಸಲು ಪ್ರಯಾಸ ಪಡುತ್ತಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ನಿರ್ಮಾಣ ಸೇರಿದಂತೆ ಗ್ರಾಮದ ಒಳಚರಂಡಿ,ಸಮರ್ಪಕ ನೀರಿನ ವ್ಯವಸ್ಥೆ ಬರುವ ಮಾರ್ಚ್ ತಿಂಗಳ ಅಂತ್ಯದ ಒಳಗೆ ಮಾಡದಿದ್ದಲ್ಲಿ ವರ್ತೂರು ಬಂದ್‌ ಸೇರಿದಂತೆ ಬೃಹತ್‌ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)