ಗುರುವಾರ , ಏಪ್ರಿಲ್ 22, 2021
29 °C

ವಾಘಾ ಗಡಿಯಿಂದ ಮುಕ್ತ ಆಮದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): `ಶೀಘ್ರವೇ ವಾಘಾ ಗಡಿಯ ಮೂಲಕ ಎಲ್ಲಾ ವಸ್ತು ಗಳನ್ನು ಆಮದು ಮಾಡಿಕೊಳ್ಳಬಹುದು~ ಎಂದು ಭಾರತೀಯ ಹೈಕಮಿಷನರ್ ಶರತ್ ಸಭರ್‌ವಾಲ್ ತಿಳಿಸಿದ್ದಾರೆ.

ಈ ಬಗ್ಗೆ ಪಾಕಿಸ್ತಾನ ಸರ್ಕಾರ ಭರವಸೆ ನೀಡಿದೆ ಎಂದೂ ಅವರು ಹೇಳಿದ್ದಾರೆ.



ಗುರುವಾರ ಲಾಹೋರ್‌ನಲ್ಲಿ ವಾಣಿಜೋದ್ಯಮಿಗಳು ಹಾಗೂ ಕೈಗಾರಿಕಾ ಮಂಡಳಿ (ಎಲ್‌ಸಿಸಿಐ)ಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಪ್ರಸ್ತುತ ಕೇವಲ 138 ವಸ್ತುಗಳನ್ನು ಮಾತ್ರ ವಾಘಾ-ಅಟ್ಟಾರಿ ಗಡಿ ಮೂಲಕ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.



ಶೀಘ್ರವೇ ಈ ನಿರ್ಬಂಧ ಸಡಿಲಗೊಳ್ಳಲಿದೆ~ ಎಂದರು.70 ಕಿ.ಮೀ ಕಿರು ಕೊಳವೆ ಮಾರ್ಗದ ಮೂಲಕ ಪಾಕಿಸ್ತಾನವು ಇನ್ನು ಮುಂದೆ ಭಾರತದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.