ಗುರುವಾರ , ಏಪ್ರಿಲ್ 15, 2021
27 °C

ವಾಚ್ ಟೈಮ್ ನೋಡಲಿಕ್ಕಲ್ಲ

ಸಂದರ್ಶನ: ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ವಾಚ್ ಟೈಮ್ ನೋಡಲಿಕ್ಕಲ್ಲ

ನಗರದ ಹೈಫ್ಯಾಷನ್ ಅಡ್ಡಾ ಎಂದೇ ಕರೆಸಿಕೊಳ್ಳುವ ಮಹಾತ್ಮ ಗಾಂಧಿ ರಸ್ತೆಯಲ್ಲಿ ಹಳೆಯ ಕಾಫಿ ಹೌಸ್ ಸ್ಥಳದಲ್ಲಿ ತಲೆಯೆತ್ತಿರುವ ಹೊಸ ಕಟ್ಟಡದಲ್ಲಿ ಟೈಟಾನ್ ಮತ್ತು ಹಿಲಿಯೋಸ್ ಜಂಟಿ ಮಳಿಗೆಗೆ ಚಾಲನೆ ನೀಡಲು ಆಗಮಿಸಿದ್ದ ಟೈಟಾನ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ ಭಟ್ `ಮೆಟೊ~್ರದೊಂದಿಗೆ ಕೈಗಡಿಯಾರ ತಯಾರಿಕೆ, ವಿನ್ಯಾಸ ಮತ್ತಿತರ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.

ಕೈಗಡಿಯಾರ ಉದ್ಯಮದಲ್ಲಿ ನಿಮ್ಮ ಕಂಪೆನಿಯ ಸ್ಥಾನವೇನು?

ಈ ಕ್ಷೇತ್ರದಲ್ಲಿ ಈಗ ಕ್ರಾಂತಿಯೇ ನಡೆದಿದೆಯೆನ್ನಬಹುದು. ಹಿಂದೆಂದೂ ಕಾಣದಂತಹ ವಹಿವಾಟು ಕೂಡ ಇದೆ. ಕಚೇರಿಗೇ ಇರಲಿ, ಸಮಾರಂಭಕ್ಕೇ ಇರಲಿ ಹೊರಡುವಾಗ ಕೈಗಡಿಯಾರವಿಲ್ಲದಿದ್ದರೆ ನೀವು ಪರಿಪೂರ್ಣವಾಗಿಲ್ಲವೆಂದೇ ಅರ್ಥ.

 

ಡ್ರೆಸ್‌ಗೆ ಹೊಂದುವ ಬಣ್ಣದ, ವಿನ್ಯಾಸದ ವಾಚ್‌ಗಳಿಗೆ ಈಗ ಆದ್ಯತೆ ಹೆಚ್ಚುತ್ತಿದೆ. ಈ ಟ್ರೆಂಡ್ ಕೈಗಡಿಯಾರ ಉದ್ಯಮದಲ್ಲಿ ಸ್ಪರ್ಧೆ, ಪೈಪೋಟಿಯನ್ನು ಹುಟ್ಟುಹಾಕಿದೆ. ಇದನ್ನು ಟೈಟಾನ್ ಸಮರ್ಥವಾಗಿ ಎದುರಿಸಿ ಯಶಸ್ವಿಯೂ ಆಗಿದೆ. 2011-12ರಲ್ಲಿ 50 ಲಕ್ಷ ಗ್ರಾಹಕರನ್ನು ಹೊಂದಿದ ಕಂಪೆನಿ, 32 ರಾಷ್ಟ್ರಗಳಲ್ಲಿ ಮಳಿಗೆಗಳನ್ನು ಹೊಂದಿದೆ. 



ವಿನ್ಯಾಸದಲ್ಲಿನ ಕ್ರಾಂತಿ ಬಗ್ಗೆ ಏನು ಹೇಳುತ್ತೀರಿ?

ಕೈಗಡಿಯಾರದ ವಿನ್ಯಾಸದಲ್ಲಿ ದೊಡ್ಡದೊಂದು ಕ್ರಾಂತಿಯಾಗಿದೆ. ಅದೀಗ ಫ್ಯಾಷನ್ ಮತ್ತು ಆಧುನಿಕ ಜೀವನಶೈಲಿಯೊಂದಿಗೆ ತಳುಕು ಹಾಕಿಕೊಂಡಿರುವುದೇ ಇದಕ್ಕೆ ಕಾರಣ.

ಇಷ್ಟಕ್ಕೂ ಈಗ ಯಾರೂ ಸಮಯ ನೋಡಲು ವಾಚ್ ಕಟ್ಟಿಕೊಳ್ಳುವುದಿಲ್ಲ. ಅದು ಫ್ಯಾಷನ್ ಅಷ್ಟೇ.

 

ಯುವಜನರಂತೂ ಹೊಸ ಹೊಸ ವಿನ್ಯಾಸಗಳನ್ನು ಬಯಸುತ್ತಾರೆ. ಮಹಿಳೆಯರೂ ದೊಡ್ಡ ಫ್ರೇಮ್, ಡಯಲ್ ಸ್ಟ್ರಾಪ್/ಚೈನ್‌ನ ಡಿಸೈನರ್ ವಾಚ್‌ಗಳಿಗೆ ಆದ್ಯತೆ ಕೊಡುತ್ತಾರೆ. ಈ ಎಲ್ಲಾ ಬೇಡಿಕೆಗಳಿಗೆ ತಕ್ಕಂತೆ ಮಾರುಕಟ್ಟೆಯೂ ಬದಲಾಗಬೇಕಲ್ಲ?



ನಿಮ್ಮ ವಿನ್ಯಾಸಗಳ ವೈಶಿಷ್ಟ್ಯವೇನು?


ನಮ್ಮಲ್ಲಿ ಸಿಗುವುದು ನಮ್ಮದೇ ವಿನ್ಯಾಸಗಳು. ಬೆಂಗಳೂರಿನಲ್ಲಿರುವ ನಮ್ಮ ಡಿಸೈನ್ ಸ್ಟುಡಿಯೊದಲ್ಲಿ 25 ಮಂದಿ ವಿನ್ಯಾಸಕಾರರಿದ್ದಾರೆ. ಪ್ರತಿ ವರ್ಷ ಹೊಸ ವಿನ್ಯಾಸಗಳು ಸೇರ್ಪಡೆಯಾಗುತ್ತಲೇ ಇರುತ್ತವೆ. ಯಾವುದೇ ಹೊಸ ವಿನ್ಯಾಸವನ್ನು ಐದು ವರ್ಷಕ್ಕೂ ಹೆಚ್ಚು ಕಾಲ ಉಳಿಸಿಕೊಳ್ಳುವುದಿಲ್ಲ.

 

ನಮ್ಮ ಸಹ ಉತ್ಪನ್ನವಾದ ಸೊನಾಟಾದ ಬೆಲೆ 250 ರೂಪಾಯಿಗಳಿಂದ ಆರಂಭವಾಗುತ್ತದೆ. `ರಾಗ ಬಂಧನ್~ ಜೋಡಿಗಳ ದಂಪತಿಗಳ ವಾಚ್. `ರಾಗ ಸಿಟಿ~, ವಿಶ್ವದ ವಿವಿಧ ನಗರಗಳ ಒಂದೊಂದು ಪರಂಪರೆ ಅಥವಾ ಲ್ಯಾಂಡ್‌ಮಾರ್ಕ್‌ನ ವಿನ್ಯಾಸವನ್ನೊಳಗೊಂಡಿರುವ ಸಂಗ್ರಹ. `ಎಡ್ಜ್~ನಲ್ಲಿ ಸ್ಕೆಲಟನ್ ಎಂಬ ತೆಳ್ಳಗಿನ ವಿಶಿಷ್ಟ ಕೈಗಡಿಯಾರಗಳು ಸಿಗುತ್ತವೆ.



ಎಂ.ಜಿ. ರಸ್ತೆಯ ಈ ಹೊಸ ಮಳಿಗೆ ಬಗ್ಗೆ ಹೇಳಿ?


ಟೈಟಾನ್ ಮತ್ತು ಹಿಲಿಯೋಸ್ ಎಂಬ ಎರಡು ವಿಭಾಗಗಳನ್ನು ಇಲ್ಲಿ ಮಾಡಲಾಗಿದೆ. ಟೈಟಾನ್, ನೆಬ್ಯುಲ, ಕ್ಸೈಲಸ್, ಫಾಸ್ಟ್‌ಟ್ರ್ಯಾಕ್, ಝೂಪ್, ರಾಗ, ರಾಗ ಸಿಟಿ, ರಾಗ ಬಂಧನ್ ಮುಂತಾದುವುಗಳ ಜತೆಗೆ ಟಾಮಿ ಹಿಲ್ಫಿಗರ್, ಫ್ಯೂಕ್, ಹ್ಯೂಗೊ ಬಾಸ್, ಫಾಸಿಲ್, ಡೀಸೆಲ್, ಸಿಟಿಜನ್ ಮತ್ತಿತರ 29 ಬಗೆಯ ಬ್ರಾಂಡ್‌ಗಳು ಹಿಲಿಯೋಸ್ ವಿಭಾಗದಲ್ಲಿ ಖರೀದಿಸಬಹುದು.



3.5 ಲಕ್ಷ ರೂಪಾಯಿ ಬೆಲೆಯ ನೆಬ್ಯುಲ ವಾಚ್‌ಗಳೂ ಇಲ್ಲಿ ಲಭ್ಯ. ಅಂತರರಾಷ್ಟ್ರೀಯ ಬ್ರಾಂಡ್‌ಗಳಿಗೆಂದೇ `ಹಿಲಿಯೋಸ್~ ಮೀಸಲಾಗಿದೆ. ಒಟ್ಟು 4,000 ಕೈಗಡಿಯಾರಗಳು ಒಂದೇ ಸೂರಿನಡಿ ಸಿಗುವ, ರಾಜ್ಯದ ಏಕೈಕ ಮಳಿಗೆಯಿದು.



ಬೆಂಗಳೂರಿನ ಗ್ರಾಹಕರ ಸ್ಪಂದನ ಹೇಗಿದೆ?


ಬೆಂಗಳೂರು, ಫ್ಯಾಷನ್ ಜಗತ್ತಿನ ಮತ್ತೊಂದು ಹೆಬ್ಬಾಗಿಲು. ಫ್ಯಾಷನ್ ಲೋಕದಲ್ಲಿ ಪರಿಚಯವಾಗುವ ಯಾವುದೇ ಉತ್ಪನ್ನಕ್ಕೆ ಇಲ್ಲಿ ತಕ್ಷಣ ಬೇಡಿಕೆ ಹುಟ್ಟಿಕೊಳ್ಳುತ್ತದೆ. ಎಲ್ಲಾ ವರ್ಗದ, ಕ್ಷೇತ್ರದ ಜನರು ಆಧುನಿಕತೆಯನ್ನು ಒಪ್ಪುವವರೇ. ಕೈಗಡಿಯಾರಗಳಿಗೂ ಇದು ಉತ್ತಮ ಮಾರುಕಟ್ಟೆ. ಎಲ್ಲಾ ವಯೋಮಾನದವರೂ ತಮ್ಮ ಸಂಗ್ರಹದಲ್ಲಿ ಹೆಚ್ಚು ಹೆಚ್ಚು ವಾಚ್‌ಗಳನ್ನು ಹೊಂದಲು ಬಯಸುವವರೇ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.