ಗುರುವಾರ , ಮಾರ್ಚ್ 4, 2021
18 °C

ವಾಜಪೇಯಿಗೆ ‘ಲಿಬರೇಶನ್‌ ಆಫ್‌ ವಾರ್‌’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಜಪೇಯಿಗೆ ‘ಲಿಬರೇಶನ್‌ ಆಫ್‌ ವಾರ್‌’ ಪ್ರಶಸ್ತಿ

ಢಾಕ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ  ನೀಡಿರುವ ‘ಲಿಬರೇಶನ್‌ ಆಪ್‌ ವಾರ್‌’ ಪ್ರಶಸ್ತಿಯನ್ನು ವಾಜಪೇಯಿ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ಸ್ವೀಕರಿಸಿದರು.

ಬಾಂಗ್ಲಾ ಸರ್ಕಾರ ವಾಜಪೇಯಿ ಅವರಿಗೆ ಗೌರವಾನ್ವಿತ ‘ಲಿಬರೇಶನ್‌ ಆಫ್‌ ವಾರ್‌’ ಪ್ರಶಸ್ತಿಯನ್ನು ನೀಡಿತ್ತು. ಬಾಂಗ್ಲಾ ದೇಶದ ಅಧ್ಯಕ್ಷರಾದ ಅಬ್ದುಲ್‌ ಹಮೀದ್‌ ಅವರು ಮೋದಿ ಅವರಿಗೆ ಪ್ರಶಸ್ತಿ ನೀಡಿದರು.



ಈ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನಮಂತ್ರಿ ಶೇಖ್‌ ಹಸೀನಾ ಮತ್ತು ಹಿರಿಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



ಇಂದು ಭಾರತೀಯರಿಗೆ ದೊಡ್ಡ ದಿನ. ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಆ ದೊಡ್ಡ ವ್ಯಕ್ತಿಗೆ ಬಾಂಗ್ಲಾ ಸರ್ಕಾರ ದೊಡ್ಡ ಗೌರವ ನೀಡಿದೆ ಎಂದು ಬಾಂಗ್ಲಾ ಸರ್ಕಾರವನ್ನು ಶ್ಲಾಘಿಸಿದರು.



ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಅವರು ಬಾಂಗ್ಲಾ ದೇಶಕ್ಕೆ ನೆರವು ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.