ಶುಕ್ರವಾರ, ಜೂನ್ 25, 2021
29 °C

ವಾಜಪೇಯಿ ‘ಯುಗಾಂತ್ಯ’!

ನಾಗಾರ್ಜುನ ಸಾಗ್ಗೆರೆ,ತುಮಕೂರು Updated:

ಅಕ್ಷರ ಗಾತ್ರ : | |

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ, ಮಾಜಿ ಸಂಸದೆ,  ಕಾಂಗ್ರೆಸ್‌ನ ಚುನಾವಣಾ ಸ್ಪರ್ಧಿ ಕರುಣಾ ಶುಕ್ಲಾ ‘ಬಿಜೆಪಿಯಲ್ಲಿ ವಾಜ­ಪೇಯಿ, ಅಡ್ವಾಣಿ ಯುಗ ಅಂತ್ಯಗೊಂಡಿದೆ’ ಎಂದು ನೊಂದು ನುಡಿದಿದ್ದಾರೆ! ಅಷ್ಟೇಕೆ ಬಿಜೆಪಿಯ ಹಿರಿಯ ನಾಯ­ಕರಾದ  ಸುಷ್ಮಾ  ಸ್ವರಾಜ್‌, ಮುರಳಿ ಮನೋಹರ ಜೋಷಿ ಅಂತಹವರೂ ಮೂಲೆ­ಗುಂಪಾಗಿದ್ದಾರೆ!



ಒಂದು ಕಾಲದಲ್ಲಿ ಬಿಜೆಪಿಯ ಆದರ್ಶದ ಮುಖ­ವಾಗಿ ವಾಜಪೇಯಿ, ವಾಸ್ತವದ ಮುಖವಾಗಿ ಅಡ್ವಾಣಿ ಇದ್ದರು! ಇವರಿಬ್ಬರ ಬುದ್ಧಿಮತ್ತೆ, ಶ್ರಮದ ಫಲವಾಗಿ ಬಿಜೆಪಿ ಆರು ವರ್ಷಗಳ ಕಾಲ ಕೇಂದ್ರ­ದಲ್ಲಿ ಅಧಿಕಾರಾರೂಢವಾಗಿತ್ತು. ದೇಶದಲ್ಲಿ ಬಿಜೆಪಿ ಬೆಳೆದು ಉಳಿದಿರುವುದು ಇವರಿಬ್ಬರಿಂದ.



ಇಂದು, ‘ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ’ ಎಂಬಂತೆ ಅಡ್ವಾಣಿ ಅವರನ್ನು ಮೂಲೆ­ಗುಂಪು ಮಾಡಿ­ರುವುದು ಪಕ್ಷಕ್ಕೆ ಶುಭ ಸೂಚನೆ­ಯಂತೂ ಅಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.