ನವದೆಹಲಿ (ಪಿಟಿಐ): ಜೆಸ್ಸಿ ರೈಡರ್ (86, 58 ಎಸೆತ, 7 ಬೌಂ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಹಾಗೂ ಅಲ್ಪನೊಸೊ ಥಾಮಸ್ ( 22ಕ್ಕೆ3) ಅವರ ಸಮರ್ಥ ಬೌಲಿಂಗ್ ನೆರವಿನಿಂದ ಪುಣೆ ವಾರಿಯರ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಎದುರು 20 ರನ್ಗಳ ಭರ್ಜರಿ ಗೆಲುವು ಪಡೆಯಿತು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಸೌರವ್ ಗಂಗೂಲಿ ನೇತೃತ್ವದ ವಾರಿಯರ್ಸ್ 20 ಓವರ್ಗಳಲ್ಲಿ 3 ವಿಕೆಟ್ಗೆ 192 ರನ್ ಪೇರಿಸಿತು. ಈ ಸವಾಲಿನ ಮೊತ್ತ ಮುಟ್ಟಲು ಡೇರ್ಡೆವಿಲ್ಸ್ಗೆ ಸಾಧ್ಯವಾಗಲಿಲ್ಲ. 20 ಓವರ್ಗಳಲ್ಲಿ ಏಳು ವಿಕೆಟ್ಗಳನ್ನು ಕಳೆದುಕೊಂಡು 172 ರನ್ ಮಾತ್ರ ಗಳಿಸಿತು. ಡೆವಿಲ್ಸ್ ತಂಡದ ನಾಯಕ ವೀರೇಂದ್ರ ಸೆಹ್ವಾಗ್ (57, 32ಎಸೆತ, 5ಬೌಂಡರಿ, 4 ಸಿಕ್ಸರ್) ಹೋರಾಟ ವ್ಯರ್ಥವಾಯಿತು.

ರೈಡರ್ ಮಿಂಚು: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ ಬೃಹತ್ ಮೊತ್ತ ಪೇರಿಸಲು ಕಾರಣರಾದದ್ದು ಜೆಸ್ಸಿ ರೈಡರ್. ನಾಯಕ ಗಂಗೂಲಿ (41, 35 ಎಸೆತ, 5 ಬೌಂ, 1 ಸಿಕ್ಸರ್) ಮತ್ತು ಸ್ಟೀವನ್ ಸ್ಮಿತ್ (34, 13 ಎಸೆತ, 4 ಬೌಂ, 2 ಸಿಕ್ಸರ್) ಅವರು ರೈಡರ್ಗೆ ಉತ್ತಮ ಬೆಂಬಲ ನೀಡಿದರು.
ವಾರಿಯರ್ಸ್ ತಂಡ ರಾಬಿನ್ ಉತ್ತಪ್ಪ (13 ಎಸೆತಗಳಲ್ಲಿ 10) ಅವರನ್ನು ಬೇಗನೇ ಕಳೆದುಕೊಂಡಿತು.

ಸ್ಕೋರ್ ವಿವರ :

ಪುಣೆ ವಾರಿಯರ್ಸ್: 20 ಓವರ್ಗಳಲ್ಲಿ 3 ವಿಕೆಟ್ಗೆ 192
ರಾಬಿನ್ ಉತ್ತಪ್ಪ ಸಿ ಓಜಾ ಬಿ ಮಾರ್ನ್ ಮಾರ್ಕೆಲ್ 10
ಜೆಸ್ಸಿ ರೈಡರ್ ಬಿ ಮಾರ್ನ್ ಮಾರ್ಕೆಲ್ 86
ಸೌರವ್ ಗಂಗೂಲಿ ಸಿ ಯಾದವ್ ಬಿ ಮಾರ್ನ್ ಮಾರ್ಕೆಲ್ 41
ಸ್ಟೀವನ್ ಸ್ಮಿತ್ ಔಟಾಗದೆ 34
ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 06
ಇತರೆ: (ಲೆಗ್ಬೈ-4, ವೈಡ್-10, ನೋಬಾಲ್-1) 15
ವಿಕೆಟ್ ಪತನ: 1-26 (ರಾಬಿನ್; 3.5), 2-119 (ಗಂಗೂಲಿ; 14.2), 3-186 (ರೈಡರ್; 19.4)
ಬೌಲಿಂಗ್: ಇರ್ಫಾನ್ ಪಠಾಣ್ 4-1-25-0, ಶಹಬಾಜ್ ನದೀಮ್ 4-0-44-0, ಮಾರ್ನ್ ಮಾರ್ಕೆಲ್ 4-0-50-3, ಉಮೇಶ್ ಯಾದವ್ 4-0-29-0, ಕೆವಿನ್ ಪೀಟರ್ಸನ್ 2-0-21-0, ವೀರೇಂದ್ರ ಸೆಹ್ವಾಗ್ 1-0-9-0, ಯೋಗೇಶ್ ನಗರ್ 1-0-10-0
ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 172
ಜಯವರ್ಧನೆ ಸಿ ಸ್ವೀವನ್ ಸ್ಮಿತ್ ಬಿ ಅಲ್ಪೊನ್ಸೊ ಥಾಮಸ್ 07
ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ಮುರಳಿ ಕಾರ್ತಿಕ್ 57
ಕೆವಿನ್ ಪೀಟರ್ಸನ್ ಬಿ ಸೌರವ್ ಗಂಗೂಲಿ 32
ಇರ್ಫಾನ್ ಪಠಾಣ್ ಸಿ ಜೆಸ್ಸಿ ರೈಡರ್ ಬಿ ಸೌರವ್ ಗಂಗೂಲಿ 15
ಪವನ್ ನೇಗಿ ರನ್ ಔಟ್ (ಮ್ಯಾಥ್ಯೂಸ್/ಉತ್ತಪ್ಪ) 08
ರಾಸ್ ಟೇಲರ್ ಸಿ ಸ್ಟೀವನ್ ಸ್ಮಿತ್ ಬಿ ಅಲ್ಪನೊಸೊ ಥಾಮಸ್ 12
ಯೋಗೇಶ್ ಸಿ ಸೌರವ್ ಗಂಗೂಲಿ ಬಿ ಅಲ್ಪನೊಸೊ ಥಾಮಸ್ 24
ನಮನ್ ಓಜಾ ಔಟಾಗದೆ 11
ಮಾರ್ನ್ ಮಾರ್ಕೆಲ್ ಔಟಾಗದೆ 01
ಇತರೆ: (ಲೆಗ್ ಬೈ-2 ವೈಡ್-3) 05
ವಿಕೆಟ್ ಪತನ: 1-12 (ಜಯವರ್ಧನೆ; 2.1), 2-87 (ಪೀಟರ್ಸನ್; 9.1), 3-114 (ಪಠಾಣ್; 11.6), 4-115 (ಸೆಹ್ವಾಗ್; 12.3), 5-125 (ನೇಗಿ; 13.6), 6-143 (ಟೇಲರ್; 17.2), 7-167 (ನಗರ್; 19.1).
ಬೌಲಿಂಗ್: ಅಲ್ಪನೊಸೊ ಥಾಮಸ್ 4-0-22-3, ಆಶೀಶ್ ನೆಹ್ರಾ 4-0-26-0, ಮುರಳಿ ಕಾರ್ತಿಕ್ 3-0-25-1, ಏಂಜೆಲೊ ಮ್ಯಾಥ್ಯೂಸ್ 2-0-32-0, ರಾಹುಲ್ ಶರ್ಮ 2-0-20-0, ಜೆಸ್ಸಿ ರೈಡರ್ 1-0-18-0, ಸೌರವ್ ಗಂಗೂಲಿ 4-0-27-2.
ಫಲಿತಾಂಶ: ಪುಣೆ ವಾರಿಯರ್ಸ್ಗೆ 20 ರನ್ ಜಯ.
ಪಂದ್ಯ ಶ್ರೇಷ್ಠ: ಸೌರವ್ ಗಂಗೂಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.