ಮಂಗಳವಾರ, ಮೇ 24, 2022
24 °C

ವಾಲ್ಮೀಕಿಯ ತತ್ವಾದರ್ಶಗಳು ಇಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಮಹರ್ಷಿ ವಾಲ್ಮೀಕಿಯ ತತ್ವಾದರ್ಶಗಳು ಇಂದಿಗೂ ಪ್ರಸುತ್ತವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವಂತೆ ತಾ.ಪಂ. ಮಾಜಿ ಅಧ್ಯಕ್ಷ ಪಿ.ಓಬಪ್ಪ ಹೇಳಿದರು.ಅವರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘ ದವರು ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಸಮಾಜದಲ್ಲಿ ವಾಲ್ಮೀಕಿ ಜನಾಂಗದ ಬಗ್ಗೆ ಒಳ್ಳೆಯ ಭಾವನೆ ಇದ್ದು, ಸಮಾಜ ಬಾಂಧವರನ್ನು ಗೌರವಿಸುವಂತೆ ಇತರೆ ಸಮಾಜದವರನ್ನು ಗೌರವದಿಂದ ಕಾಣ ಬೇಕಿದೆ. ಅಲ್ಲದೆ ನಾಯಕ ಸಮಾಜದ ವರು ತಮ್ಮ ಮಕ್ಕಳನ್ನು ಸರಿಯಾಗಿ ಕಳುಹಿಸಿ ವಿದ್ಯಾವಂತರನ್ನಾಗಿಸಿ ಸಮಾಜ ದಲ್ಲಿ ಉತ್ತಮರನ್ನಾಗಿ ರೂಪಿಸಬೇಕಿದೆ, ದುಶ್ವಟಗಳಿಗೆ ಬಲಿಯಾಗದೇ, ಒಳ್ಳೆಯ ಜೀವನ ರೂಪಿಸಕೊಳ್ಳಬೇಕಿದೆ. ಇದಕ್ಕೆ ವಾಲ್ಮೀಕಿಯವರ ಜೀವನವೇ ಒಂದು ದಾರಿ ದೀಪ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎನ್.ಸತ್ಯನಾರಾಯಣ, ನಮ್ಮ ಹಿಂದೂ ಧರ್ಮಕ್ಕೆ ಮಹಾನ್ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಯವರ ಕೊಡುಗೆ ಅಪಾರವಾಗಿದ್ದು, ಅವರ ಜೀವನವೇ ಎಲ್ಲರಿಗೂ ಒಂದು ಮಾರ್ಗದರ್ಶನವಾಗಿದ್ದು, ಎಲ್ಲರೂ ಅದನ್ನು ಪಾಲಿಸುವಂತೆ ತಿಳಿದರು.ಈ ಸಂದರ್ಭದಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸ ಲಾಯಿತು.

ಸನ್ಮಾನ ಸ್ವೀಕರಿಸಿ ಮಂಜಮ್ಮ ಜೋಗುತಿ ಮಾತನಾಡಿ ದರು. ಜಿ.ಪಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಎಚ್. ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಮಾಜಿ ಅಧ್ಯಕ್ಷ ಪಿ.ರಾಮಣ್ಣ, ಮುಖ್ಯ ಶಿಕ್ಷಕ ಮಂಜುನಾಥ್, ಗಂಡಿ ಬಸವರಾಜ್, ನಾಗಲಾಪುರ ಗ್ರಾ.ಪಂ. ಅಧ್ಯಕ್ಷ ಈ.ಶ್ರೀನಿವಾಸ, ಸದಸ್ಯರಾದ ದುರುಗಮ್ಮ, ಸೋಮಣ್ಣ, ಜಿ.ಬಿ. ನಾಗರಾಜ್, ವೆಂಕಟೇಶ್, ಕಾರ್ಯ ದರ್ಶಿ ಸಿದ್ದಪ್ಪ, ಪ್ರಕಾಶ್, ಸಣ್ಣ ದುರುಗಪ್ಪ, ಟಿ.ಹುಲುಗಪ್ಪ, ಕೆ. ಸೋಮಣ್ಣ, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಎಸ್.ಸುರೇಶ್, ಕಾಳಪ್ಪ, ಚಂದ್ರಪ್ಪ, ಸಣ್ಣ ಹನುಮಕ್ಕ, ಕೆಂಚಪ್ಪ, ಬಸಪ್ಪ, ಎರಿಸ್ವಾಮಿ, ಕೆ.ಮಂಜುನಾಥ್, ಪಿಸಿ ತಾವರ‌್ಯಾ ನಾಯ್ಕ, ಇತರರು ಉಪಸ್ಥಿತರಿದ್ದರು.ಎನ್.ಪವಿತ್ರ ಪ್ರಾರ್ಥನೆ ಸಲ್ಲಿಸಿದರು. ನಾಗರಾಜ್ ಹಾಗೂ ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಕೆ.ವೀರೇಶ್ ಕಾರ್ಯಕ್ರಮ ನಿರೂಪಿಸಿದರು.ಮೆರವಣಿಗೆ: ವಾಲ್ಮೀಕಿ ಯುವಕ ಸಂಘದವರು ವಾಲ್ಮೀಕಿ ಜಯಂತಿ ಅಂಗವಾಗಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಿದರು.ಡೊಳ್ಳು, ಹಲಗೆ ಹಾಗೂ ಸಕಲ ವಾದ್ಯಗಳ ಸಮೇತ ಪ್ರಾರಂಭವಾದ ಮೆರವಣಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿ ಕಾಳಮ್ಮ ದೇವಿ ದೇವಸ್ಥಾನದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ನಾಯಕ ಸಮಾಜದ ಹಿರಿಯರು ಕಿರಿಯರು ಮಕ್ಕಳು ಮತ್ತು ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮಹರ್ಷಿಯವರ ಜಯಘೋಷಗಳನ್ನು ಕೂಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.