ಬೆಂಗಳೂರು: ಭಾರತದ ವಿಕಾಸ್ ಗೌಡ ಅಮೆರಿಕದಲ್ಲಿ ನಡೆಯುತ್ತಿರುವ ಡಿಸ್ಕಸ್ ಥ್ರೋ ಚಾಲೆಂಜ್ನಲ್ಲಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾರೆ.

ಒಕ್ಲಾಹಾಮಾದ ನಾರ್ಮನ್ನಲ್ಲಿ ಗುರುವಾರ ನಡೆದ ಕೂಟದಲ್ಲಿ ಅವರು 66.28 ಮೀಟರ್ ದೂರ ಡಿಸ್ಕ್ ಎಸೆದರು. ಈ ಮೂಲಕ ತಾವೇ ಈ ಹಿಂದೆ ನಿರ್ಮಿಸಿದ್ದ 64.96 ಮೀ. ದೂರದ ದಾಖಲೆಯನ್ನು ಅಳಿಸಿ ಹಾಕಿದರು. ಅಷ್ಟು ಮಾತ್ರವಲ್ಲದೇ, ಈ ಸಾಧನೆ ಮೂಲಕ ಈ ಋತುವಿನಲ್ಲಿ ವಿಶ್ವದ ಡಿಸ್ಕಸ್ ಥ್ರೋ ಸ್ಪರ್ಧಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

`ಈ ಸಾಧನೆಯಿಂದ ನನಗೆ ಖುಷಿಯಾಗಿದೆ. ಮತ್ತಷ್ಟು ವಿಶ್ವಾಸ ಮೂಡಿದೆ. ಕಳೆದ ವರ್ಷಕ್ಕಿಂತ ಈ ಬಾರಿ ತಾಂತ್ರಿಕವಾಗಿ ಸುಧಾರಿಸಿದ್ದೇನೆ~ ಎಂದು ಕರ್ನಾಟಕದ ವಿಕಾಸ್ ಹೇಳಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅವರು ಈಗಾಗಲೇ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.

ವಿಕಾಸ್ ಅವರ ತಂದೆ ಶಿವೇಗೌಡ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. `ದೂರವಾಣಿ ಮೂಲಕ ವಿಕಾಸ್ ನನಗೆ ವಿಷಯ ತಿಳಿಸಿದನು. ಅವನ ಸಾಧನೆ ಹೆಮ್ಮೆ ಎನಿಸಿದೆ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.