ಗುರುವಾರ , ಜೂನ್ 24, 2021
27 °C

ವಿ.ಕೆ.ಸಿಂಗ್‌, ರಾಖಿ ಸಾವಂತ್‌ ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭೂಸೇನೆಯ ನಿವೃತ್ತ ಮುಖ್ಯಸ್ಥ ಜನರಲ್‌ ವಿ.ಕೆ.­ಸಿಂಗ್‌ ಶನಿವಾರ ಇತರ ನಿವೃತ್ತ ಸೈನಿಕ­ರೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆ­ಯಾದರು. ಅಲ್ಲದೇ ಬಾಲಿವುಡ್‌ ನಟಿ ರಾಖಿ ಸಾವಂತ್‌ ಸಹ ಬಿಜೆಪಿ ಸೇರಿದರು.ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ ವಿ.ಕೆ. ಸಿಂಗ್‌ ಬಿಜೆಪಿಯೊಂದೇ ‘ರಾಷ್ಟ್ರ­ವಾದಿ’ ಪಕ್ಷ ಎಂದರು. ‘ರಾಷ್ಟ್ರವಾದಿ, ಸ್ಥಿರ ಮತ್ತು ಸದೃಢ ಸರ್ಕಾರ ರಚಿಸಲು ಬಿಜೆಪಿಗೆ ಸೇರಿದ್ದೇವೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ  ಭದ್ರತಾ ಪಡೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಿದೆ’  ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು.ಇತ್ತೀಚೆಗೆ ಮುಂಬೈ ಕರಾವಳಿಯಲ್ಲಿ ನಡೆದ ಜಲಾಂತರ್ಗಾಮಿ ದುರಂತ ಉಲ್ಲೇ­ಖಿಸಿದ ಸಿಂಗ್‌, ಕೇಂದ್ರದ ಯುಪಿಎ ಸರ್ಕಾರ ಭದ್ರತಾ ಪಡೆಗಳ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿಲ್ಲ ಎನ್ನುವುದಕ್ಕೆ ಈ ಘಟನೆಯ ಸಾಕ್ಷಿ ಎಂದರು. ‘ರಕ್ಷಣಾ ಪಡೆಗೆ ಹೊಸ ಸ್ಪರ್ಶ ನೀಡ­ಬೇಕಾದ ಅಗತ್ಯ ಇದೆ. ಆದರೆ ಅದು ಇನ್ನೂ ನೆರೆವೇರಿಲ್ಲ’ ಎಂದು ಸಿಂಗ್‌ ಹೇಳಿದರು.ಶಿಂಧೆಗೆ ನೋಟಿಸ್‌

ಕೆಲ ವ್ಯಕ್ತಿಗಳ ವಿರುದ್ಧ ಮಾಡಿರುವ ‘ವಿಶ್ವಾಸಘಾತ’ ಮತ್ತು ‘ದೇಶ­ದ್ರೋಹ’ ಆರೋಪಗಳಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ ಶಿಂಧೆ ಅವರಿಗೆ ವಿ.ಕೆ.ಸಿಂಗ್‌ ತಮ್ಮ ವಕೀಲರ ಮೂಲಕ ನೋಟಿಸ್‌ ನೀಡಿದ್ದಾರೆ. ನೋಟಿಸ್‌ಗೆ ಉತ್ತರ ನೀಡದೇ ಇದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾ­ಗು­ವುದಾಗಿ  ಸಿಂಗ್‌ ಹೇಳಿದ್ದಾರೆ.ಅಧಿಕಾರಿಗಳು ರಾಜಕೀಯ ಸೇರದಂತೆ ಕಾನೂನು ರಚಿಸಿ

ನಿವೃತ್ತಿಯ ನಂತರ ಅಧಿಕಾರಿಗಳು ಒಂದು ನಿರ್ದಿಷ್ಟ ಅವಧಿಯ ವರೆಗೆ ಯಾವುದೇ ರಾಜ­ಕೀಯ ಪಕ್ಷಗಳಿಗೆ ಸೇರದಂತೆ ಕಾನೂನು ರಚಿಸಬೇಕು ಎಂದು ರಾಜಕೀಯ ಪಕ್ಷ­ಗಳು ಶನಿವಾರ ಆಗ್ರಹಿಸಿವೆ.

‘ನಿವೃತ್ತಿಯ ನಂತರ ಅಧಿಕಾರಿಗಳು ಹತ್ತು ವರ್ಷಗಳ ವರೆಗೆ ಯಾವುದೇ ರಾಜಕೀಯ ಪಕ್ಷ ಸೇರುವನ್ನು ನಿಷೇಧಿ­ಸಬೇಕು’ ಎಂದು ಸಮಾಜವಾದಿ ಪಕ್ಷ ಹೇಳಿದೆ.  ಆದರೆ ಭೂಸೇನೆ ನಿವೃತ್ತ ಮುಖ್ಯಸ್ಥ ವಿ.ಕೆ.­ಸಿಂಗ್‌ ಬಿಜೆಪಿ ಸೇರ್ಪ­ಡೆ­­ಯಾಗಿ­ರುವುದರಲ್ಲಿ ಏನೂ ವಿಶೇಷ ಇಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.