ಭಾನುವಾರ, ಏಪ್ರಿಲ್ 11, 2021
33 °C

ವಿಕೋಪ ನಿರ್ವಹಣೆಗೆ ತರಬೇತಿ ಅಗತ್ಯ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ವಿಕೋಪಗಳು ಕೇವಲ ಪ್ರಕೃತಿ ಯಿಂದ ಅಲ್ಲದೆ ಮಾನವ ನಿರ್ಮಿತ ಕೂಡಾ ಆಗಿದ್ದು, ವಿಕೋಪ ನಿರ್ವಹಣೆಗೆ  ಅಧಿಕಾರಿಗಳಿಗೆ ತರಬೇತಿ ಅಗತ್ಯ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ಸಹಯೋಗ ದೊಂದಿಗೆ ಮೂರು ದಿನಗಳ ಕಾಲ ನಡೆ ಯುವ  ವಿಕೋಪ ನಿರ್ವಹಣೆ  ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿವೃಷ್ಠಿ  ಹಾಗೂ ಅನಾವೃಷ್ಠಿಗೆ ಒಳಗಾ ಗುತ್ತಿರುವಂತಹ ಜಿಲ್ಲೆಯಾಗಿದ್ದು, ವಿಕೋಪ ನಿರ್ವಹಣೆ ತರಬೇತಿಯು ಅಧಿಕಾರಿಗಳಿಗೆ ನೀಡುತ್ತಿರುವ ತರಬೇತಿ ಗಳಲ್ಲೆೀ  ಉತ್ತಮ ತರಬೇತಿಯಾದ್ದು, ಇದರ ಸದುಪಯೋಗ ಪಡಿಸಿಕೊಳ್ಳು ವಂತೆ ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ರವಿಕುಮಾರ ಎಚ್. ನಾಯಕ,  ಈಗಾಗಲೇ ವಿಪತ್ತು ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಿದಂತಹ ಅಧಿಕಾರಿ ಗಳು ಅನುಭವಗಳನ್ನು ಹಂಚಿಕೊಳ್ಳುವು ದರ ಮೂಲಕ ಹಾಗೂ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಪರಿಹಾರ ಕಂಡು ಕೊಳ್ಳಬೇಕೆಂದು ಸಲಹೆ ನೀಡಿದರು.ಜಿಲ್ಲೆಯ ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ಹಾಗೂ ಆಯ್ದ ಎನ್.ಜಿ.ಓ. ಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯನ್ನು ಆಡಳಿತ ತರಬೇತಿ ಸಂಸ್ಥೆ ಮೈಸೂರಿನ ಬೋಧಕ ಡಾ. ಜೆ.ಆರ್. ಪರಮೇಶ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಚ್.ಎಸ್. ನಾಗರಾಳ ಆಯೋಜಿಸಿದ್ದಾರೆ.ಜಿ.ಸಿ. ತಲ್ಲೂರು ಅವರು ಬೆಣ್ಣಿ ಹಳ್ಳ ಪ್ರವಾಹದಿಂದ ಜಿಲ್ಲೆ ಯಲ್ಲಿ ಉಂಟಾಗುವ ಪ್ರವಾಹ ಹಾಗೂ ಪರಿಹಾರ ಕುರಿತು ಪ್ರಶಿಕ್ಷಣಾರ್ಥಿ ಗಳೊಂದಿಗೆ ಚರ್ಚಿಸಿದರು. ಜಿಲ್ಲಾ ತರಬೇತಿ ಸಂಸ್ಥೆ  ಪ್ರಾಂಶುಪಾಲ ಎಚ್. ಎಸ್. ನಾಗರಾಳ ಸ್ವಾಗತಿಸಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.