ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿ ಕಬ್ಬಳ ಗ್ರಾಮದಲ್ಲಿ ಗುರುವಾರ ಸಂಜೆ ಗ್ರಾಮ ದೇವತೆ ಕತ್ತಿಕಲ್ಲಾಂಬಾ ದೇವಿ ಸಿಡಿ ಉತ್ಸವ ವೈಭವದಿಂದ ನೆರವೇರಿತು.

ಸಿಡಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಅಕ್ಕಪಕ್ಕದ ಗ್ರಾಮಗಳಾದ ಹೊಸಹಟ್ಟಿ ಆಂಜನೇಯಸ್ವಾಮಿ, ಬೊಮ್ಮೇನಹಳ್ಳಿ ಕರಿಯಮ್ಮದೇವಿ ಹಾಗೂ ಮಲ್ಲೇನಹಳ್ಳಿಯ ತಿರುಮಲೇಶ್ವರ ಸ್ವಾಮಿ ದೇವರುಗಳ ಸಮಕ್ಷಮದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ದೇವಿಯ ಸಿಡಿ ಉತ್ಸವಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಸಿಡಿ ಉತ್ಸವದ ಅಂಗವಾಗಿ ಭಕ್ತರು ಎತ್ತಿನ ಗಾಡಿಯಲ್ಲಿ ತಂದಿದ್ದ ಪಾನಕ ವಿತರಿಸಿ ಹರಕೆ ತೀರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.