ಮಂಗಳವಾರ, ಜನವರಿ 21, 2020
19 °C

ವಿಜೃಂಭಣೆಯ ರಂಗನಾಥಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ತಾಲ್ಲೂಕಿನ ಕಸಬಾ ಹೋಬಳಿ ಗುತ್ತಿನಕೆರೆ ರಂಗನಾಥಸ್ವಾಮಿ ಮಹಾ ರಥೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ರಥ ಎಳೆಯುವ ಮೂಲಕ ಹರಕೆ ತೀರಿಸಿಕೊಂಡರು.ಗ್ರಾಮದ ರಂಗನಾಥ ಸ್ವಾಮಿ ಮಹಾ ರಥೋತ್ಸವ ಅಂಗವಾಗಿ ಜ14ರಿಂದ 19ರ ವರೆಗೆ ವಿವಿಧ ಧಾರ್ಮಿಕ    ಕಾರ್ಯ ಕ್ರಮ ಆಯೋಜಿಸಲಾಗಿದ್ದು, ಮಂಗಳ ವಾರ ಬೆಳಿಗ್ಗೆಯಿಂದ ದೇವಾ ಲಯದಲ್ಲಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ಗಳು ಶಾಸ್ತ್ರೋಕ್ತವಾಗಿ ನಡೆದವು.ನಂತರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಲ ಕರಡೇವು ವಾದ್ಯದೊಂದಿಗೆ ರಥ ಬೀದಿಯಲ್ಲಿ ಕರೆ ದೊಯ್ಯಲಾಯಿತು. ಬಳಿಕ ಸುತ್ತ- ಮುತ್ತಲ ಗ್ರಾಮಗಳಾದ ಹಾರನಹಳ್ಳಿ ಕೋಡಮ್ಮದೇವಿ, ಯಳವಾರೆ ಹುಚ್ಚಮ್ಮದೇವಿ ಸಮ್ಮುಖದಲ್ಲಿ ಉತ್ಸವ ರಥ ಪ್ರದಕ್ಷಿಣೆ ಮಾಡಿದ ನಂತರ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಬಳಿಕ ರಥದ ಗಾಲಿಗೆ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆಯುತ್ತಿದ್ದಂತೆ ನೂರಾರು ಭಕ್ತರು ರಂಗನಾಥ ಸ್ವಾಮಿ ಉಘೇ, ಉಘೇ ಎಂದು ಜಯಘೋಷ ಹಾಕುತ್ತಾ ರಥವನ್ನು ಎಳೆದರು.ರಥ ಚಲಿಸುತ್ತಿದ್ದಂತೆ ನವ ನಧು-ವರರು ಹಾಗೂ ಯುವಕ ಯುವತಿಯರು ರಥದ ಕಲಶಕ್ಕೆ ಬಾಳೆಹಣ್ಣು, ಉತ್ತತ್ತಿ ತೂರಿ ಸಂಭ್ರಮಿಸಿದರು.ರಂಗನಾಥಸ್ವಾಮಿ ಜಾತ್ರೆಗೆ ಸುತ್ತ-ಮುತ್ತಲ ಹಳ್ಳಿಗಳ ಭಕ್ತರಲ್ಲದೆ ಹೊರ ಜಿಲ್ಲೆಗಳಿಂದಲೂ ಜನತೆ ಜಾತ್ರೆಯಲ್ಲಿ ಪಾಲ್ಗೊಂಡು ಅಲಂಕೃತ ಮೂರ್ತಿಯನ್ನು ಕಣ್ತುಂಬಿಕೊಂಡರು.

 

ಪ್ರತಿಕ್ರಿಯಿಸಿ (+)