ಬುಧವಾರ, ಜೂನ್ 23, 2021
24 °C

ವಿಜ್ಞಾನ ಮಾದರಿಗಳಿಗೆ ಮಹತ್ವ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಗಣಿತ, ಭೌತಶಾಸ್ತ್ರ, ರಸಾ ಯನಶಾಸ್ತ್ರ ಹೀಗೆ ವಿವಿಧ ವಿಜ್ಞಾನ ವಿಭಾಗಗಳಲ್ಲಿ ಮಾದರಿಗಳನ್ನು ಮಾಡುವ ಮೂಲಕ ಜಗತ್ತಿನ ಕಠಿಣ ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಕಂಡು ಹಿಡಿಯ ಬಹುದಾಗಿದೆ. ಈ ದಿಶೆಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳಿಗೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲೀಕಾರ ನುಡಿದರು.ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜಿನ ವಿಜ್ಞಾನ ಸಂಘ ಹಾಗೂ ಗಣಿತ ವಿಭಾಗದ ಸಹಯೋಗದಲ್ಲಿ ಇತ್ತೀಚೆಗೆ `ರಾಷ್ಟ್ರೀಯ ವಿಜ್ಞಾನ ದಿನ~ ಮತ್ತು `ಗಣಿತ ವರ್ಷ~ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಯುವ ವಿಜ್ಞಾನಿಗೆ ವಿ.ವಿ. ವತಿಯಿಂದ ಐದು ಸಾವಿರ ರೂಪಾಯಿಗಳನ್ನು ಕೊಡುವುದಾಗಿ ಅವರು ತಿಳಿಸಿದರು.ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಹಿರಿಯ ವಿಜ್ಞಾನಿ ಪ್ರೊ.ಎ.ಎನ್.ಪರು ಶೆಟ್ಟಿ ಅವರು ತಾವು ಕೈಗೊಂಡ ಸಂಶೋ ಧನೆಗಳ ಮಹತ್ವವನ್ನು ವಿವರಿಸಿದರು. ಬಿಎಸ್‌ಸಿ ವಿದ್ಯಾರ್ಥಿಗಳು ತಯಾರಿಸಿದ 66 ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ವಿಜ್ಞಾನ ಮಹಾವಿದ್ಯಾ ಲಯದ ಪ್ರಾಚಾರ್ಯ ಡಾ.ಎ.ಎ.ಹೂಲಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ಡಾ.ಜಿ.ಎಚ್.ಮಳಿಮಠ, ಕಾರ್ಯಕ್ರಮ ಸಂಯೋಜಕ ಡಾ.ಎಸ್.ಸಿ. ಶಿರಾಳಶೆಟ್ಟಿ, ವಿ.ವಿ.ಯ ಗಣಿತ ವಿಭಾಗದ ನಿವೃತ್ತ ಉಪನ್ಯಾಸಕ ಪ್ರೊ.ಪಿ.ಎಸ್. ನೀರಲಗಿ, ಪ್ರೊ.ಎಸ್.ಎಸ್.ಬೆಂಚೆಟ್ಟಿ, ಪ್ರೊ.ಬಿ.ಬಸವನಗೌಡ, ಪ್ರೊ.ಎಸ್. ಸಿ.ಪಿ.ಹಳಕಟ್ಟಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ.ಎನ್.ಎಸ್.ಸಂಕೇಶ್ವರ, ಪ್ರೊ.ತೋಣನ್ನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ನಂತರ ಗಣಿತ ಮಾದರಿಗಳ ಬಗ್ಗೆ ಪ್ರಬಂಧ ಮಂಡನೆ ಮತ್ತು ಸ್ಪರ್ಧೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.