ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ಅಧೀನ ಕಾಲೇಜುಗಳಲ್ಲಿ ಪರೀಕ್ಷೆಗೆ 30 ನಿಮಿಷಗಳ ಮೊದಲು ಆನ್ಲೈನ್ನಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಪಶ್ನೆಪತ್ರಿಕೆ ಬಹಿರಂಗಗೊಳ್ಳವುದನ್ನು ತಡೆಗಟ್ಟಲು ಮುಂದಾಗಿದೆ.

ಈ ವಿನೂತನ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ನೋಡಿಕೊಳ್ಳಲು ಬಿಗಿ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಾಗಾಟ ಮಾಡುವುದು ಹಾಗೂ ದಾಸ್ತಾನು ಮಾಡುವ ತಲೆ ನೋವು ವಿಶ್ವವಿದ್ಯಾಲಯಕ್ಕೆ ತಪ್ಪಿದಂತಾಗಿದೆ.

ಜನವರಿಯಲ್ಲಿ ವಿಟಿಯು ನಡೆಸಿದ ಪರೀಕ್ಷೆಯಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿನ ತನ್ನ ಅಧೀನ ಕಾಲೇಜುಗಳಿಗೆ ಪರೀಕ್ಷೆಗೆ 30 ನಿಮಿಷ ಮೊದಲು ಆಲ್ಲೈನ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಪೂರೈಸಿತ್ತು. ಪ್ರಾಯೋಗಿಕವಾಗಿ ನಡೆಸಿದ ಈ ಯೋಜನೆ ಯಶಸ್ವಿಯಾದ ಕಾರಣ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸುವುದು, ಪ್ಯಾಕ್ ಮಾಡುವುದು, ಅವುಗಳನ್ನು ಸುರಕ್ಷಿತವಾಗಿ ಕಾಲೇಜುಗಳಿಗೆ ತಲುಪಿಸುವ ಜವಾಬ್ದಾರಿಯುತ ಕೆಲಸಗಳು ತಪ್ಪಿದಂತಾಯಿತು.

ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅಗತ್ಯವಿರುವ ಪಾಸ್ವರ್ಡ್ ಅನ್ನು ಕಾಲೇಜಿಗೆ ಕೊನೆ ಕ್ಷಣದಲ್ಲಿ ನೀಡಲಾಗುವುದು. ಸಂಬಂಧಪಟ್ಟ ಕಾಲೇಜುಗಳಲ್ಲಿ ಅಲ್ಲಿನ ಪ್ರಿಂಟರ್ನಲ್ಲಿ ಮುದ್ರಿಸಿಕೊಂಡು, ಪರೀಕ್ಷಕರು ನೇರವಾಗಿ ಪರೀಕ್ಷಾ ಕೊಠಡಿಗೆ ಹೋಗುತ್ತಾರೆ. ಹಾಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು ತಪ್ಪುತ್ತದೆ ಎಂದು ಕುಲಪತಿ ಡಾ. ಎಚ್. ಮಹೇಶಪ್ಪ ತಿಳಿಸಿದರು.

ಆನ್ಲೈನ್ನಲ್ಲಿ ಕಳುಹಿಸಿದ ಪ್ರಶ್ನೆ ಪತ್ರಿಕೆಗಳನ್ನು ತಕ್ಷಣಕ್ಕೆ ಪ್ರಿಂಟ್ ತೆಗೆದುಕೊಳ್ಳಲು ಎಲ್ಲ ಕಾಲೇಜುಗಳಿಗೆ ಹೈಸ್ಪೀಡ್ ಪ್ರಿಂಟರ್ಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.

ವಿಟಿಯು ತನ್ನ ಅಧೀನ ಎಲ್ಲ ಕಾಲೇಜುಗಳಿಗಾಗಿಯೇ `ವರ್ಚುವಲ್ ಪ್ರೈವೇಟ್ ನೆಟ್ವರ್ಕ್~ (ವಿಪಿಎನ್) ಲೈನ್ ಇದೆ. ಉತ್ತಮ ಸಂಪರ್ಕ ಜಾಲವನ್ನು ಹೊಂದಿರುವ ಈ ಖಾಸಗಿ ನೆಟ್ವರ್ಕ್ನಿಂದಾಗಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.