ವಿದೇಶಕ್ಕೆ ಹೋಗಿ ಬಂದರೆ, ಕೃಷಿಯತ್ತ ನಿರ್ಲಕ್ಷ್ಯ ಮನೋಭಾವ ತಾಳುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ವಿದೇಶ ಸುತ್ತಿ ಬಂದರೂ ಕೃಷಿ ಮರೆತಿಲ್ಲ. ವಿಭಿನ್ನ ಪ್ರಯೋಗಗಳ ಮೂಲಕ ಪ್ರಗತಿಪರ ಕೃಷಿ ಸಾಧಕ ಎನಿಸಿದ್ದಾರೆ.
ಅವರ ಹೆಸರು ಎಸ್.ಬಿ. ಶಿವಕುಮಾರ್. ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ಪದವಿ ವ್ಯಾಸಂಗ ಮಾಡುವಾಗ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ, ವಿದೇಶದಿಂದ ಮರಳಿದ ನಂತರ ಕೃಷಿಯಲ್ಲಿ ತೊಡಗಿ ರೈತಪರವಾದ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರೈತರಿಗಾಗುತ್ತಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಮೇತ ಸಾರ್ವಜನಿಕರ ಮುಂದೆ ಬಿಚ್ಚಿಡುವ ಹಾಗೂ ಕೃಷಿಯಲ್ಲಿ ನಿರಂತರ ಪ್ರಯೋಗಕ್ಕೆ ಒಡ್ಡಿಕೊಂಡಿರುವ ಶಿವಕುಮಾರ್ ಅವರಿಗೆ, ಹತ್ತಾರು ವರ್ಷ ದೇಶ-ವಿದೇಶಗಳಲ್ಲಿ ನೌಕರಿ ಮಾಡಿದ ಅನುಭವವಿದೆ ಎಂದರೆ, ತಕ್ಷಣಕ್ಕೆ ನಂಬಲಾಗುವುದಿಲ್ಲ!

ಚಿತ್ರದುರ್ಗದಿಂದ ಸೌದಿ ಅರೇಬಿಯಾವರೆಗೆ...
1977ರಲ್ಲಿ ಚಿತ್ರದುರ್ಗದಲ್ಲಿ ಬಿಎಸ್ಸಿ ಪದವಿ ಮುಗಿಸಿ, ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಬಯಕೆ ಇತ್ತು. ಆದರೆ, ಕುಟುಂಬದ ಸ್ಥಿತಿ ಹೇಳಿಕೊಳ್ಳುವಂತಿರಲಿಲ್ಲ. ಬೆಂಗಳೂರಿಗೆ ಇಬ್ಬರು ಮಕ್ಕಳನ್ನು ಓದುವುದಕ್ಕೆ ಕಳುಹಿಸಲಾಗದು ಎಂದು ತಂದೆ ಹೇಳಿದಾಗ, ಕಿರಿಯ ಸಹೋದರನೇ ಬೆಂಗಳೂರಿನಲ್ಲಿ ಓದಲಿ ಎಂದು ತೀರ್ಮಾನ ಕೈಗೊಂಡರು ಶಿವಕುಮಾರ್. ಪತ್ರಿಕೆಗಳಲ್ಲಿ ಉಕ್ಕಿಗೆ ಇರುವ ಬೇಡಿಕೆ ಬಗ್ಗೆ ಮಾಹಿತಿ ಪಡೆದು, ಬೆಂಗಳೂರಿಗೆ ತೆರಳಿ `ವೆಲ್ಕಾಸ್ಟ್~ ಕಂಪೆನಿಯಲ್ಲಿ ಒಂದು ವರ್ಷ ಉಕ್ಕು ತಯಾರಿಕೆ ತಂತ್ರಜ್ಞಾನ ಪಡೆದರು. ನಂತರ ಅವಕಾಶಗಳು ಅವರನ್ನು ಹುಡುಕಿ ಬಂದವು.

ನಂತರ ಮಂಗಳೂರಿನ ಕೆನರಾ ಸ್ಪ್ರಿಂಗ್ಸ್ನಲ್ಲಿ 2 ವರ್ಷ, ಮದ್ರಾಸಿನ ಶಿವಾನಂದ ಸ್ಟೀಲ್ಸ್ನಲ್ಲಿ 2 ವರ್ಷ ಸಹಾಯಕ ಎಂಜಿನಿಯರ್ ಆಗಿ, ಅಲ್ಲಿಂದ ಎಬಿಸಿ ಕನ್ಸಲ್ಟೆನ್ಸಿ ಕಂಪೆನಿ ಉದ್ಯೋಗದ ಮೂಲಕ ಇಂಗ್ಲೆಂಡಿಗೆ ಪ್ರಯಾಣಿಸಿದರು. ಇರಾನಿನಲ್ಲಿ ನಡೆದ ರಾಜಕೀಯ ವ್ಯತ್ಯಾಸದಿಂದ 6 ತಿಂಗಳಿದ್ದ ವೀಸಾ 3 ತಿಂಗಳಿಗೆ ಕಡಿತಗೊಳಿಸಿದ ಪರಿಣಾಮ ಮರಳಿ ಸ್ವದೇಶಕ್ಕೆ ಬಂದರು. ಬಿಹಾರದ ರಾಂಚಿಗೆ ಬಂದ ಕೆಲಸದ ಆಹ್ವಾನವನ್ನ, ಅಲ್ಲಿನ ಪರಿಸ್ಥಿತಿ ಸರಿ ಇರದ ಕಾರಣಕ್ಕೆ ನಿರಾಕರಿಸಿದರು. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿದ್ದ ಕ್ಯಾಪ್ಸ್ಟೀಲ್ಸ್ನಲ್ಲಿ ಫೋರ್ಮನ್ ಆಗಿ 2 ವರ್ಷ ಕೆಲಸ ಮಾಡಿದರು. ಅಲ್ಲಿಂದ 5 ವರ್ಷದ ಒಪ್ಪಂದದ ಮೇರೆಗೆ ಸೌದಿ ಅರೇಬಿಯಾಕ್ಕೆ ತೆರಳಿದರು. ಸೌದಿ ಐರನ್ ಅಂಡ್ ಸ್ಟೀಲ್ಸ್ನಲ್ಲಿ ಅಧೀಕ್ಷಕ ಹುದ್ದೆ ನಿರ್ವಹಣೆ ಮಾಡಿದ ಅನುಭವ ಅವರದು.

ಒಪ್ಪಂದದ ಅವಧಿ ಮುಗಿದ ನಂತರ ವೆಸ್ಟ್ಇಂಡೀಸ್ ದೇಶದಲ್ಲಿ ಉದ್ಯೋಗಕ್ಕೆ ಆಹ್ವಾನ ಬಂದಿತ್ತು. ಆದರೆ, ಊರಿನ ಸೆಳೆತ ಹೆಚ್ಚಾಯಿತು. ಉಳಿಸಿದ ಹಣದಲ್ಲಿ ವ್ಯಾಪಾರ ಅಥವಾ ಕೃಷಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ದ ಸ್ಥಿತಿಯಲ್ಲಿದ್ದಾಗ, ಮನಸ್ಸು ಕೃಷಿಯ ಕಡೆಗೆ ಎಳೆಯಿತು. 1984ರಲ್ಲಿ 5 ಎಕರೆ ಭೂಮಿ ಖರೀದಿಸಿ, ಬತ್ತ, ಕಬ್ಬು, ಶೇಂಗಾ ಬೆಳೆಯಲು ಆರಂಭಿಸಿದರು. ಇವೆಲ್ಲ ಶಾಶ್ವತ ಆದಾಯ ತರುವುದಿಲ್ಲ ಎಂಬ ಕಾರಣಕ್ಕೆ ತೆಂಗು ಮತ್ತು ಅಡಿಕೆ ಬೆಳೆಯಲು ಮುಂದಾದರು. ಕೃಷಿಯಲ್ಲಿ ಬಂದ ಆದಾಯದಿಂದ ಮತ್ತೆ 7 ಎಕರೆ ಭೂಮಿ ಖರೀದಿಸಿದ್ದರಿಂದ ಒಟ್ಟು ಭೂಮಿ 12 ಎಕರೆಯಾಯಿತು. ಸುಮಾರು 25 ವರ್ಷದಿಂದ ಸಾವಯವ ಕೃಷಿ ಕೈಗೊಳ್ಳುತ್ತಾ ಬಂದಿರುವುದು ಶಿವಕುಮಾರ್ ಅವರ ವಿಶೇಷ.

ಪ್ರಸ್ತುತ ಶಿವಕುಮಾರ್ ಅವರು ತಮ್ಮ ತೋಟದಲ್ಲಿ 500 ತೆಂಗು, 1,400 ಅಡಿಕೆ, 100 ತೇಗ, ವಿವಿಧ ತಳಿಯ 25 ಮಾವು, 12 ವಿವಿಧ ಜಾತಿಯ ಹಲಸು, ನೇರಳೆ, ಸೀಬೆ, ನಿಂಬೆ, ಸೀತಾಫಲ ಬೆಳೆದಿದ್ದಾರೆ. ಬೆಳಗಿನ ಮತ್ತು ಸಂಜೆ ವೇಳೆಯಲ್ಲಿ ಹತ್ತಾರು ನವಿಲುಗಳ ಓಡಾಟವೂ ಇಲ್ಲಿ ಕಾಣಸಿಗುತ್ತದೆ.

ಕುರಿ ತುಪ್ಪಳ ತೆಂಗಿನ ಬುಡಕ್ಕೆ
ಎರಡು ವರ್ಷದ ಹಿಂದೆ `ವೆಲ್ವೆಟ್ ಬೀನ್ಸ್~ ಹಾಕಿ ಇಡೀ ತೋಟವನ್ನು ಹಸಿರು ಹೊದಿಕೆಯಿಂದ ಮುಚ್ಚಿದ್ದೆ. ತೇವಾಂಶ ಹೆಚ್ಚು ದಿನ ಉಳಿಯುತ್ತಿತ್ತು. ಜತೆಗೇ, ಬಳ್ಳಿಯಿಂದ ಉದುರಿದ ಎಲೆಗಳು ಉತ್ತಮ ಗೊಬ್ಬರವಾಗುತ್ತಿತ್ತು. ಈಗ ಅಡಿಕೆ ತೋಟದಲ್ಲಿ ಊಟಿ ಬೀನ್ಸ್ ಹಾಕಿದ್ದೇನೆ. ಬೀನ್ಸ್ ತರಕಾರಿಯಾಗಿ ಬಳಕೆಯಾಗುತ್ತಿರುವ ಕಾರಣ ಉತ್ತಮ ಲಾಭ ಸಿಗುತ್ತಿದೆ. ತೋಟಕ್ಕೆ ಗೊಬ್ಬರವಾಗುತ್ತದೆ. ಸ್ವಂತಕ್ಕೆ ಜೀವಾಮೃತ ತಯಾರಿಸಿ ಮರಗಳಿಗೆ ಹಾಕುತ್ತಿದ್ದೇನೆ. ಕುರಿ ತುಪ್ಪಳವನ್ನು ತಂದು ಪ್ರತಿ ತೆಂಗಿನಮರದ ಬುಡಕ್ಕೆ 5 ಮತ್ತು ಅಡಿಕೆ ಮರಕ್ಕೆ 1 ಕೆಜಿ ಹಾಕಿ ಮಣ್ಣಿನಿಂದ ಮುಚ್ಚಿದ್ದೇನೆ. ಒಮ್ಮೆ ನೀರು ಹಾಯಿಸಿದರೆ ಏಳೆಂಟು ದಿನ ತೇವಾಂಶ ಇರುತ್ತದೆ. ನೀರು ಹರಿಬಿಡಲು `ಮೈಕ್ರೋ ಜಂಕ್ಷನ್~ ವ್ಯವಸ್ಥೆ ಅಳವಡಿಸಿದ್ದು, ಕೇವಲ ಮೂರು ಗಂಟೆಯೊಳಗೆ ಇಡೀ ತೋಟಕ್ಕೆ ನೀರು ಹನಿಸಬಹುದು. ಈ ವಿಧಾನಗಳಿಂದ ಇಳುವರಿ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ ಎಂದು ಅವರು ಅನುಭವ ಹಂಚಿಕೊಂಡರು.

ಪ್ರತಿ ತೆಂಗಿನ ಗಿಡಕ್ಕೆ ಸರಾಸರಿ 150 ತೆಂಗಿನಕಾಯಿ ಸಿಗುತ್ತಿವೆ. ಇಂತಹ ಬರಗಾಲದಲ್ಲಿಯೂ ್ಙ 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಪಡೆದಿದ್ದೇನೆ. ಮರದಿಂದ ಬೀಳುವ ತೆಂಗು ಮತ್ತು ಅಡಕೆ ಗರಿಗಳನ್ನು ತೋಟಕ್ಕೇ ಬಂದು ಖರೀದಿಸುತ್ತಾರೆ. ಮಟ್ಟೆಗಳ ಮಾರಾಟದಿಂದ ನಿರ್ವಹಣಾ ವೆಚ್ಚ ಭರಿಸಬಹುದು. ತೋಟಗಾರಿಕೆ ಅಥವಾ ಕೃಷಿ ಗಂಭೀರವಾಗಿ ತೆಗೆದುಕೊಂಡರೆ ಖಂಡಿತ ಕೈಕಚ್ಚದು. ವಿಮಾನಗಳಲ್ಲಿ ಹಾರಾಡಿಕೊಂಡಿದ್ದ ನನಗೆ ಆರಂಭದಲ್ಲಿ ಆತಂಕ ಕಾಡುತ್ತಿತ್ತು. ಈಗ ತೋಟಗಾರಿಕೆ ಬದುಕಿನ ಭಾಗವಾಗಿದೆ. ತೋಟಕ್ಕೆ ಬಂದರೆ ಎಲ್ಲ ನೋವು ಮಾಯ ಎನ್ನುತ್ತಾರೆ.

ಪುತ್ರ ಹೈದರಾಬಾದ್ನಲ್ಲಿ ಉದ್ಯೋಗದಲ್ಲಿದ್ದಾನೆ. ಪುತ್ರಿ ಬಿ.ಎಸ್ಸಿ ಮುಗಿಸಿದ್ದು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಕಾದಿದ್ದಾಳೆ. ಮದುವೆಗೆ ಮುಂಚೆ ಪತ್ನಿಗೆ ತನ್ನ ಆಯ್ಕೆ ಕೃಷಿ-ತೋಟಗಾರಿಕೆ ಎಂದು ತಿಳಿಸಿದ್ದರಿಂದ ಆಕೆಯದ್ದೂ ನಿರಂತರ ಬೆಂಬಲವಿದೆ. ಹಾಗೆಂದು ಕೃಷಿ ಹೂವಿನ ಹಾಸಿಗೆಯಲ್ಲ. ವಾರಗಟ್ಟಲೆ ವಿದ್ಯುತ್ ಕೈಕೊಟ್ಟರೆ, ಕೂಲಿಯವರು ಬರದಿದ್ದರೆ, ಪಂಪ್ಸೆಟ್ ಸುಟ್ಟರೆ, ತೆಂಗು-ಅಡಿಕೆ ಬೆಲೆ ಕುಸಿದರೆ ಬೇಸರವಾಗುವುದುಂಟು ಎಂದು ಶಿವಕುಮಾರ್ ಹೇಳುತ್ತಾರೆ.

ಇಂದಿನ ಯುವಕರು ಕೃಷಿ-ತೋಟಗಾರಿಕೆ ಕುರಿತಂತೆ ನಕಾರಾತ್ಮಕ ಭಾವನೆ ಹೊಂದಿರುವುದು ಸರಿಯಲ್ಲ. ದೇಶದ ಬೆನ್ನೆಲುಬೇ ಕೃಷಿ. ಎಲ್ಲರೂ ಕೃಷಿಯಿಂದ ವಿಮುಖರಾದರೆ ದೇಶ ಉಳಿಯಲು ಸಾಧ್ಯವೆ? ಎಂಬ ಪ್ರಶ್ನೆ ಎಲ್ಲರೂ ಹಾಕಿಕೊಳ್ಳಬೇಕು. ಎಲ್ಲಾ ಕೆಲಸಗಳಲ್ಲೂ ರಿಸ್ಕ್ ಇದ್ದೇ ಇರುತ್ತದೆ. ಹೀಗಾಗಿ, ಕೃಷಿಯಲ್ಲೇ ಏಕೆ ರಿಸ್ಕ್ ತೆಗೆದುಕೊಳ್ಳಬಾರದು? ದುಡಿಮೆಯಲ್ಲಿ ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಇದ್ದರೆ ಖಂಡಿತಾ ಯಶಸ್ಸು ಸಿಗುತ್ತದೆ ಎನ್ನುವುದು ಅವರ ಅನುಭವ ಮಾತು. ಅವರ ಸಂಪರ್ಕಕ್ಕೆ ಮೊಬೈಲ್: 96118 90813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.