ಮಂಗಳವಾರ, ಏಪ್ರಿಲ್ 13, 2021
23 °C

ವಿದೇಶ: ಸಂಕ್ಷಿಪ್ತ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇ-ಮೇಲ್ ಪಟ್ಟಿ ಬಿಚ್ಚಿಟ್ಟ ತಾಲಿಬಾನ್ವಾಷಿಂಗ್ಟನ್ (ಪಿಟಿಐ): ತಾಲಿಬಾನ್ ಸಂಘಟನೆಯು ತಾನು ಸಂದೇಶ ಕಳುಹಿಸುವ ವ್ಯಕ್ತಿಗಳ ಇ-ಮೇಲ್ ವಿಳಾಸಗಳ ಪಟ್ಟಿಯನ್ನು ಆಕಸ್ಮಿಕವಾಗಿ ಬಹಿರಂಗಪಡಿಸಿದೆ.

 

ಈ ಪಟ್ಟಿಯಲ್ಲಿ ಸಂಘಟನೆಯ ಉಗ್ರರು ಹಾಗೂ ಪತ್ರಕರ್ತರ ಇ-ಮೇಲ್ ವಿಳಾಸಗಳು ಇವೆ. ತಾಲಿಬಾನ್ ವಕ್ತಾರ ಕ್ವಾರಿ ಯೂಸುಫ್ ಶನಿವಾರ ಎಲ್ಲರಿಗೂ ಇ-ಮೇಲ್‌ಗಳನ್ನು ಕಳುಹಿಸುವ ಸಂದರ್ಭದಲ್ಲಿ ಈ ಪ್ರಮಾದ ಆಗಿದೆ.ನಿರ್ಧಾರ ಕಾಯ್ದಿರಿಸಿದ ಪಾಕ್
ಇಸ್ಲಾಮಾಬಾದ್ (ಪಿಟಿಐ): ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನಮಾನ ನೀಡುವ ಬಗ್ಗೆ ಪಾಕಿಸ್ತಾನ ಸಂಸತ್ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ ನಿರ್ಧಾರವನ್ನು ಕಾಯ್ದಿರಿಸಿದೆ. ಈ ಸಮಿತಿಯ ಕೆಲವು ಸದಸ್ಯರು, ಭಾರತಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನ ನೀಡಿದರೆ ಆಮದು- ರಫ್ತು ಪಟ್ಟಿಯಲ್ಲಿ ಕೆಲವು ಸರಕುಗಳ ಮೇಲಿನ ನಿಷೇಧ ರದ್ದಾಗುತ್ತದೆ. ಇದರಿಂದ ದೇಶದ ಕೃಷಿ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.ಗಾಂಧೀಜಿ ಪತ್ರಗಳು ಹರಾಜಿಗೆ

ಲಂಡನ್ (ಪಿಟಿಐ): ಮಹಾತ್ಮ ಗಾಂಧೀಜಿಯವರು ರವೀಂದ್ರನಾಥ ಟ್ಯಾಗೋರ್ ಅವರ ಅಣ್ಣ ದ್ವಿಜೇಂದ್ರನಾಥ ಅವರಿಗೆ ಬರೆದಿದ್ದ ಪತ್ರ ಸೇರಿದಂತೆ ಅವರ ಎರಡು ಪತ್ರಗಳನ್ನು ಲಂಡನ್‌ನ ಸೂತ್‌ಬಿ ಹರಾಜು ಸಂಸ್ಥೆ ಡಿಸೆಂಬರ್ 12ರಂದು ಹರಾಜು ಹಾಕಲಿದೆ.ಭಾರತೀಯ  ಮೀನುಗಾರರ ಬಂಧನ

ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನ ವ್ಯಾಪ್ತಿಯ ಸಮುದ್ರವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ 12ಮಂದಿ ಭಾರತೀಯ ಮೀನುಗಾರರನ್ನು ಮತ್ತು 2 ದೋಣಿಗಳನ್ನು ಪಾಕಿಸ್ತಾನ ನೌಕಾಪಡೆ ವಶಕ್ಕೆ ತೆಗೆದುಕೊಂಡಿದೆ.ಗಗನ ಚುಂಬಿ ಕಟ್ಟಡದಲ್ಲಿ ಬೆಂಕಿ

ದುಬೈ (ಐಎಎನ್‌ಎಸ್): ಇಲ್ಲಿನ 34 ಮಹಡಿಗಳುಳ್ಳ `ಟಾಮ್‌ವೀಲ್ ಟವರ್~ ಎಂಬ ಕಟ್ಟಡದಲ್ಲಿ ಭಾನುವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.