ನೈಜಿರಿಯಾ: ಭಾರತ ನೆರವು
ಅಬುಜಾ (ಪಿಟಿಐ): ನೈಜಿರಿಯಾದ ವಿದ್ಯುತ್ ವಲಯ ಬಲವರ್ಧನೆಗೆ 10 ಕೋಟಿ ಅಮೆರಿಕನ್ ಡಾಲರ್ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ.ದಕ್ಷಿಣ ರಾಜ್ಯ ಲಾಗೋಸ್ನಲ್ಲಿ ವಿದ್ಯುತ್ ಪೂರೈಕೆ ಉಪಕರಣಗಳ ತಯಾರಿಕಾ ಘಟಕದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನೈಜಿರಿಯಾದಲ್ಲಿನ ಭಾರತೀಯ ಹೈಕಮೀಷನರ್ ಮಹೇಶ್ ಸಚ್ದೇವ್, ನೆರವು ನೀಡಿಕೆಯ ಈ ಒಪ್ಪಂದಕ್ಕೆ ಉಭಯ ದೇಶಗಳು ಶೀಘ್ರ ಸಹಿ ಹಾಕಲಿವೆ ಎಂದು ತಿಳಿಸಿದರು.

12 ಭಾರತೀಯ ಕಂಪೆನಿಗಳು ನೈಜಿರಿಯಾದ ವಿದ್ಯುತ್ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿವೆ. ಅನಿಶ್ಚಿತತೆ ಹಾಗೂ ವ್ಯಾಪಕ ಭ್ರಷ್ಟಾಚಾರದಿಂದಾಗಿ ನೈಜಿರಿಯಾವು ತನ್ನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ವಿಫಲವಾಗಿದೆ.

30 ಕೈದಿಗಳು ಪರಾರಿ
ಕಾಬೂಲ್ (ಎಎಫ್ಪಿ): ಆಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ರಾಜಧಾನಿ ಸಾರಿ ಪುಲ್ನ ಜೈಲೊಂದರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ 3 ಮಂದಿ ಮೃತಪಟ್ಟಿದ್ದು, 30 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಉಗ್ರರು ಜೈಲಿನ ಮೇಲೆ ಸತತ ಹತ್ತು ನಿಮಿಷಗಳ ಕಾಲ ದಾಳಿ ನಡೆಸಿದ್ದಾರೆ. ಇದರಿಂದಾಗಿ 28 ಜನ ಗಾಯಗೊಂಡಿದ್ದಾರೆ ಮೂಲಗಳು ತಿಳಿಸಿವೆ.

ಒತ್ತೆಯಾಳು ಬಿಡುಗಡೆ
ಮನಿಲಾ (ಐಎಎನ್ಎಸ್): ಸುಮಾರು ಎಂಟು ತಿಂಗಳ ಒತ್ತೆಯ ನಂತರ 21 ಫಿಲಿಪೀನ್ಸ್ ನಾವಿಕರನ್ನು ಸೋಮಾಲಿಯ ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಈ ನಾವಿಕರೆಲ್ಲರೂ ಗ್ರೀಕ್ ಟ್ಯಾಂಕರ್ ಎಂಟಿ ಲಿಕ್ವಿಡ್ ವೆಲ್ವೆಟ್ ಹಡಗಿನ ಸಿಬ್ಬಂದಿ ಆಗಿದ್ದು, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕಡಲ್ಗಳ್ಳರು ಈ ಹಡಗನ್ನು ಅಪಹರಿಸಿದ್ದರು.

ಆಫ್ಘನ್ ಉಗ್ರರು ಶರಣು
ಕಾಬೂಲ್ (ಐಎಎನ್ಎಸ್): ಸರ್ಕಾರದ ಶಾಂತಿ ಸಂಧಾನ ಪ್ರಕ್ರಿಯೆಗೆ ಓಗೊಟ್ಟ 40 ಆಫ್ಘಾನಿಸ್ತಾನ ಉಗ್ರರು, ತಮ್ಮ ಉಗ್ರಗಾಮಿ ಚಟುವಟಿಕೆಗಳನ್ನು ತ್ಯಜಿಸಿ ಸರ್ಕಾರದ ಮುಂದೆ ಶರಣಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ಒಂದು ವರ್ಷದ ಅವಧಿಯಲ್ಲಿ 3 ಸಾವಿರಕ್ಕೂ ಹೆಚ್ಚಿನ ಉಗ್ರರು ಸರ್ಕಾರದ ಶಾಂತಿ ಸಂಧಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರತದ ಆರ್ಥಿಕತೆ ಕುಸಿತ
ವಿಶ್ವಸಂಸ್ಥೆ (ಪಿಟಿಐ): ಯುರೋಪ್ನ ಆರ್ಥಿಕ ಕುಸಿತ ವಿಶ್ವ ಆರ್ಥಿಕತೆಗೆ ದೊಡ್ಡ ಬೆದರಿಕೆ ಒಡ್ಡುತ್ತಿದೆ ಎಂದು ಹೇಳಿರುವ ವಿಶ್ವಸಂಸ್ಥೆ, ಈ ಸಾಲಿನಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಶೇ 6.7ಕ್ಕೆ ಕುಸಿಯಲಿದೆ ಎಂದು ಅಂದಾಜು ಮಾಡಿದೆ.

ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಆರ್ಥಿಕ ವರದಿಯಲ್ಲಿ 2012ನೇ ಸಾಲಿನಲ್ಲಿ ಭಾರತದ ವೃದ್ಧಿ ದರ ಶೇ 7.7ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿತ್ತು.

ಭಾರತೀಯರಿಂದ ಉದ್ಯೋಗಾವಕಾಶ
ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ಭಾರತೀಯರು ಮಾಡಿರುವ ಬಂಡವಾಳ ಹೂಡಿಕೆಯಿಂದಾಗಿ ಅಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಚಿಂತಕರ ಚಾವಡಿ `ಕಾರ್ನೆಗಿ ಎಂಡೊವ್ಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್~ನಲ್ಲಿ ಉಪನ್ಯಾಸ ನೀಡಿದ ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಹಾಗೂ ಮಧ್ಯ ಏಷ್ಯಾ ವಿಭಾಗದ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್, ಭಾರತದಿಂದ 2010ರಲ್ಲಿ 330 ಕೋಟಿ ಡಾಲರ್ಗಳಷ್ಟು ಬಂಡವಾಳ ಹರಿದುಬಂದಿದ್ದು, ಇದರಿಂದ ಅಮೆರಿಕದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.