ಉಡುಪಿ: ‘ಉಡುಪಿ ನಗರಕ್ಕೆ ಮಂಜೂರಾಗಿರುವ 30 ಹೊಸ ನರ್ಮ್ ಬಸ್ಗಳ ಸಂಚಾರ ವೇಳಾಪಟ್ಟಿಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ನಿಗದಿಪಡಿಸ ಲಾಗವುದು’ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿ ನೇಟಿವ್ ಆರ್ಗನೈಸೇಷನ್, ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಹಿಳಾ ದೌರ್ಜನ್ಯ ನಿಯಂ ತ್ರಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮಹಿಳೆ–ಮನಸ್ಸು’ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರ್ಮ್ ಬಸ್ಗಳ ಲಾಭ ವಿದ್ಯಾರ್ಥಿ ಗಳಿಗೆ ಸಿಗಬೇಕು. ಈ ಬಸ್ಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸು ವುದರ ಜತೆಗೆ ಮಹಿಳೆಯರ ಮತ್ತು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೆಳಮಟ್ಟದ ಫುಟ್ ಬೋರ್ಡ್ಗಳನ್ನು ಅಳವಡಿಸಲಾಗು ವುದು ಎಂದರು.

ಡಾ. ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಪದವಿ ವಿಭಾಗದ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ₹1.5 ಕೋಟಿ ಅನುದಾನ ವನ್ನು ನೀಡಲಾಗಿದೆ.

ಅಲ್ಲದೆ, ಕಾಲೇಜಿ ನಲ್ಲಿ ₹ 34 ಲಕ್ಷ ವೆಚ್ಚದಲ್ಲಿ ಕಾರ್ಯಾಗಾರ ಸಭಾಂಗಣವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ನೇಟಿವ್ ಆರ್ಗನೈಸೇಷನ್ನ ಅಧ್ಯಕ್ಷ ಪ್ರೇಮಾನಂದ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾ ಡಿದರು.

ಮನೋವೈದ್ಯ ವಿರೂಪಾಕ್ಷ ದೇವರುಮನೆ, ರೋಟರಿ ಅಧ್ಯಕ್ಷ ಆನಂದ ಶೆಟ್ಟಿ, ವಕೀಲ ಸುನೀಲ್ ಮಾಥ್ಯೂ, ರೋಟರಿಯ ಅಲೆನ್ ವಿನಯ್ ಲೂಯಿಸ್, ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಕೆ. ಜಗದೀಶ್ ರಾವ್, ಜಯಂಟ್ಸ್ ಅಧ್ಯಕ್ಷ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.

ಮಹಿಳಾ ದೌರ್ಜನ್ಯ ನಿಯಂತ್ರಣ ಸಮಿತಿಯ ಸಂಚಾಲಕಿ ಯಶೋದ ಸ್ವಾಗತಿಸಿದರು, ವಿದ್ಯಾರ್ಥಿನಿ ಸುಮಲತಾ ನಿರೂಪಿಸಿದರು, ರಾಮಕೃಷ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.