ಮಂಗಳವಾರ, ಮೇ 11, 2021
23 °C

`ವಿದ್ಯಾರ್ಥಿಗಳು, ರೈತರಿಗೆ ಅಗತ್ಯ ಸಾಲ ಸೌಲಭ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ : ಗ್ರಾಮೀಣ ಪ್ರದೇಶದ ರೈತರು, ಸ್ವಸಹಾಯ ಸಂಘಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಸಾಲ ಸೌಲಭ್ಯಗಳನ್ನು  ಪಡೆದು ಆರ್ಥಿಕ ಮುನ್ನಡೆ ಸಾಧಿಸುವಂತೆ ತಿ.ನರಸೀಪುರ ಕೆನರಾ ಬ್ಯಾಂಕ್ ಶಾಖೆಯ ಮಹಾ ಪ್ರಬಂಧಕ ಕಿರಣ್.ಡಿ.ಕುನ್ಹಾ ಸಲಹೆ ಮಾಡಿದರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಆಶ್ರಯದಲ್ಲಿ  ಶುಕ್ರವಾರ ನಡೆದ  ಬೆಳೆ ಸಾಲ ಯೋಜನೆ ಮಾಹಿತಿ ನೀಡಿಕೆ ಹಾಗೂ ಮಂಜೂರಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕೆನರಾ ಬ್ಯಾಂಕ್ ರೈತರಿಗೆ ಸಬ್ಸಿಡಿ ದರದಲ್ಲಿ ಬೆಳೆ ಸಾಲ ನೀಡುತ್ತಿದೆ. ಕೃಷಿ ವಲಯಕ್ಕೆ ಕಿಸಾನ್ ಕ್ರೆಡಿಟ್, ಸ್ವಸಹಾಯ ಪದ್ಧತಿ, ನೀರಾವರಿ, ಕೃಷಿ ಉಪಕರಣ, ಹೈನುಗಾರಿಕೆ, ಆದ್ಯತಾ ಕ್ಷೇತ್ರ ಮತ್ತು ಚಿಲ್ಲರೆ ಸಾಲಗಳು ಸೇರಿದಂತೆ ವಿವಿಧ ರೀತಿಯ ಸಾಲ ನೀಡುತ್ತಿದೆ. ಗ್ರಾಮೀಣ ಪ್ರದೇಶದ ಜನರು ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ದಿಯಾಗಬೇಕು. ಸಾಲ ಪಡೆದ ರೈತರು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ಮತ್ತಷ್ಟು ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.ಮಾದಾಪುರ ಶಾಖೆಯ ಪ್ರಬಂಧಕಿ ಎಚ್.ಬಿ. ಲತಾಂಜಲಿ ಮಾತನಾಡಿ, ಮಾದಾಪುರ ಶಾಖೆ ಎರಡು ವರ್ಷಗಳಿಂದ 11 ಕೋಟಿ ರೂಪಾಯಿ ವ್ಯವಹಾರ ನಡೆಸಿರುವುದು ಗ್ರಾಹಕರ ವಿಶ್ವಾಸಕ್ಕೆ ಕಾರಣವಾಗಿದೆ. ಕೆಲವು ಷರತ್ತುಗಳೊಂದಿಗೆ ಶೇ 11.25 ರ ಬಡ್ಡಿ ದರದಲ್ಲಿ ಸಬ್ಸಿಡಿ ಬೆಳೆ ಸಾಲ ನೀಡಲಾಗುತ್ತಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಸಾಲ ನೀಡಲಾಗುವುದು. ಈಗಾಗಲೇ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸಾಲ ಪಡೆದಿದ್ದಾರೆ. ಸ್ವಸಹಾಯ ಸಂಘಗಳಿಗೆ ಸಾಲ, ಇನ್‌ಬಿಲ್ಟ್ ಒಡಿ  ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಮುಂದಾಗಿರುವ ಕೆನರಾ ಬ್ಯಾಂಕ್‌ನ ಪ್ರಯೋಜನ ಪಡೆಬೇಕೆಂದು  ಅವರು ಸಾರ್ವಜನಿಕರಿಗೆ ತಿಳಿಸಿದರು.ಇದೇ ವೇಳೆ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ರೈತರಿಗೆ ಸಾಲ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಬ್ಯಾಂಕ್ ಅಧಿಕಾರಿಗಳಾದ ಯಶಸ್ವಿನಿ, ಮೋಹನ್‌ಕುಮಾರ್, ಬ್ಯಾಂಕ್ ಮಂಜುನಾಥ್, ನಿಲಸೋಗೆ ಮತ್ತು ಹೆಮ್ಮಿಗೆ ಶಾಖೆಗಳ ವ್ಯವಸ್ಥಾಪಕರಾದ  ಮಹೇಶ್, ಸೋಮಣ್ಣ, ನಿವೃತ್ತ ಬಿಡಿಓ ಮಾದಾಪುರ ಮಹಾದೇವಪ್ಪ, ತೊಟ್ಟವಾಡಿ ಮಹಾದೇವಪ್ಪ, ನಿಲಸೋಗೆ ಮಹಾದೇವಪ್ಪ, ಶಂಭುದೇವನಪುರ ಮರಿಸ್ವಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.