ಮಂಗಳವಾರ, ಮೇ 17, 2022
27 °C

ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ:ಶಿಕ್ಷಕನಿಗೂ ಕ್ಷೌರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಶಿಸ್ತುಕ್ರಮವಾಗಿ 60 ವಿದ್ಯಾರ್ಥಿಗಳ ತಲೆ ಕೂದಲಿಗೆ ಕತ್ತರಿ ಹಾಕಿಸಿದ್ದ ಆಡಳಿತ ಮಂಡಳಿ ವಿರುದ್ಧ ಸೇಡಿಗಾಗಿ ಅದೇ ಶಾಲೆಯ ಶಿಕ್ಷಕರೊಬ್ಬರ ಕೂದಲಿಗೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕತ್ತರಿ ಹಾಕಿಸಿ ಪ್ರತಿಭಟಿಸಿದ ಪ್ರಕರಣ ಇಲ್ಲಿ ವರದಿಯಾಗಿದೆ.ಉದ್ದ ಕೂದಲು ಬೆಳೆಸಿಕೊಂಡು ಶಾಲೆಗೆ ಬಂದಿದ್ದ 60 ವಿದ್ಯಾರ್ಥಿಗಳ ತಲೆ ಕೂದಲು ಕತ್ತರಿಸಿ ಶಾಲಾ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಯುವಮೋರ್ಚಾದ ಗಣೇಶ್ ಘೋಷ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಒತ್ತಾಯಪೂರ್ವಕವಾಗಿ 60 ವಿದ್ಯಾರ್ಥಿಗಳ ತಲೆ ಕೂದಲು ಕತ್ತರಿಸಿ ಅಪಮಾನ ಮಾಡಲಾಗಿದೆ ಎಂದು ಪೋಷಕರು ತಿಳಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ಹಮ್ಮಿಕೊಂಡಿತು ಎಂದು ಘೋಷ್   ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.