ಶನಿವಾರ, ಫೆಬ್ರವರಿ 27, 2021
20 °C

ವಿದ್ಯಾ ಜತೆ ಫ್ಲೋರಾ ಕಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾ ಜತೆ ಫ್ಲೋರಾ ಕಲಿಕೆ

‘ಬೇಗಂ ಜಾನ್‌’ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್‌ ಜತೆ ನಟಿಸಿರುವ ನಟಿ ಫ್ಲೋರಾ ಶೈನಿ, ವಿದ್ಯಾ ಬಗ್ಗೆ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.‘ವಿದ್ಯಾ ಜತೆ ಕೆಲಸ ಮಾಡುವುದು ಅಪಾರ ಕಲಿಕೆಯ ಅನುಭವ ನೀಡಿದೆ’ ಎನ್ನುತ್ತಾರೆ ಫ್ಲೋರಾ.‘ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಒಂದು ತಿಂಗಳ ಕಾಲ ನಮ್ಮೆಲ್ಲರಿಗೂ ಒಂದು ಕಾರ್ಯಾಗಾರ ಮಾಡಲಾಗಿತ್ತು. ಆ ಸಮಯದಲ್ಲಿ ನನಗೆ ವಿದ್ಯಾ ಅವರನ್ನು ಕಂಡರೆ ತುಸು ಭಯವಾಗುತ್ತಿತ್ತು. ಆದರೆ, ಸೆಟ್‌ನಲ್ಲಿ ವಿದ್ಯಾ ಜತೆ ಕೆಲಸ ಮಾಡುವಾಗ ಆ ಭಯ ಮಾಯವಾಯಿತು. ನಿಜಕ್ಕೂ ವಿದ್ಯಾ ಗ್ರೇಟ್’ ಎಂದು ಫ್ಲೋರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಶ್ರೀಜಿತ್ ಮುಖರ್ಜಿ ನಿರ್ದೇಶನದ ‘ಬೇಗಂ ಜಾನ್‌’ 1947ರ ದೇಶ ವಿಭಜನೆಯ ಕಥೆ ಹೊಂದಿದೆ. ಇದರಲ್ಲಿ ವಿದ್ಯಾಬಾಲನ್‌, ವೇಶ್ಯಾಗೃಹವೊಂದರ ಮಾಲೀಕಳಾಗಿ ಅಭಿನಯಿಸಿದ್ದು, ವೇಶ್ಯೆಯ   ಪಾತ್ರದಲ್ಲಿ ಫ್ಲೋರಾ ನಟಿಸಿದ್ದಾರೆ.‘ಅಭಿನಯದ ವಿಷಯದಲ್ಲಿ ವಿದ್ಯಾ ತಮಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಕೊಳ್ಳುವುದಿಲ್ಲ.  ಇದು ನಮಗೆ ಸ್ಫೂರ್ತಿ ನೀಡುತ್ತದೆ. ಚಿತ್ರೀಕರಣದ ಕೊನೆಯ ದಿನ ವಿದ್ಯಾ ನಮ್ಮೆಲ್ಲರನ್ನು ಅಪ್ಪಿಕೊಂಡು ಬೀಳ್ಕೊಡುಗೆ ನೀಡಿದರು.ಚಿತ್ರೀಕರಣ ಮುಗಿಸಿ ಮನೆಗೆ ಹೋದಾಗ ಅವರಿಗೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲವಂತೆ. ಇದು ಸಹನಟರ ಕುರಿತು ಅವರ ಕಾಳಜಿಯನ್ನು ತೋರಿಸುತ್ತದೆ. ನಿಜಕ್ಕೂ ವಿದ್ಯಾ ಅವರಿಂದ ಕಲಿಯುವುದು ಬಹಳಷ್ಟಿದೆ’ ಎಂದು ಫ್ಲೋರಾ ಹೇಳಿಕೊಂಡಿದ್ದಾರೆ.ನಾಗೇಶ್ ಕುಕನೂರ್ ಅವರ ‘ಧನಕ್’ ಚಿತ್ರದಲ್ಲಿ ನಟಿಸಿರುವ ಫ್ಲೋರಾಗೆ ‘ಬೇಗಂ ಜಾನ್’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮಗೊಂದು ಸೂಕ್ತ ನೆಲೆ ಸಿಗಬಹುದೆಂಬ ವಿಶ್ವಾಸ ಇದೆಯಂತೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.