ಗುರುವಾರ , ಜನವರಿ 30, 2020
19 °C

ವಿದ್ಯುತ್‌ ಕೊರತೆ: ಕೆಲವೆಡೆ ಅನಿಯಮಿತ ಲೋಡ್‌ಶೆಡ್ಡಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ಪಾದನೆಯಲ್ಲಿ ವ್ಯತ್ಯಯವಾದ ಕಾರಣ ತಾತ್ಕಾಲಿಕವಾಗಿ ವಿದ್ಯುತ್‌ ಕೊರತೆ ಉಂಟಾಗಿದ್ದು, ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಎರಡು ಘಟಕಗಳು ಸ್ಥಗಿತಗೊಂಡಿವೆ. ಉಡುಪಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲೂ ಉತ್ಪಾದನೆ ನಿಂತಿತ್ತು. ಹೀಗಾಗಿ ಶುಕ್ರವಾರ, ಶನಿವಾರ ಕೆಲವೆಡೆ ಅನಿಯಮಿತ ಲೋಡ್‌ಶೆಡ್ಡಿಂಗ್‌ ಜಾರಿ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಉಡುಪಿ ಸ್ಥಾವರದಲ್ಲಿ ಒಂದು ಘಟಕ ಶನಿವಾರ ಪುನರಾರಂಭವಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ ಸ್ಥಗಿತಗೊಂಡಿರುವ ಎರಡು ಘಟಕಗಳ ಪೈಕಿ ಒಂದು ಘಟಕ ಭಾನುವಾರ ಪುನರಾರಂಭವಾಗಲಿದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)