ಗುರುವಾರ , ಜೂನ್ 17, 2021
21 °C

ವಿದ್ಯುತ್‌ ಚಾಲಿತ ಬೈಕ್‌ ಚಾಲನೆಗೆ ಪರವಾನಗಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್‌ ಚಾಲಿತ ಬೈಕ್‌ ಸವಾರರೂ ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯಬೇಕು.

ಕರ್ನಾಟಕ ರಾಜ್ಯ ಮೋಟಾರು ಕಾಯ್ದೆ ನಿಯಮದ ಅನುಸಾರ ಸಾರಿಗೆ ಇಲಾಖೆಯು ವಿದ್ಯುತ್‌ ಚಾಲಿತ  ಬೈಕ್‌ ಸವಾರರಿಗೆ ಪರವಾನಗಿ ಹಾಗೂ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದೆ.ವಿದ್ಯುತ್‌ ಚಾಲಿತ ಬೈಕ್‌ ಸವಾರರು ಹಲವು ಅಪಘಾತ ಪ್ರಕರಣಗಳಲ್ಲಿ ಭಾಗಿ­ಯಾಗಿ­ರುವುದರಿಂದ ರಸ್ತೆ ಸುರ­ಕ್ಷತೆಯ ದೃಷ್ಟಿಯಿಂದ ಈ ನಿಯಮ­ವನ್ನು ಜಾರಿ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.‘ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ  ನೋಂದಣಿಯಾಗದೇ  250 ವಾಟ್‌ಗಿಂತಲೂ ಅಧಿಕ ವಿದ್ಯುತ್‌ ಬಳಕೆ   ಮಾಡುವ  ಹಲವು ವಿದ್ಯುತ್‌ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, 250 ವಾಟ್‌ಗಿಂತಲೂ ಹೆಚ್ಚಿನ ವಿದ್ಯುತ್‌ ಬಳಕೆ ಮಾಡುವ ಬೈಕ್‌ಗಳು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾ­ಗಬೇಕು ಹಾಗೂ ಸವಾರರು ಪರವಾ­ನಗಿ ಪಡೆಯಬೇಕು ಎಂದು  ಹೇಳಿದರು.‘ವೇಗದ ಮಿತಿ  25ರಿಂದ 35 ಕಿ.ಮೀ ನಿಗದಿಗೊಂಡಿರುವ ವಿದ್ಯುತ್‌ ಬೈಕ್‌ ಗಳಿಗೆ ನೋಂದಣಿ, ಚಾಲನಾ ಪರ ವಾ­ನಗಿಯ ಅಗತ್ಯವಿರುವುದಿಲ್ಲ.  ಆದರೆ, ಬೈಕ್‌ ತಯಾರಕರು ಅಟೋ ಮೇಟಿವ್‌ ರೀಸರ್ಚ್‌ ಅಸೋಸಿ ಯೇಷನ್‌ ಆಫ್‌ ಇಂಡಿಯಾದಿಂದ  (ಎಆರ್‌ಐಎ) ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದಿರಬೇಕು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.