ಭಾನುವಾರ, ಜೂನ್ 13, 2021
23 °C

ವಿದ್ಯುತ್‌ ವ್ಯತ್ಯಯ: ಗ್ರಾಹಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು ವಿದ್ಯುತ್‌ ಮಾರ್ಗದ ದುರಸ್ತಿ ಕಾರ್ಯ

ವನ್ನು ಸೋಮವಾರ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಭಾಗದಲ್ಲಿ ಸೋಮವಾರ ಬೆಳಿಗ್ಗೆ

10ರಿಂದ ಸಂಜೆ ಐದು ಗಂಟೆವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಗ್ರಾಹಕರು ಪರದಾಡ­ಬೇಕಾಯಿತು.ರಾಜಾಜಿನಗರ, ಪಶ್ಚಿಮ ಕಾರ್ಡ್‌ ರಸ್ತೆ, ವಿದ್ಯಾರಣ್ಯ ನಗರ, ವಿಜಯನಗರ, ಮಾಗಡಿ ಮುಖ್ಯ ರಸ್ತೆ, ದಾಸರಹಳ್ಳಿ, ಗೋವಿಂದರಾಜನಗರ, ಬಿನ್ನಿ ಲೇಔಟ್, ನಾಗರಬಾವಿ, ಕಾಮಾಕ್ಷಿಪಾಳ್ಯ, ಜೆ.ಸಿ.ನಗರ, ಮೈಸೂರು ರಸ್ತೆ, ಕಾಟನ್‌ಪೇಟೆ, ಸುಲ್ತಾನ್‌ಪೇಟೆ, ಚಿಕ್ಕಪೇಟೆ 3ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಈ ದುರಸ್ತಿ ಕಾಮಗಾರಿ ನಾಲ್ಕು ಸಬ್‌ ಸ್ಟೇಷನ್‌ಗಳ ವ್ಯಾಪ್ತಿಯಲ್ಲಿ ನಡೆದಿದೆ. ಹೀಗೆ ನಗರದ ಅರ್ಧದಷ್ಟು ಭಾಗದಲ್ಲಿ ವಿದ್ಯುತ್‌ ಇರಲಿಲ್ಲ. ಜನರಿಗೆ ಹೆಚ್ಚಿನ ತೊಂದರೆಯಾಗದಂತೆ ವಿದ್ಯುತ್‌ ಕಡಿತ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.‘ಈಗ ಪರೀಕ್ಷಾ ಸಮಯ. ಇಷ್ಟು ದೀರ್ಘವಾಗಿ ವಿದ್ಯುತ್‌ ಕಡಿತ ಮಾಡಿದರೆ ಪರೀಕ್ಷಾ ಪೂರ್ವ ತಯಾರಿಗೆ ಕಷ್ಟವಾಗುತ್ತದೆ. ಅಲ್ಲದೆ ಉದ್ಯಮಗಳ ನಿರ್ವಹಣೆಗೆ ತೊಂದರೆಯಾಗುತ್ತದೆ’ ಎಂದು ಗ್ರಾಹಕರೊಬ್ಬರು ಅಭಿಪ್ರಾಯಪಟ್ಟರು.‘ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ವಿದ್ಯುತ್‌ ಕಡಿತದಿಂದ ಸಮಸ್ಯೆಯಾಗಿದೆ. ಪರೀಕ್ಷಾ ಸಮಯದಲ್ಲಿ ಈ ರೀತಿ ಮಾಡುವುದು ಸರಿಯಲ್ಲ’ ಎಂದು ಪೋಷಕರೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.