ಮೈಸೂರು: `ವಿದ್ಯುತ್ ಬೇಡಿಕೆ ದಿನೆ ದಿನೇ ಹೆಚ್ಚಾಗುತ್ತಿದೆ. ದೇಶದ ಸದ್ಯದ ಬೇಡಿಕೆ ಪೂರೈಸಲು ಅಂದಾಜು ರೂ 20 ಸಾವಿರ ಕೋಟಿ ಬಂಡವಾಳ ಹೂಡುವ ಅಗತ್ಯ ಇದೆ' ಎಂದು ಮೆಸ್ಕಾಂ ನಿರ್ದೇಶಕ (ತಾಂತ್ರಿಕ) ಡಾ. ಡಬ್ಲ್ಯು.ಎಂ. ಶಿವಕುಮಾರ್ ತಿಳಿಸಿದರು.

ನಗರದ ಎನ್ಐಇ ಕಾಲೇಜಿನ ಸರ್ ಎಂ.ವಿ. ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ `ವಿದ್ಯುತ್ ಕ್ಷೇತ್ರದ ಕಾರ್ಯಚಟುವಟಿಕೆ ಮತ್ತು ನಿಯಂತ್ರಣದ ಈಚಿನ ಬೆಳವಣಿಗೆ' ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮುಂದಿನ ವಿದ್ಯುತ್ ಬೇಡಿಕೆಯ ವಿದ್ಯುತ್ ಉತ್ಪಾದನೆ ಮಾಡಲು ಹಣ ತೊಡಗಿಸಿಕೊಂಡಿದ್ದೇ ಆದಲ್ಲಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗುವುದಿಲ್ಲ. ಬ್ರಜಿಲ್, ಚೀನಾದಂತಹ ರಾಷ್ಟ್ರದಲ್ಲಿನ ವಿದ್ಯುತ್ ಉತ್ಪಾದನೆಗಿಂತ ನಮ್ಮಲ್ಲಿ ಕೊರತೆ ಇದೆ. ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯ ಇದೆ. ಮುಂದಿನ ಕೆಲ ದಶಕಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದನೆಗೆ ಬಂಡವಾಳ ಹೂಡುವ ಅನಿವಾರ್ಯತೆ ಇದೆ' ಎಂದು ಹೇಳಿದರು.

`ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮಾಡುವುದು ಕಡಿಮೆಯಾಗುವ ಜೊತೆಗೆ ಬೇಡಿಕೆಯೂ ತಗ್ಗಲಿದೆ. ವಿದ್ಯುತ್ ಸೋರಿಕೆ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು.

ಅಲ್ಲದೇ ವಿದ್ಯುತ್ ಹೆಚ್ಚು ಬಳಸುವುದನ್ನು ತಪ್ಪಿಸಬೇಕಾದರೆ ಪರ್ಯಾಯ ಸಂಪನ್ಮೂಲಗಳ ಬಗ್ಗೆ ಒತ್ತು ಕೊಡುವ ಅಗತ್ಯ ಇದೆ. ಇಲ್ಲವಾದಲ್ಲಿ ವಿದ್ಯುತ್ ಕೊರತೆ ನೀಗಿಸುವುದು ಕಷ್ಟ' ಎಂದು ತಿಳಿಸಿದರು.

`ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹಲವಾರು ಸವಾಲುಗಳು ನಮ್ಮ ಮುಂದೆ ಇವೆ. ಹಾಗಾಗಿ ವಿಜ್ಞಾನ-ತಂತ್ರಜ್ಞಾನ ಬಳಕೆ ಮಾಡಿಕೊಂಡು ಪ್ರಸ್ತುತ ಎದುರಾಗುವ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಎಂಜಿನಿ ಯರುಗಳು, ಸಂಶೋಧಕರು ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಮುಂದಾಗ ಬೇಕು. ವಿದ್ಯುತ್ ಬಳಕೆಯ ಜೊತೆಗೆ ಮಿತವ್ಯಯ ಮಾಡುವುದು ಸಹ ಮುಖ್ಯ' ಎಂದು ಹೇಳಿದರು.

ಎನ್ಐಇ ಕಾಲೇಜಿನ ಕಾರ್ಯದರ್ಶಿ ಎಸ್.ಎಲ್. ರಾಮಚಂದ್ರ ಮಾತನಾಡಿ, `ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಕೆ ಮಾಡಬೇಕು. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸರಬರಾಜು ಮಾಡುವ ಹಂತದಲ್ಲೇ ಶೇ 30-35ರಷ್ಟು ವಿದ್ಯುತ್ ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟುವ ಅಗತ್ಯ ಇದೆ.

ವಿದ್ಯುತ್ ಬದಲಿಗೆ ಸೋಲಾರ್, ಪವನ ಶಕ್ತಿಯಂತಹ ಪರ್ಯಾಯ ಶಕ್ತಿಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ವಿದ್ಯುತ್ ಜೀವನದ ಒಂದು ಅವಿಭಾಜ್ಯ ಅಂಗ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮತ್ತು ಉಳಿತಾಯದ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ' ಎಂದು ತಿಳಿಸಿದರು.

ಬೆಂಗಳೂರಿನ ಪಿಆರ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ. ಬಲರಾಮನ್, ಎನ್ಐಇ ಅಧ್ಯಕ್ಷ ಎಸ್.ಆರ್. ಸುಬ್ಬರಾವ್, ಕಾರ್ಯಕ್ರಮದ ಮುಖ್ಯ ಸಮನ್ವಯಾಧಿಕಾರಿ ಡಾ.ಟಿ. ಅನಂತಪದ್ಮನಾಭ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ವಿ. ಸಾಯಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.