ಸೋಮವಾರ, ಏಪ್ರಿಲ್ 12, 2021
29 °C

ವಿದ್ಯುತ್ ಸಮಸ್ಯೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.ಪರೀಕ್ಷೆ ದಿನಗಳಾಗಿದ್ದರಿಂದ ಓದಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಪೂರೈಕೆ, ಬಿತ್ತಿದ ಬೆಳೆಗಳ ರಕ್ಷಣೆಗೂ ಸಾಧ್ಯವಾಗುತ್ತಿಲ್ಲ. ದಿನವೂ ಗ್ರಾಮದಲ್ಲಿ ಪರದಾಟ ಶುರುವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮಸ್ಥರು ಮೊದಲು ಹೆಸ್ಕಾಮ್ ಕಚೇರಿಗೆ ನಂತರ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗುರುನಾಥ ಬಿರಾದಾರ, ಗ್ರಾಮದಲ್ಲಿ ಕನಿಷ್ಠ ಎರಡು ತಾಸು ಸಹ ವಿದ್ಯುತ್ ಪೂರೈಕೆ ಇಲ್ಲ. ಗಿರಣಿ ಬೀಸಲು ವೋಲ್ಟೇಜ್ ಇಲ್ಲ, ಕೃಷಿಕರಂತೂ ನೀರಾವರಿ ಮರೆತಿದ್ದಾರೆ, ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಪರದಾಡಬೇಕಾಗಿದೆ, ವಾರದೊಳಗಾಗಿ ಸಮಸ್ಯೆ ಬಗೆ ಹರಿಯದಿದ್ದರೆ ಗ್ರಾಮಸ್ಥರು ಪಟ್ಟಣಕ್ಕೆ ಬಂದು ರಸ್ತಾ ರೋಖೋ ಮಾಡುವುದು ಅನಿವಾರ್ಯ ಆಗಲಿದೆ ಎಂದು ಹೇಳಿದರು.ಶ್ರೀಶೈಲ ಸೂಳಿಭಾವಿ, ಎಚ್.ಬಿ. ಮೇಟಿ, ಎಸ್.ಎನ್. ಮೇಟಿ, ಆದಪ್ಪ ಗುಡಗುಂಟಿ, ನಾಗಪ್ಪ ರೂಢಗಿ,  ಯಮನಪ್ಪ ಮದರಿ ನಾಗೇಶ ತಂಗಡಗಿ, ಜನಕರಾಜ ನಾಡಗೌಡ್ರ, ಅಪ್ಪು ನಾಡಗೌಡ್ರ, ಮಲ್ಲಪ್ಪ ಮಾದರ, ರವಿ ಮೇಟಿ, ಬಿ.ಎಚ್.ಬಳವಾಟ, ಎಸ್.ಎಸ್.ಕೊಣ್ಣೂರ, ಮಂಜುನಾಥ ಹೊಸಮನಿ, ರವಿ ಪಾಟೀಲ, ಶ್ರೀಶೈಲ ಬಾಗಲಕೋಟೆ, ಮುತ್ತು ಪಲ್ಲೇದ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಹೆಸ್ಕಾಮ್ ಸ್ಪಷ್ಟನೆ:

 ಬಸರಕೋಡ ಫೀಡರ್ ಮೇಲೆ ಒತ್ತಡ ಹೆಚ್ಚಾಗಿಎ. ಅದನ್ನು ವಿಭಜಿಸಿ ಎರಡು ಘಟಕ ಸ್ಥಾಪಿಸಲು ಕ್ರಮ ತೆಗೆದುಕೊಂಡಿದೆ. ಢವಳಗಿಯಿಂದ ಸಹ ವಿದ್ಯುತ್ ಪೂರೈಸಲು ಆದ್ಯತೆ ನೀಡಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಗ್ರಾಮಸ್ಥರಿಗೆ ವಿದ್ಯುತ್ ತೊಂದರೆ ಅನಿವಾರ್ಯ. ಅಲ್ಲಿಯವರೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೆಸ್ಕಾಮ್ ಎಂಜನಿಯರ್ ಎಸ್.ಆರ್. ಹೊಸೂರ ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.