ಗುರುವಾರ , ಜನವರಿ 30, 2020
22 °C

ವಿಧಾನಸೌಧಕ್ಕೆ ಮುಕ್ತ ಪ್ರವೇಶ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ರಾಜ್ಯದ ಆಡಳಿತ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಹೈಕೋರ್ಟ್‌ಗಳಿಗೆ ಕೆಲಸದ ನಿಮಿತ್ತ ಅಥವಾ ಅವನ್ನು ನೋಡುವ ಸಲುವಾಗಿ ಬರುವ ಜನ ಸಾಮಾನ್ಯರಿಗೆ ಮುಕ್ತ ಪ್ರವೇಶ ಸಿಗುತ್ತಿಲ್ಲ. ಈ ಪ್ರದೇಶಗಳಲ್ಲಿ  ಪೊಲೀಸ್ ಸರ್ಪಗಾವಲಿದೆ. ದೂರದ ಊರಿನಿಂದ ಬಂದವರಿಗೆ ಕಿರಿಕಿರಿ ಆಗುವ ರೀತಿಯಲ್ಲಿ ತಪಾಸಣೆ ಮಾಡುತ್ತಾರೆ. ಪ್ರವೇಶಕ್ಕೆ ಸಚಿವರು, ಶಾಸಕರು ಅಥವಾ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದಿದ್ದರೂ ಪ್ರವೇಶ ಕಷ್ಟವಾಗುತ್ತಿದೆ.ಪ್ರವಾಸಿಗಳಿಗೆ ಸುಲಭ  ವೀಕ್ಷಣೆಗೆ ಅನುಕೂಲವಾಗುವಂತಹ ಒಂದು ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ನಿಯಮಗಳನ್ನು ಸಡಿಲಿಸಿ ಸುಲಭ ಪ್ರವೇಶ ಸಿಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

 

ಪ್ರತಿಕ್ರಿಯಿಸಿ (+)