ಬೆಂಗಳೂರು: ಡಿಸೆಂಬರ್ 31ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಅವಧಿಯ್ಲ್ಲಲಿ ದೇಶದ ಮೂರನೇಯ ಅತಿ ದೊಡ್ಡ ಐ.ಟಿ ರಫ್ತು ಕಂಪೆನಿ ವಿಪ್ರೊ ರೂ. 1,456 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪೆನಿಯ ನಿವ್ವಳ ಲಾಭ ಶೇ 10ರಷ್ಟು ಏರಿಕೆಯಾಗಿದೆ. ಆದರೆ, ಐ.ಟಿ ಸೇವೆಗಳ ರಫ್ತು ವಹಿವಾಟು ಅಲ್ಪ ಮಟ್ಟದಲ್ಲಿ ಮಾತ್ರ ಚೇತರಿಸಿಕೊಂಡಿದೆ. ಇದಕ್ಕೆ ಜಾಗತಿಕ ಆರ್ಥಿಕ ಅನಿಶ್ಚಿತತೆ ಕಾರಣ ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಹೇಳಿದರು.

ನಾಲ್ಕನೆಯ ತ್ರೈಮಾಸಿಕ ಅವಧಿಯ ವೇಳೆಗೆ ಜಾಗತಿಕ ಐ.ಟಿ ಸೇವೆಗಳ ವಹಿವಾಟು ಶೇ 1ರಿಂದ ಶೇ 3ರಷ್ಟು ಪ್ರಗತಿ ಕಾಣಲಿದ್ದು, ಅಂದಾಜು 1,550 ದಶಲಕ್ಷ ಡಾಲರ್ (್ಙ80,600 ಕೋಟಿ) ವರಮಾನ ಬರುವ ನಿರೀಕ್ಷೆ ಇದೆ ಎಂದು ಪ್ರೇಮ್ಜಿ ಹೇಳಿದ್ದಾರೆ. ಒಟ್ಟಾರೆ ಪ್ರಗತಿ ಅಲ್ಪ ಮಟ್ಟದಲ್ಲಿದ್ದರೂ, ಪ್ರಮುಖ ಪ್ರತಿಸ್ಪರ್ಧಿ ಕಂಪೆನಿ ಇನ್ಫೋಸಿಸ್ಗೆ ಹೋಲಿಸಿದರೆ ವಿಪ್ರೊ ಮುನ್ನೋಟ ಉತ್ತಮವಾಗಿದೆ ಎಂದು ಉದ್ಯಮ ಸಂಶೋಧನಾ ಸಂಸ್ಥೆ ಏಂಜಲ್ ಬ್ರೋಕಿಂಗ್ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷದ ಮೂರನೇಯ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿ ್ಙ1,318 ಕೋಟಿ ನಿವ್ವಳ ಲಾಭ ದಾಖಲಿಸಿತ್ತು. ಪ್ರಸಕ್ತ ಅವಧಿಯಲ್ಲಿ ಕಂಪೆನಿಯ ಒಟ್ಟು ವರಮಾನ ್ಙ9,997 ಕೋಟಿಗೆ ಏರಿಕೆಯಾಗಿದ್ದು, ಶೇ 28ರಷ್ಟು ಪ್ರಗತಿ ಕಂಡಿದೆ.

ಆರ್ಥಿಕ ಕುಸಿತ: ಕ್ರಮಕ್ಕೆ ಪ್ರೇಮ್ಜಿ ಆಗ್ರಹ

ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿಯುತ್ತಿರುವುದನ್ನು ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಆದರೆ, ಸದ್ಯ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯತ್ತ ಆಡಳಿತ ಮತ್ತು ವಿರೋಧ ಪಕ್ಷಗಳು ಗಮನಹರಿಸುತ್ತಿವೆ. ಚುನಾವಣೆ ಫಲಿತಾಂಶ ಏನೇ ಇರಲಿ, ನೀತಿ ನಿರೂಪಕರು ಚುನಾವಣೆ ನಂತರ ಆರ್ಥಿಕ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯ ಇದೆ. `ಜಿಡಿಪಿ~ ಕುಸಿಯುತ್ತಿರುವುದು ಒಟ್ಟಾರೆ ಉದ್ಯದಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಸರ್ಕಾರ ಆರ್ಥಿಕ ಚೇತರಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಪ್ರೇಮ್ಜಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.