ಗುರುವಾರ , ಮಾರ್ಚ್ 4, 2021
29 °C

ವಿಭಿನ್ನ ವಿನ್ಯಾಸದ ಬೋನ್ ಚರ್ಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಭಿನ್ನ ವಿನ್ಯಾಸದ ಬೋನ್ ಚರ್ಚ್

ಅಸ್ಥಿಪಂಜರವನ್ನು ಕಂಡರೆ ಭಯಪಟ್ಟು ಓಡುವವರೇ ಹೆಚ್ಚು. ಇಲ್ಲವೇ ಈ ಪಳೆಯುಳಿಕೆಗಳು ಪ್ರಯೋಜನಕ್ಕೆ ಬಾರದ ವಸ್ತುಗಳು ಎಂದು ಸುಮ್ಮನಾಗುವವರು ಇದ್ದಾರೆ. ಆದರೆ ಯುರೋಪ್‌ನಲ್ಲಿರುವ ಈ ಚರ್ಚ್‌ ಅನ್ನು ನೋಡಿದಾಗ ಕಾಲಕಳೆದಂತೆ ಮಣ್ಣಾಗಿ ಹೋಗುವ  ಅಸ್ಥಿಪಂಜರಗಳಿಂದಲೂ ಇಷ್ಟೊಂದು ಅಲಂಕಾರಿಕ ವಸ್ತುಗಳನ್ನು ಮಾಡಬಹುದೇ ಎಂದು ಆಶ್ಚರ್ಯವಾಗುತ್ತದೆ. ‘ಬೋನ್‌ ಚರ್ಚ್‌’ ಎಂದೇ ಇದು ಜನಪ್ರಿಯವಾಗಿದೆ.ಈ ಚರ್ಚ್‌ ಪ್ರವೇಶಿಸಿದರೆ ಸಾವಿರಾರು ಮೂಳೆಗಳು ಮತ್ತು ತಲೆಬುರುಡೆಗಳು ಕಾಣಸಿಗುತ್ತವೆ. ಇಷ್ಟೊಂದು ಅಸ್ಥಿಪಂಜರ ಎಲ್ಲಿಂದ ದೊರಕಿತು ಎಂಬ ಆಶ್ಚರ್ಯವಾಗುವುದು ಸಹಜ. ಇವೆಲ್ಲ ಬಹಳ ಕಾಲದ ಹಿಂದೆ ಸ್ಮಶಾನದಲ್ಲಿ ಹೂತಿದ್ದ ಭೂಮಿಯಿಂದ ತೆಗೆದಿದ್ದು. ಯುದ್ಧ ಮತ್ತು ಪ್ರಕೃತಿ ವಿಕೋಪದಿಂದ ಪ್ರಾಣತೆತ್ತ ಅದೆಷ್ಟೋ ಜನರ ಪಳೆಯುಳಿಕೆಗಳು ಇಲ್ಲಿ ದೊರೆಯುತ್ತವೆ.ಈಗೆಲ್ಲ ಒಳಾಂಗಣ ವಿನ್ಯಾಸಕ್ಕೆ ವಿಶೇಷ ಪ್ರಧಾನ್ಯ. ಈ ಪರಿಕಲ್ಪನೆಯನ್ನೇ ಬಳಸಿಕೊಂಡು ಈ ಹಿಂದೆಯೇ ಇಲ್ಲಿ ವಿಭಿನ್ನವಾದ ಒಳಾಂಗಣ ವಿನ್ಯಾಸವನ್ನು ಮಾಡಲಾಗಿದೆ.ವಿವಿಧ ಆಕಾರದ ತಲೆಬುರುಡೆಗಳು, ಪಕ್ಕೆಲುಬು, ಎದೆಮೂಳೆಗಳಿಂದ ಮಾಡಿರುವ ವಿಭಿನ್ನ ಅಲಂಕಾರಿಕ ವಸ್ತುಗಳು ಇಲ್ಲಿಯ ಆಕರ್ಷಣೆ.ಸುಮಾರು 70 ಸಾವಿರ ಜನರ ಪಳೆಯುಳಿಕೆಗಳನ್ನು ಈ ಚರ್ಚಿನ ಒಳಾಂಗಣ ವಿನ್ಯಾಸಕ್ಕೆ ಬಳಸಲಾಗಿದೆ.ಹದಿಮೂರನೇ ಶತಮಾನದಲ್ಲಿ ಈ ರೀತಿ ಅಸ್ಥಿಪಂಜರವನ್ನು ಬಳಸಿ ಚರ್ಚಿನ ಅಲಂಕಾರವನ್ನು ಪ್ರಾರಂಭಮಾಡಲಾಯಿತು. ಹದಿನೈದನೇ ಶತಮಾನದಲ್ಲಿ ಮೂವತ್ತು ಸಾವಿರ ಮಂದಿಯ ಪಳೆಯುಳಿಕೆಗಳು ಈ ಚರ್ಚಿನ  ಅಲಂಕಾರಕ್ಕೆ ಬಳಕೆಯಾಗಿತ್ತು.  ವಾರದ ಎಲ್ಲಾ ದಿನಗಳಲ್ಲಿಯೂ ತೆರೆದಿರುವ ಈ ಚರ್ಚ್‌ ಒಳಗೆ ಡಿಸೆಂಬರ್‌ 24 ಮತ್ತು 25ರಂದು ಪ್ರವೇಶವಿರುವುದಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.