ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಸಾಧಕರು

Last Updated 23 ಜನವರಿ 2013, 19:59 IST
ಅಕ್ಷರ ಗಾತ್ರ

ಐದು `ಡಿ', ಆರು `ಡಿ' ಸಂಬಳ
ಕಿರಿಯ ವಯಸ್ಸಿಗೆ ಐದು `ಡಿ', ಆರು `ಡಿ' ಸಂಬಳ ಪಡೆಯುವುದು ಸುಲಭದ  ಮಾತಲ್ಲ. 14ನೇ ವಯಸ್ಸಿಗೆ ಸಾಫ್ಟ್‌ವೇರ್ ಕಂಪೆನಿಯೊಂದರ ಸಿಇಓ ಆಗುವುದು ವಿಶ್ವದಾಖಲೆಯೇ ಸರಿ.

ಈ ಸಾಧನೆ ಮಾಡಿದವರು 9ನೇ ತರಗತಿ ವಿದ್ಯಾರ್ಥಿನಿ ಸಿಂದುಜಾ ರಾಜಾರಾಮ್. 2ಡಿ ಮತ್ತು 3ಡಿ ಸಿನಿಮಾ ಜಗತ್ತಿನಲ್ಲಿ ಅನಿಮೇಶನ್‌ಗೆ ಈಗ ಎಲ್ಲಿಲ್ಲದ ಬೇಡಿಕೆ. ಸಿಂದುಜಾ ತಂದೆ ಸಿಪ್ಪಾನ್ ಎಂಬ ಕಂಪೆನಿಯನ್ನು ಆರಂಭಿಸಿ ಮಗಳನ್ನೇ ಕಂಪೆನಿಯ ಸಿಇಓ ಆಗಿ ನೇಮಿಸಿದರು.  ` ನಾನು ಸಿಇಓ ಆಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ಕ

ಲಿಕೆಗೆ ವಯಸ್ಸಿನ ಮಿತಿ ಇಲ್ಲ, ನಾನು ಸಿಇಓ ಆಗಿದ್ದರೂ ಅನಿಮೇಶನ್ ಕಲಿಯುತ್ತಿದದೇನೆ. ನಮ್ಮ ಕಂಪೆನಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುವುದೇ ನನ್ನ ಗುರಿ' ಎಂದು  ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಾಫ್ಟ್‌ವೇರ್ ಕಂಪೆನಿಗಳ ವಾರ್ಷಿಕ ವೇಳದಲ್ಲಿ ಸಿಂದುಜಾ ಚಿನಕುರಳಿಯಂತೆ ಮಾತನಾಡುವ ಮೂಲಕ  ವಿಶ್ವದ ಗಮನ ಸೆಳೆದಿದ್ದಾರೆ.
..........

ಫ್ರಾನ್ನಿ ಆರ್ಮ್‌ಸ್ಟ್ರಾಂಗ್
ಇದೇನು ಲೆಕ್ಕ ಎಂದು ಗಾಬರಿಯಾಗಬೇಡಿ. ಇದು ಇಂಗ್ಲೆಂಡ್‌ನ ಪರಿಸರ ಹೋರಾಟಗಾರ್ತಿ ಫ್ರಾನ್ನಿ ಆರ್ಮ್‌ಸ್ಟ್ರಾಂಗ್ ಅವರ ಯಶಸ್ವಿ ಕಥೆ.

ಪರಿಸರ ಸಂರಕ್ಷಣೆಗಾಗಿ ಜನಾಂದೋಲನ, ಹೋರಾಟ, ಪ್ರತಿಭಟನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಫ್ರಾನ್ನಿ 2010ರಲ್ಲಿ ವಿಶ್ವದ ಮನೆ ಮಾತಾಗಿದ್ದು 10:10 ಎಂಬ ಪರಿಸರ ಆಂದೋಲನದ ಮೂಲಕ.

ಅಭಿವೃದ್ಧಿ ಮತ್ತು ಅಭಿವೃದ್ಧಿಶೀಲ ದೇಶಗಳು ವಾರ್ಷಿಕವಾಗಿ  ವಾತಾವರಣಕ್ಕೆ ಬಿಡುವ ಒಟ್ಟು ಇಂಗಾಲದಲ್ಲಿ  ಶೇ.10ರಷ್ಟನ್ನು ನಿಯಂತ್ರಿಸಿದರೆ ಭೂಮಿ ಬಿಸಿಯಾಗುವುದನ್ನು ಸಾಧ್ಯವಾದ ಮಟ್ಟಿಗೆ ತಪ್ಪಿಸಬಹುದು ಎಂದು ಇಂಗ್ಲೆಂಡ್‌ನ ಇಂಧನ ಮತ್ತು ವಾತಾವರಣ ಬದಲಾವಣೆ ಸಂಸ್ಥೆ ವರದಿಯೊಂದನ್ನು ಪ್ರಕಟಿಸಿತು. 

ವರದಿಯಿಂದ ಪ್ರೇರಿತರಾದ ಫ್ರಾನ್ನಿ, ಇಂಗಾಲವನ್ನು  ವಾತಾವರಣಕ್ಕೆ ಬಿಡದಂತೆ  ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆರಂಭಮಾಡಿದ್ದೆ 10:10 ( 10 ಎಂದರೆ 2010ನೇ ವರ್ಷ : 10 ಎಂದರೆ ಶೇ. 10ರಷ್ಟು ಇಂಗಾಲ)  ಪರಿಸರ ಆಂದೋಲನ.

ಇಂಗ್ಲೆಂಡ್ ಸೇರಿದಂತೆ ವಿಶ್ವದ 40 ದೇಶಗಳಲ್ಲಿ ಸಂಚರಿಸಿದ ಫ್ರಾನ್ನಿ ಈ ಬಗ್ಗೆ ಜಾಗೃತಿ ಮೂಡಿಸಿದರು. ಇದಕ್ಕೆ ಪೂರಕ ಸ್ಪಂದನೆ ಕೂಡ ವ್ಯಕ್ತವಾಯಿತು. 1 ಲಕ್ಷ ಪರಿಸರ ಕಾರ್ಯಕರ್ತರು 40 ದೇಶಗಳಲ್ಲಿ ಇಂಗಾಲವನ್ನು ವಾತಾವರಣಕ್ಕೆ ಬಿಡದಂತೆ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT