ಮನುಷ್ಯನ ಮೂರು ಮೂಲ ಸ್ವಭಾವಗಳನ್ನು ಭಗವದ್ಗೀತೆ ಪ್ರಸ್ತಾಸಿದೆ. ಅವುಗಳನ್ನು ತಮಸ್ಸು, ರಜಸ್ಸು ಮತ್ತು ಸತ್ವ ಎಂದು ಅದು ಬಣ್ಣಿಸಿದೆ. ನಾವು ಇವನ್ನು ಭೌತಿಕ ಪ್ರಪಂಚದಲ್ಲಿ ಕಾಣುತ್ತಿರುವ ಮೂರು ಸ್ಥಿತಿಗಳಾದ ಜಡತ್ವ, ಚುರುಕುತನ ಮತ್ತು ಸಮಚಿತ್ತದ ಜೊತೆ ಸಮೀಕರಿಸಬಹುದು.

ಸ್ವಾಮಿ ವಿವೇಕಾನಂದರು ಸಹ `ಕರ್ಮ ಯೋಗ~ಕ್ಕೆ ಸಂಬಂಧಿಸಿದ ತಮ್ಮ ಪುಸ್ತಕದಲ್ಲಿ ಈ ಮೂರು ಸ್ಥಿತಿಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಹೀಗೆ ಬರೆದಿದ್ದಾರೆ: `ಪ್ರತಿ ಮನುಷ್ಯನಲ್ಲೂ ಮೂರು ಬಗೆಯ ಶಕ್ತಿಗಳು ಇರುತ್ತವೆ. ಕೆಲವೊಮ್ಮೆ ತಮಸ್ಸು ಪ್ರಾಬಲ್ಯ ಪಡೆಯುತ್ತದೆ. ಆಗ ನಾವು ಸೋಮಾರಿಗಳಾಗುತ್ತೇವೆ. ನಿರುತ್ಸಾಹಿಗಳಾಗಿ ಮಂಕು ಬಡಿದಂತೆ, ಯಾವ ಕೆಲಸ ಕಾರ್ಯಗಳಿಗೂ ಮುಂದಡಿ ಇಡುವುದಿಲ್ಲ. ಇನ್ನು ಕೆಲವೊಮ್ಮೆ ರಜಸ್ಸು ಮೇಲುಗೈ ಸಾಧಿಸಿದರೆ, ಮತ್ತೆ ಕೆಲವು ಸಲ ಇವೆರಡನ್ನೂ ಒಳಗೊಂಡ ಶಾಂತವಾದ ಸಮಚಿತ್ತ ಸ್ಥಿತಿ ನಮ್ಮದಾಗುತ್ತದೆ.

ಹೀಗೆ ಬೇರೆ ಬೇರೆ ವ್ಯಕ್ತಿಗಳನ್ನು ಸಾಮಾನ್ಯವಾಗಿ ಈ ಮೂರರಲ್ಲಿ ಒಂದು ಶಕ್ತಿ ಪ್ರಧಾನವಾಗಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಕೆಲವರ ನಡವಳಿಕೆಯ್ಲ್ಲಲಿ ನಿರುತ್ಸಾಹ, ಜಡತ್ವ ಮತ್ತು ಸೋಮಾರಿತನ ಕಂಡುಬಂದರೆ, ಇನ್ನು ಕೆಲವರಲ್ಲಿ ಚುರುಕುತನ, ಶಕ್ತಿ, ಸಾಮರ್ಥ್ಯ ಪ್ರಕಟವಾಗುತ್ತಿರುತ್ತದೆ.

ಕ್ರಿಯೆ ಮತ್ತು ನಿಷ್ಕ್ರಿಯೆ ಎರಡರ ಸಮತೋಲನದಿಂದ ಒಡಮೂಡಿದ ಮನೋಹರ, ಶಾಂತಚಿತ್ತ, ಸಭ್ಯ ನಡವಳಿಕೆಯ ಸಮಾಗಮವನ್ನು ಇನ್ನು ಕೆಲವರಲ್ಲಿ ನಾವು ಕಾಣುತ್ತೇವೆ. ಹೀಗಾಗಿ ಮನುಷ್ಯ, ಪ್ರಾಣಿ, ಗಿಡಮರಗಳಂತಹ ಎಲ್ಲ ಸೃಷ್ಟಿಯಲ್ಲೂ ವಿಭಿನ್ನ ಬಗೆಯ ಈ ಶಕ್ತಿಗಳು ಅಭಿವ್ಯಕ್ತವಾಗುತ್ತಿರುತ್ತವೆ~.

ನಾಯಕತ್ವ ವಹಿಸುವವರು ಈ ಶಕ್ತಿಗಳು ಅಥವಾ ಗುಣಧರ್ಮಗಳು ಯಾವುವು, ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಂಡಿರಬೇಕು. ಒಬ್ಬ ನಾಯಕ ತನ್ನ ಮನಃಸ್ಥಿತಿಯನ್ನು ಮಾತ್ರವಲ್ಲದೆ ತನ್ನ ಸುತ್ತಮುತ್ತಲಿನವರ ಮನಃಸ್ಥಿತಿಯನ್ನೂ ಅರಿತುಕೊಂಡರೆ ಆತ ಉತ್ತಮ ಮುಂದಾಳತ್ವ ವಹಿಸಬಹುದು ಮತ್ತು ಒಳ್ಳೆಯ ನಿರ್ವಹಣೆಯನ್ನೂ ಮಾಡಬಹುದು.

ವಿವೇಕಾನಂದರು ಈ ಶಕ್ತಿಗಳನ್ನು ಅತ್ಯಂತ ಪ್ರಾಯೋಗಿಕವಾಗಿ ವಿವರಿಸಲು ಪ್ರಯತ್ನಿಸಿದ್ದಾರೆ. ಒಬ್ಬ ಸಾತ್ವಿಕ ವ್ಯಕ್ತಿ ಅನುಕಂಪ, ನಿಸ್ವಾರ್ಥ, ಸಮಗ್ರ, ತಾಳ್ಮೆ, ಸಹನಶೀಲ, ನಮ್ರತೆಯಂತಹ ಸದ್ಗುಣಶೀಲ ಸಂಪನ್ನನಾಗಿರುತ್ತಾನೆ. ಚುರುಕುತನ, ಅಹಂಭಾವ, ಭಾವೋದ್ರೇಕ, ಮಹತ್ವಾಕಾಂಕ್ಷೆ, ಭೌತಿಕವಾದ, ಅಧಿಕಾರ ಆಕಾಂಕ್ಷೆಯಂತಹ ಗುಣಗಳು ರಜಸ್ಸಿನಲ್ಲಿ ಹೇರಳವಾಗಿರುತ್ತವೆ. ನಿಸ್ತೇಜ, ಅಪ್ರಾಮಾಣಿಕ, ನಿರಾಶಾವಾದಿ, ಮತ್ಸರಿ ಮತ್ತು ಬಹುಪಾಲು ಅನುಭೋಗಿ ಆಗಬಯಸುವವರನ್ನು ತಮೋ ಗುಣದವರೆಂದು ಗುರುತಿಸಲಾಗುತ್ತದೆ.

ವಿವೇಕಾನಂದರು ವಿಭಿನ್ನ ಸ್ಥಿತಿಗಳನ್ನು ಮುನ್ನಡೆಸುವವರನ್ನು ಆಯ್ಕೆ ಮಾಡಿಕೊಂಡಿದ್ದುದಷ್ಟೇ ಅಲ್ಲ, ಅವರೆಲ್ಲರಲ್ಲಿ ಅಂತರ್ಗತವಾಗಿದ್ದ ಸ್ವಭಾವಕ್ಕೆ ತಕ್ಕಂತೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯನ್ನೂ ನೀಡಿದ್ದರು.

ತಮ್ಮ ಸುತ್ತಲಿನವರನ್ನು ಉನ್ನತಿಗೇರಿಸಲು ಮುಂದಾದುದರ ಜೊತೆಗೆ, ನಿಧಾನವಾಗಿ ಅವರನ್ನು ಸತ್ವದತ್ತ ತಿರುಗಿಸುವ ಪ್ರಯತ್ನವನ್ನೂ ಮಾಡಿದರು. ಅಲ್ಲದೆ ದೇಶದ ಸಮಸ್ಯೆಗಳನ್ನು ಈ ಮೂರು ಸ್ವಭಾವಗಳ ನಿದರ್ಶನದ ಮೂಲಕ ವಿಶ್ಲೇಷಿಸಿದ್ದರು.

ಒಮ್ಮೆ ಮಾತುಕತೆ ವೇಳೆ ತಮ್ಮ ಅನುಯಾಯಿಯೊಬ್ಬರಿಗೆ ಅವರು ಹೀಗೆ ಹೇಳಿದ್ದರು: `ಪ್ರಪಂಚವನ್ನೆಲ್ಲಾ ಸುತ್ತಿದಾಗ ನನಗೆ ತಿಳಿದುಬಂದದ್ದೆಂದರೆ, ಇತರ ರಾಷ್ಟ್ರಗಳ ಜನರೊಂದಿಗೆ ಹೋಲಿಸಿದರೆ ಈ ದೇಶದ ಜನ ತೀವ್ರ ಗತಿಯ ತಮಸ್ಸಿನಲ್ಲಿ (ನಿರುತ್ಸಾಹ) ಮುಳುಗಿಹೋಗಿದ್ದಾರೆ.

ಹೊರ ನೋಟಕ್ಕೆ ಸಾತ್ವಿಕ (ತಣ್ಣನೆಯ ಮತ್ತು ಸಮಚಿತ್ತದ) ಸ್ಥಿತಿಯ ನಟನೆ, ಆದರೆ ಒಳಗೆ ಸಂಪೂರ್ಣ ಜಡತ್ವ... ಎಂತಹ ಸಾಹಸ ಪ್ರವೃತ್ತಿ, ಕೆಲಸದಲ್ಲಿ ತಾದಾತ್ಮ್ಯ, ಎಷ್ಟು ಹುಮ್ಮಸ್ಸು ಮತ್ತು ರಜೋ ಗುಣಗಳು ಪಾಶ್ಚಾತ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ!

ಆದರೆ ನಮ್ಮ ದೇಶದಲ್ಲಿ ರಕ್ತವು ಹೃದಯದಲ್ಲಿ ಹೆಪ್ಪುಗಟ್ಟಿ ಹೋಗಿದೆಯೇನೋ, ಇದರಿಂದ ಅದು ನರನಾಡಿಗಳಲ್ಲಿ ಸರಿಯಾಗಿ ಸಂಚರಿಸಲಾಗದೆ ಪಾರ್ಶ್ವವಾಯು ಬಡಿದು ಇಡೀ ದೇಹ ಜಡವಾಗಿ ಹೋಗಿದೆಯೇನೋ ಎಂಬಂತಾಗಿ ಹೋಗಿದೆ. ಇಂತಹ ಸ್ಥಿತಿಯಲ್ಲಿ ಜನರಲ್ಲಿರುವ ರಜೋ ಗುಣವನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಅಸ್ತಿತ್ವದ ಉಳಿವಿಗಾಗಿ ಹೋರಾಡಲು ಅವರನ್ನು ಸಮರ್ಥರನ್ನಾಗಿ ಮಾಡುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ~.

ಮತ್ತೊಂದು ಸಂದರ್ಭದಲ್ಲಿ ವಿವೇಕಾನಂದರು ಹೀಗೆ ಅಭಿಪ್ರಾಯಪಟ್ಟಿದ್ದಾರೆ: `ಭಾರತದಲ್ಲಿ ರಜೋ ಗುಣ ಬಹುತೇಕ ಕಾಣಸಿಗುವುದೇ ಇಲ್ಲ. ಸತ್ವದ ವಿಷಯಕ್ಕೆ ಬಂದರೆ ಪಾಶ್ಚಾತ್ಯ ದೇಶಗಳಲ್ಲಿ ಅದೇ ಸ್ಥಿತಿ ಇದೆ. ಎಲ್ಲಿಯವರೆಗೆ ನಾವು ನಮ್ಮ ತಮಸ್ಸನ್ನು ಹಿಡಿತಕ್ಕೆ ತೆಗೆದುಕೊಂಡು ಅದನ್ನು ರಜೋ ಗುಣದೊಂದಿಗೆ ಸಮ್ಮಿಳಿತಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಲೌಕಿಕವಾಗಿ ಉತ್ತಮವಾದುದನ್ನು ಅಥವಾ ಜೀವನ ಕಲ್ಯಾಣವನ್ನು ಸಾಧಿಸುವುದು ಅಸಾಧ್ಯ~.

ಒಂದುಶತಮಾನದ ಹಿಂದೆ ಸ್ವಾಮೀಜಿ ಬಣ್ಣಿಸಿದ್ದ ದೇಶದ ಸ್ಥಿತಿಗೂ ಇಂದಿನ ಸ್ಥಿತಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ನಮ್ಮ ದೇಶವನ್ನು ಆವರಿಸಿಕೊಂಡಂತಿರುವ ತಮೋ ಗುಣವನ್ನು ಹೋಗಲಾಡಿಸಿ, ರಾಷ್ಟ್ರದ ಬೆಳವಣಿಗೆಯ ಸಲುವಾಗಿ ಕೆಲ ರಜೋ ಗುಣಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಈಗ ಇದೆ. ಹೀಗೆ ಒಪ್ಪಿತ ರೀತಿಯಲ್ಲಿ ನಮ್ಮ ಸಮುದಾಯಗಳ ಜೀವನದಲ್ಲಿ ಸುಧಾರಣೆ ತಂದರೆ ಮಾತ್ರ, ವಿವೇಕಾನಂದರು ಹೇಳಿರುವಂತಹ ಸಮಚಿತ್ತ ಸ್ಥಿತಿಯತ್ತ ನಾವು ಮುಂದಡಿ ಇಡಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.