ಕ್ವಾಲಾಲಂಪುರ (ಪಿಟಿಐ): ಎಂಟು ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾದ ವಿಮಾನ ‘ಅಪಹರಣವಾಗಿರಬಹುದು’ ಎಂದು ಮಲೇಷ್ಯಾ ಅನುಮಾನ ವ್ಯಕ್ತಪಡಿಸಿದೆ.

‘ಈ ವಿಷಯದಲ್ಲಿ ವ್ಯವಸ್ಥಿತ ಪಿತೂರಿ ನಡೆದಿದೆ. ಸಂವಹನ ವ್ಯವಸ್ಥೆಯನ್ನು ಉದ್ದೇಶ ಪೂರ್ವಕವಾಗಿಯೇ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಅದು ದೂರಿದೆ.

ಪ್ರಧಾನಿ ಸುದ್ದಿಗೋಷ್ಠಿ: ವಿಮಾನ ಕಣ್ಮರೆಯ ನಂತರ ಇದೇ ಮೊದಲ ಬಾರಿಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್, ‘ವಿಮಾನದ ಬಗ್ಗೆ ಕಡೆಯ ಬಾರಿಗೆ ಉಪಗ್ರಹ ಮಾಹಿತಿ ಕಳೆದ ಶನಿವಾರ (ಮಾರ್ಚ್ 8) ಸ್ಥಳೀಯ ಕಾಲಮಾನ ಬೆಳಿಗ್ಗೆ 8.11ಕ್ಕೆ ದಾಖಲಾಗಿದೆ. ಇದನ್ನು ಗಮನಿಸಿದರೆ, ವಿಮಾನವು ರೆಡಾರ್ ಸಂಪರ್ಕದಿಂದ ತಪ್ಪಿಸಿಕೊಂಡ ನಂತರ ಸುಮಾರು ಏಳೂವರೆ ತಾಸುಗಳ ಕಾಲ ಹಾರಾಟ ನಡೆಸಿದೆ’ ಎಂದರು.

‘ವಿಮಾನವು ಮಲೇಷ್ಯಾ ಮತ್ತು ವಿಯೆಟ್ನಾಂ ಗಡಿಯ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮಧ್ಯೆ ಸಂಚರಿಸುತ್ತಿದ್ದಾಗ ಸ್ವಯಂಚಾಲಿತ ರೇಡಿಯೊ ಸಂಜ್ಞೆಗಳನ್ನು ಗ್ರಹಿಸಿ ಅದಕ್ಕೆ ಪ್ರತಿಕ್ರಿಯಿಸುವ ಸಾಧನ (ಟ್ರಾನ್ಸ್ಪಾಂಡರ್) ನಿಷ್ಕ್ರಿಯಗೊಂಡಿವೆ’ ಎಂದು ಶಂಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.