ಮಂಗಳವಾರ, ಮೇ 17, 2022
27 °C

ವಿವರಣೆ ಕೋರಿದ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ನ ಟೆನಿಸ್ ಟೂರ್ನಿಗೆ ಭಾರತದಿಂದ ಎರಡು ತಂಡಗಳನ್ನು ಕಳುಹಿಸಲು ಅವಕಾಶವಿದೆ. ಆದರೂ ಒಂದೇ ತಂಡವನ್ನುಏಕೆ ಕಳುಹಿಸುತ್ತಿದ್ದೀರಿ~ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಅಖಿಲ ಭಾರತ ಟೆನಿಸ್ ಸಂಸ್ಥೆಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಎಐಟಿಎ ಆಯ್ಕೆ ಸಮಿತಿಯು ಕೇವಲ ಒಂದು ತಂಡ ಕಳುಹಿಸಲು ನಿರ್ಧರಿಸಿತ್ತು. `ಜೊತೆಗೂಡಲು ಒಪ್ಪದ ಪೇಸ್ ಹಾಗೂ ಭೂಪತಿ ಅವರನ್ನೇ ಆಡುವಂತೆ ಏಕೆ ಕೇಳುತ್ತಿದ್ದೀರಿ? ಅವಕಾಶ ಇದ್ದರೂ ಏಕೆ ಎರಡು ತಂಡ ಕಳುಹಿಸುತ್ತಿಲ್ಲ? ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಆಡುವವರು ಯಾರು ಎಂಬುದು ಇನ್ನೂ ಏಕೆ ನಿಗೂಢ? ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆದ ಜೋಡಿಗೆ ಅಡ್ಡಬರುವುದೇಕೇ?~ ಎಂದು ಮಾಕನ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.ವಿವರಣೆ ಕೋರಿದ ಕ್ರೀಡಾ ಸಚಿವಾಲಯ: ಸದ್ಯ ಉದ್ಭವಿಸಿರುವ ವಿವಾದದ ಬಗ್ಗೆ ಮಂಗಳವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀಡುವಂತೆ ಕೋರಿ ಕ್ರೀಡಾ ಸಚಿವಾಲಯವು ಎಐಟಿಎಗೆ ಆರು ಅಂಶಗಳ ಒಂದು ಪತ್ರ ಬರೆದಿದೆ.

`ಒಲಿಂಪಿಕ್ಸ್‌ಗೆ ತರಬೇತಿ ಹಾಗೂ ಅರ್ಹತೆ ಪಡೆಯಲು ಆಟಗಾರರಿಗೆ ಸರ್ಕಾರ ಹಣ ನೀಡುತ್ತಿದೆ. ಆದರೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎರಡು ತಂಡಗಳು ಅರ್ಹತೆ ಪಡೆದಿದ್ದರೂ ಒಂದೇ ತಂಡವನ್ನು ಏಕೆ ಕಳುಹಿಸುತ್ತಿದ್ದೀರಿ?~ ಎಂಬ ಅಂಶ ಆ ಪತ್ರದಲ್ಲಿದೆ.`ಪೇಸ್ ಮತ್ತು ಭೂಪತಿ ಈ ಹಿಂದೆ ಹಲವು ಸಲ ಒಲಿಂಪಿಕ್ಸ್‌ನಿಂದ ಬರಿಗೈನಲ್ಲಿ ಮರಳಿದ್ದಾರೆ. ಮಾತ್ರವಲ್ಲ ನಾವಿಬ್ಬರು ಜೊತೆಯಾಗಿ ಆಡುವುದಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಎಐಟಿಎ ಮತ್ತೆ ಅವರನ್ನೇ  ಒಲಿಂಪಿಕ್ಸ್‌ಗೆ ಕಳುಹಿಸಲು ಏಕೆ ನಿರ್ಧರಿಸಿದೆ~ ಎಂದು ಕ್ರೀಡಾ ಸಚಿವಾಲಯ ಪ್ರಶ್ನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.