ಹರಿಹರ: ನಭೋಮಂಡಲದಲ್ಲಿ ಬುಧವಾರ ನಡೆದ ಶತಮಾನ ಪ್ರಮುಖ ಘಟನೆಯಾದ ಶುಕ್ರ ಸಂಕ್ರಮವನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನೂರಾರು ಜನ ವೀಕ್ಷಿಸಿ ಪುಳಕಿತಗೊಂಡರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರ ಸಂಕ್ರಮ ವೀಕ್ಷಣೆಗೆ ಬೇಕಾದ ವೈಜ್ಞಾನಿಕ ಕನ್ನಡಕ ಹಾಗೂ ಅದಕ್ಕೆ ಸಂಬಂಧಿಸಿದ ಸಾಹಿತ್ಯದ ಪುಸ್ತಕಗಳೊಂದಿಗೆ ಆಸಕ್ತ ವೀಕ್ಷಕರಿಗೆ ವಿವರಣೆ ಹೇಳುವದರ ಜತೆಗೆ ವೀಕ್ಷಣಗೆ ಅನುಕೂಲ ಮಾಡಿಕೊಟ್ಟರು.

ಕೆಜೆವಿಎಸ್ ರಾಜ್ಯ ಘಟಕದ ಸಹಕಾರ್ಯದರ್ಶಿ ಎಚ್. ಚಂದ್ರಪ್ಪ ಮಾತನಾಡಿ, ಭೂಮಿಗೆ ಕಾಣಿಸುವಂತೆ ಸೂರ್ಯನ ಮುಂದೆ ಶುಕ್ರ ಗ್ರಹ ಹಾದು ಹೋಗುವ ಪ್ರಕ್ರಿಯೆಗೆ ಶುಕ್ರ ಸಂಕ್ರಮಣ ಎನ್ನುತ್ತಾರೆ. ಇಂದು ನಡೆಯುವ ಸಂಕ್ರಮ ಶತಮಾನದ ಕೊನೆಯ ಸಂಕ್ರಮವಾಗಿದೆ. ಈ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಮೂಲಕ ವೈಜ್ಞಾನಿಕ ಮನೋಭಾವ ಜಾಗೃತಿ ಮೂಡಿಸುವ ಹಾಗೂ ಜನಸಾಮಾನ್ಯರಲ್ಲಿ ಇರುವ ಮೂಢ ನಂಬಿಕೆಗಳನ್ನು ದೂರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶ ಬಸವರಾಜ್ ಜಕಾತಿ, ನಗರಸಭೆ ಮಾಜಿ ಅಧ್ಯಕ್ಷ ಶಂಕರ್ ಖಟಾವ್ಕರ್, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಮಹಾತ್ಮಗಾಂಧಿ ಕ್ರೀಡಾಂಗಣ ಸಮಿತಿ ಸದಸ್ಯ ರಾಘವೇಂಧ್ರ, ದೂಡಾ ಮಾಜಿ ಸದಸ್ಯ ಎಚ್. ನಿಜಗುಣ, ಕ್ರೀಡಾಪಟುಗಳ, ಪೊಲೀಸರು, ಕಂಪೆನಿ ಕಾರ್ಮಿಕರು, ಶಿಕ್ಷಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶ್ರೀಸಾಮಾನ್ಯರು ಶುಕ್ರ ಸಂಕ್ರಮ ವೀಕ್ಷಿಸಿದರು.

ಕೆಜೆವಿಎಸ್ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಅಂಗಡಿ, ತಾಲ್ಲೂಕು ಘಟಕದ ಸಂಚಾಲಕರಾದ ಬಿ. ಮಂಜುನಾಥ, ರಿಯಾಜ್ ಅಹಮದ್ ಹಾಗೂ ಇತರರು ಇದ್ದರು.

ನಾಯಕನಹಟ್ಟಿ ವರದಿ
ಸಮೀಪದ ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಬುಧವಾರ ಹಲವು ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶುಕ್ರ ಸಂಕ್ರಮ ವೀಕ್ಷಿಸಿದರು.

ಬೆಳಿಗ್ಗೆ 6ಕ್ಕೆ ಸಂಸ್ಥೆಯ ಆವರಣದಲ್ಲಿ ದೊಡ್ಡ ದೂರದರ್ಶಕವನ್ನು ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಚಿಕ್ಕ ಚಿಕ್ಕ ದೂರದರ್ಶಕಗಳನ್ನು ವಿದ್ಯಾರ್ಥಿಗಳೇ ಆವರಣಕ್ಕೆ ತಂದು ಶುಕ್ರ ಗ್ರಹ ಹಾದು ಹೋಗುವ ಚಿತ್ರಣವನ್ನು ವೀಕ್ಷಿಸಿ ಗ್ರಾಪ್ ಮೂಲಕ ದಾಖಲಿಸುತ್ತಿದ್ದರು. ಶುಕ್ರ ಗ್ರಹ ಮತ್ತು ಸೂರ್ಯನ ಗಾತ್ರಗಳನ್ನು ಹಾಳೆಗಳ ಮೇಲೆ ಗುರುತಿಸಿಕೊಂಡು ಅದರ ಅನುಪಾತಗಳನ್ನು ಕಂಡು ಹಿಡಿದರು.

ಬೆಳಿಗ್ಗೆ ಐದು ಗಂಟೆಯಿಂದ ಹತ್ತು ಗಂಟೆ ಇಪ್ಪತ್ತು ನಿಮಿಷದವರೆಗೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಮೋಡಗಳು ವೀಕ್ಷಣೆಗೆ ಅಡ್ಡ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇದಲ್ಲದೇ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯ ಕೊಠಡಿಯಲ್ಲಿ ಅಂತರ್ಜಾಲದ ಮೂಲಕ ವಿವಿಧ ದೇಶಗಳಲ್ಲಿ ಜರುಗಿದ ಶುಕ್ರ ಸಂಕ್ರಮದ ವೀಕ್ಷಣೆಯನ್ನು ಪ್ರೋಜೆಕ್ಟರ್ ಮೂಲಕ ಪರದೆಯ ಮೇಲೆ ವೀಕ್ಷಿಸಿದರು. ಶತಮಾನದ ಕೊನೆಯ ಶುಕ್ರ ಸಂಕ್ರಮವನ್ನು ನೋಡಿ ವಿದ್ಯಾರ್ಥಿಗಳು, ಸಾರ್ವಜನಿಕರು ಆನಂದಿಸಿದರು.

ಈ ವೇಳೆ ಐಐಎಸ್ಸಿಯ ಸಿಬ್ಬಂದಿ ಗಜಾನನ, ಶ್ರೀನಿವಾಸ್, ಪ್ರಕಾಶ್, ರವಿ ವೀಕ್ಷಣೆಗೆ ಎಲ್ಲ ಸಿದ್ಧತೆ ಮಾಡಿದ್ದರು. ವಿದ್ಯಾ ವಿಕಾಸ್ ವಿಪ್ನೆಟ್ ಕ್ಲಬ್ನ ಸದಸ್ಯರು, ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.